Thursday 24 October 2013

ದ್ಯಾವ್ರು ಬೇಜಾರಾಗ್ಬಾರ್ದು!!!

ದ್ಯಾವ್ರೆಲ್ಲಿ ಕಣ್ಮುಚ್ಚಿ ಕುಂತವ್ನೋ ?
ಗುಡಿಯೊಳ್ಗೆ ಮಡಿಕಟ್ಟಿ ಮಲ್ಗವ್ನೋ ?
ಕೈ ಮುಗ್ದ್ರೆ ಕಣ್ಬಿಟ್ಟು ನೋಡ್ತಾನ ?
ಗಂಟೇನ ಬಾರ್ಸಿದ್ರೆ ಏಳ್ತಾನ ?
ಐನೊರಿಗೊಂದ್ಹತ್ತು, ಹುಂಡಿಗೆ ಇಪ್ಪತ್ತು 
ಕಡ್ಡಿ-ಕರ್ಪೂರ, ಹೂವು, ಚೂರ್ಗಾಯಿ 
ಹಾಕಿದ್ರೆ ಏನಾರ ಖುಸಿ ಪಡ್ತಾನ ? ಇಲ್ಲ 
ನಮ್ಮಂತೋರ್ ಸಿನಿಮಾನ ಬಿಟ್ಟಿ ನೋಡ್ತಾನ ?

ಬಂದೋರು ಹೋದೋರು ಎಷ್ಟೊಂದು ಮಂದಿ 
ಪರ್ಕಿಂಗು ಫುಲ್ಲಾದ್ರೂ ಇನ್ನೂ ವೇಟಿಂಗು 
ಮೈಲಿಗೂ ಉದ್ದದ ಕ್ಯುವ್ವಲ್ಲಿ ನಿಂತು 
ಏನೇನೋ ಚಿತ್ರ-ವಿಚಿತ್ರ  ಡ್ರೀಮಿಂಗು 
ಹೊಸ ಚಪ್ಲಿ ಚಿಂತೆ ಆಚೆ ಬಿಟ್ಟೋರ್ಗೆ 
ಒಡವೆ ಮೇಲ್ಚಿಂತೆ ಹಾಕಿಕೊಂಡೋರ್ಗೆ 
ಜೀವ್ನಕ್ಕೆ ದಾರಿ ಚಪ್ಲಿ ಕಾಯೋನ್ಗೆ 
ಲಕ್ಷ್ಮಿನೇ ಕಂಡ್ಳು ಕತ್ರಿ ಹಾಕೋನ್ಗೆ 

ನಾಲಿಗೆ ತುಪ್ಪಕ್ಕೆ ಚಪ್ಪರಿಸ್ತಿದ್ರೂ 
ದೀಪಕ್ಕೆ ಸುರ್ದು ಕಡ್ಡಿ ಗೀರೌರೆ 
ಎಣ್ಣೆ ಆದ್ರೇನು, ತುಪ್ಪ ಆದ್ರೇನು  
ಉರಿತಾದೆ ಬತ್ತಿ ಬೆಂಕಿ ಹಚ್ಚಿಟ್ರೆ 
ನಗ್ನಗ್ತಾ ಎಲ್ಲೋ ಆಡ್ತಿತ್ತು ಹೂವ 
ಯಾಮಾರ್ಸಿ ತಂದು ಕಟ್ಟಿ ಹಾಕೌರೆ 
ಮುಡಿಯೇರಿ ಕುಂತೈತೆ ಹಿಂಗಂದ್ಕೊಂಡು 
"ಎಡ್ಗಡೆ ಬೀಳ್ಸಪ್ಪ, ಓಹ್ ನನ್ನ ದ್ಯಾವ್ರೆ!!"

ಹೊಗೆ ಎದ್ದು ಗುರ್ತು ಹಿಡಿಯೋದೇ 
ಕಷ್ಟ ಆಗೈತೆ ಈ ಕಲ್ಲು ದ್ಯಾವ್ರ್ಗೆ 
ಒಂದ್ಚೂರು ತಾಳಿ ತಳ್ಳಾಡ್ಬ್ಯಾಡಿ 
ನಿಲ್ಲೋಕೆ ಬಿಡ್ರಪ್ಪ ಗುರ್ತ್ಹಿಡಿಯೋ ವರ್ಗೆ 
ಕುಂಕ್ಮಕ್ಕೂ ಕಾಸು ಕೊಡ್ಬೇಕು ಚಿಟ್ಕೆಗೆ 
ತೀರ್ಥಾವ ಕುಡ್ದು ಕಾಲ್ಕಿತ್ತೆ ಮೇಲ್ಗೆ 
ಅಲ್ಲೊಂದು ಕ್ಯುವ್ವು ಪೊಂಗಲ್ಲು, ಮೊಸ್ರನ್ನ 
ಕಾದಿದ್ಕೂ ಮೋಸಿಲ್ಲ ನನ್ನಂತೋರ್ಗೆ 

ಹಬ್ಬ ಬಂತಂದ್ರೆ ಓವರ್ ಟೈಮು 
ಮಲ್ಗೋಕೂ ಬಿಡ್ರಪ್ಪ ಸ್ವಲ್ಪ 
ಫ್ಯಾಮಿಲಿ ಜೊತೆಯಲ್ಲಿ ವರ್ಲ್ಡ್ ಟೂರು ಹೋಗ್ಬರ್ಲಿ 
ಪರ್ಮಿಷನ್ ಕೊಟ್ನೋಡಿ ಪಾಪ  
ದ್ಯಾವ್ರ್ಗೂ ಇರ್ಬೇಕು ವರ್ಕು ಟೆನ್ಶನ್ನು 
ವೀಕೆಂಡು ರಜೆ ಕೊಟ್ರೆ ವಾಸಿ 
ನನ್ನತಿರೇಕಕ್ಕೆ ಹಿಂಗೆಲ್ಲ ಬರ್ದೆ 
ಬೇಜಾರಾದೋರು ಕ್ಷಮ್ಸಿ 

                                          --ರತ್ನಸುತ 

1 comment:

  1. ಒಂಥರಾ ಅನ್ಸುದ್ರೂ ಚೆನ್ನಾಗಯ್ತೆ! ಭಾಷೆ ಬಳಸಿಕೊಂಡಂತೆ, ಕಾವ್ಯ ಬರೆಸಿಕೊಂಡಂತೆ. ದೇವರ ಅಸ್ಥಿತ್ವ ಪ್ರಶ್ನಿಸುವ ಗೋಜಿಗೆ ಹೋಗದೆ, ಕಾವ್ಯ ಅವನ ಸುತ್ತಲ ಮೇಲಾಟಗಳನ್ನು ಅಣಕಿಸಿದ್ದು ಚೆನ್ನಾಗನ್ನಿಸಿತು. ಮುಂದುವರೆಸಿ.

    - ಪ್ರಸಾದ್.ಡಿ.ವಿ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...