Tuesday 21 May 2013

ಚಿಟ್ಟೆ














ಚಿಟ್ಟೆ ಸತ್ತು ಬಿತ್ತು 
ದುಂಬಿಗಳ ಹಾವಳಿಗೆ 
ಬಿತ್ತು ಚಿಟ್ಟೆ ಸತ್ತು 

ಅಮಲೇರಿಸುವ  ಮಕರಂದವಿತ್ತು 
ದುಂಬಿಗೆ ಆಸೆ ಹೆಚ್ಚಿತ್ತು 
ಚಿಟ್ಟೆಗೆ ಚಟ್ಟ ಕಟ್ಟಿತ್ತು 

ರೆಕ್ಕೆಯ ಬಣ್ಣ ಮಾಸಿತ್ತು
ಯಾರದ್ದೋ ಹೊಸಕಿನ  ಕೈಗೆ ಅಂಟಿತ್ತು 
ಬಣ್ಣ ತೊರೆದ ಬೆತ್ತಲ ದೇಹ ಹೆಣವಾಗಿತ್ತು 

ಚಿಟ್ಟೆ ಮುದ್ದಾಗಿತ್ತು 
ನೀಡಬೇಕಿತ್ತು ನಾ ಒಂದು ಮುತ್ತು 
ಜೀವ ಮರಳಿಸೋ ಶಕ್ತಿ ಮುತ್ತಿನ ತುತ್ತಿಗಿರಬೇಕಿತ್ತು 

ಹೂವು ದುಂಬಿಗಳ ತಡೆಯಬೇಕಿತ್ತು 
ಚಿಟ್ಟೆಗಳು ಚಿರಕಾಲ ಉಳಿಯಬೇಕಿತ್ತು 
ಹೇಗಾದರೂ ನಾನು ಹೂವಾಗಿ ಚಿಟ್ಟೆಗಳ ಮಡಿಲಾಗಬೇಕಿತ್ತು............ 

                                                                  --ರತ್ನಸುತ 

2 comments:

  1. ಒಳ್ಳೆಯ ಸಹೃದಯೀ ಕವಿತೆ, "ಜೀವ ಮರಳಿಸೋ ಶಕ್ತಿ ಮುತ್ತಿನ ತುತ್ತಿಗಿರಬೇಕಿತ್ತು " ಆಶಯ ನೆಚ್ಚಿಗೆಯಾಯಿತು.

    ReplyDelete
    Replies
    1. ಧನ್ಯೋಸ್ಮಿ ಬುದ್ದಿ :)

      Delete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...