Monday 6 January 2014

ರಾತ್ರಿ ಹಾಡು

ಗಿಟಾರಿನ ತಂತಿಯ ಮೇಲೆ 
ನಿನ್ನ ಸೋಕಿದ ಬೆರಳನು ಇಟ್ಟು 
ಸುಮ್ಮನೆ ಮೀಟಿಕೊಂಡೆ ನೋಡು 
ಹಾಡಿಗೂ ಮೂಡುವ ಆಸೆಯಾಯ್ತು 

ಕಿಟಕಿಯ ಆಚೆ ದೂರದ ಚಂದ್ರ 
ತಾರೆಗಳೆಲ್ಲವ ಒಟ್ಟಿಗೆ ಕರೆದು 
ಕೈಯ್ಯ ಹಿಡಿದು ಎಳೆದು ಕೂರಿಸಿ 
ಆಲಿಸಿ ಉಳಿದನು ಮೈಯ್ಯ ಮರೆತು 

ಬಾನಲಿ ಕತ್ತಲು ಬೆಳದಿಂಗಳಿಗೂ 
ನನ್ನ ಅಂಗಳದಲ್ಲೇ ಸರಸ 
ದಾರಿ ತಾಪ್ಪಿದ ತಿಳಿ ತಂಗಾಳಿಗೂ 
ಖಾಯಂ ಆಯಿತು ಇಲ್ಲೇ ಕೆಲಸ 

ದೀಪದ ಬಳುಕಿಗೆ ಉಸಿರಿನ ತಾಳ 
ನೆರಳಿಗೂ ಇದ್ದೆಡೆ ಇರದ ಅಮಲು 
ಬಾಕಿ ಎಲ್ಲವೂ ಹೇಳಿ ಮುಗಿಸಿದೆ 
ಉಳಿದವುಗಳಿಗೆ ನಿಲ್ಲದ ತೊದಲು 

ರಾತ್ರಿ ಹಾಡಿಗೆ ಕಾರಣ ಬೇಕೆ?
ಕಣ್ಣು ಹೊರಟಿತು ಕನವರಿಸೋಕೆ 
ನಿಲ್ಲುವೆ ನಿನ್ನ ನಿಲುಗಡೆಯಲ್ಲಿ 
ಲೋಟ ಕಾಫಿ ಕುಡಿಯುವುದಕ್ಕೆ 

                             -- ರತ್ನಸುತ 

1 comment:

  1. "ಬಾಕಿ ಎಲ್ಲವೂ ಹೇಳಿ ಮುಗಿಸಿದೆ
    ಉಳಿದವುಗಳಿಗೆ ನಿಲ್ಲದ ತೊದಲು"
    ವಾರೇವ್ಹಾ...

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...