Saturday 28 January 2012

ಲಂಡನ್ ಕತ್ತಲಲ್ಲಿನ ಮತ್ತೊಂದು ಪ್ರಪಂಚ

ರಾತ್ರಿ ಜೀವನ ಕೇವಲ ಹಾಸಿಗೆಗೆ ಸೀಮಿತವಾಗಿದ್ದ ಸಂದರ್ಭದಲ್ಲಿ, ಕಣ್ಣು ಮುಚ್ಚಿ ತೆರೆಯುವುದರೊಳಗೆ ಕಳೆದುಹೊಗುತಿತ್ತು, ಆದರೆ ಈ ವಿಚಿತ್ರ ಪ್ರದೇಶದಲ್ಲಿ ರಾತ್ರಿಯ ಜೀವನವೇ ಒಂದು ವಿಶೇಷ, ಇದ್ದ ಪ್ರಪಂಚ ಇಲ್ಲವೇನೋ, ಎಲ್ಲೋ ನೂತನ ಪ್ರಪಂಚದ ಸಾಕ್ಷಾತ್ಕಾರವಾದಂತೆ ಅನಿಸುವುದು ಸುಳ್ಳಲ್ಲ. ಬೆಳಕಲ್ಲಿ ಇಲ್ಲಿಯ ಜನರದ್ದು ಒಂದು ಮುಖವಾದರೆ, ಇರುಳಲ್ಲಿ ಮತ್ತೊಂದು ಮುಖ. ಅವರೊಡನೆ ನಾವೂ ಮುಖವಾಡ ಧರಿಸಿ ಅವರ ತಾಳಕ್ಕೆ ತಕ್ಕಂತೆ ಕುಣಿವುದಿದೆಯಲ್ಲ ಅದು ಮನಸೋಪ್ಪದ ಸತ್ಯದ ಗೌಪ್ಯ ಸುಳ್ಳು.

ಸಮತೆ ಸಾರುವಲ್ಲಿ ಈ ಕತ್ತಲಿನದ್ದು ವಿಚಿತ್ರ ಪಾತ್ರ, ಬೆಳಕು ಬೀರಿವ ಅಂತರದ ಪರದೆಯನ್ನ ಹರಿದು ಹಾಕುವ ಮೊನಚು ಕತ್ತಿ ಈ ಕತ್ತಲು. ಎಲ್ಲರಿಗೂ ಎಟಕುವ ಆಕಾಶದ ತಾರೆಗಳ ಬಾಚಿಕೊಳ್ಳುವ ಅವಕಾಶ ಕೊಟ್ಟರೂ, ಅದು ದೊಚಿದವರಿಗಷ್ಟೇ ದೊಚಿದಷ್ಟೂ ಲಾಭದಾಯಕ, ಮಿಕ್ಕವರಿಗೆ ಧಕ್ಕುವುದೇ ದೊಚಿದಷ್ಟು. 

ವಾಡಿಕೆ ಆದವರಿಗೆ ಇದು ಸಮುಧ್ರದ ಅಲೆಯೊಂದಿಗೆ ಸಾಗಿದಷ್ಟೇ ಸರಾಗವಾದ ಪಯಣ, ಹೊಸಬರಿಗೆ ಕೊಂಚ ಕಸಿವಿಸಿ ಉಂಟು ಮಾಡುವ ಅರ್ಥವಾಗದ ಗಾಯನ. ಇಷ್ಟಕ್ಕೆ ಇಲ್ಲಿನ ಸಂಸ್ಕೃತಿಯ ಹಿಡಿತ ಬಹಳ ಧೃಡವಾಗಿದೆ ಎಂದರೆ ಕೇವಲ ಅದು ಅರೆ ಬರೆ ಮೂರ್ಖರ ಚಿಂತನೆ ಅಷ್ಟೇ. ಸಡಿಲವಾದ ಸಮಾಜ ತನಗೇನು ಬೇಕೋ ಅದನ್ನು ತಾವೇ ನಿರ್ದರಿಸುವ ಒಂದು ಅವಕಾಶವನ್ನೂ ನೀಡುತ್ತೆ, ಸರಿಯಾಗಿ ಉಪಯೋಗಿಸಿದರೆ ಒಲಿತು; ಇಲ್ಲವೇ ಮತ್ತೊಮ್ಮೆ ಚಿಂತಿಸಬೇಕು ಕುಳಿತು.

ಕಾನೂನು ಪಾಲಿಸುವಂತೆ ಕೇಳಿಕೊಳ್ಳದು, ಆಜ್ಞೆಯಾಗಿ ಸಾರುತ್ತೆ, ಜನರ ಭಯವ ಬಳಸಿಕೊಂಡು ಜನರಿಗೆ ಭಯ ಹೊಗಲಾಡಿಸುತ್ತೆ. ಅದಕ್ಕಾಗಿಯೇ ಇರಬೇಕು ಇಲ್ಲಿಯ ಜನಕ್ಕೆ ಸ್ವಾಭಿಮಾನ ಉತ್ತುಂಗದಲ್ಲಿರುತ್ತೆ, ನಮ್ಮವರಿಗೆ ಇಂತವರ ಕಂಡರೆ ಪಾಪ ಕೋಪ ಬರುತ್ತೆ.

ನಾ ಎಚ್ಚೆತ್ತು ಕಳೆದ ಒಂದು ರಾತ್ರಿಯ ಕಥೆಯಿದು, ಗೋಚರವಾಗಿದು ಅಥವ ಅರ್ಥವಾಗಿದ್ದು ಇಷ್ಟೇ, ಹೇಳಬಯಸಿದ್ದೂ ಇಷ್ಟೇ. ನಿಲುವು ಬದಲಾದರೆ ಮುಂದೆ ಬರೆವುದು ಇದ್ದೇಇದೆ, ಇನ್ನೂ ಈ ಮಾಯಾನಗರಿಯ ಅರ್ಥ ಮಾಡಿಕೊಳುವುದಿದೆ.

                                                                                                                  -ರತ್ನಸುತ  

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...