Friday, 16 March 2012

ಕವಿಯ ರಾಜ ಮಾರ್ಗ


ಆಧ್ಯಾತ್ಮದ ಹಾದಿ ಹಿಡಿದ ಪಯಣದಲಿ ಏಕಾಂತ
ಭಾವಾತ್ಮದ ಜೊತೆ ಹಿಡಿಯಲು ಭಾವನೆಗಳು ಜೀವಂತ
ಪರಮಾತ್ಮನ ಸೇರಲೆಂದೆ ವರವಾಯಿತು ಸಾವಂತ
ಎಲ್ಲವೂ ಕೂಡುವಲ್ಲಿ ಆದನೊಬ್ಬ ಕವಿಯಂತ

ಯಾರೂ ಕರೆದಿಲ್ಲ ಅವನ ಈವರೆಗೂ ಕವಿಯೆಂದು
ಕೇಳುವವರೇ ಎಲ್ಲ ಅವನ ಬಾಳಿನ ಗುರಿ ಏನೆಂದು
ಅವನಿಗೆ ಬರೆವುದ ಬಿಟ್ಟು ಬೇರೇನೂ ತಿಳಿದಿಲ್ಲ
ಅವನ ನಿರಾಯಾಸ ಯತ್ನವ ಪ್ರತಿಭೆ ಅನ್ನುವವರಿಲ್ಲ

ಅವನಿಗೆ ತಿಳಿಯದೆ ಬಡವನಾಗುತ್ತ ಹೋದ
ಇನ್ನು ಘಾಡವಾಗಿ ಗೋಚರಿಸಿ ಜಗತ್ತಿಗೆ
ಹೀಗಿದ್ದರು ಹೇಗಾದರೂ ಹೊಂದಿಸಿ ಬಿಡುತಿದ್ದ
ಬೆಲೆ ಕಟ್ಟ ತೊಡಗುತ ನಿಮಿಷದ ಪುರುಸೋತ್ತಿಗೆ

ಕಾರಣಗಳ ಹುಡುಕುವಲ್ಲಿ ಅವ ಕೊಂಚ ಸೋಮಾರಿ
ಕಾರಣವಿರದೆ ಬರೆವುದೆ ರೂಢಿಯಾಗಿರಲು
ಹಾಗೂ ಸಿಕ್ಕರೆ ಅಂದಿಗೆ ಕೆಟ್ಟಂತೆ ಬೇರೆ ಕೆಲಸ
ಹಸಿದ ಹೊಟ್ಟೆ ಕಾಯ ಬೇಕೇ ರೊಟ್ಟಿ-ಬೆಣ್ಣೆ ಸಿಗಲು?

ಕವಿಯಾಗುವ ನಿಷ್ಚಯಕೆ ಇರದಿದ್ದರೂ ಬೆಂಬಲ
ಕಾವ್ಯ ಮಾತ್ರ ಏಕೆ ಹೊಮ್ಮಿ ಬರಲು ಕಾದಿದೆ?
"ಹೇಗಾದರೂ ಈ ಒಗಟಿಗೆ ಉತ್ತರ ಹುಡುಕಲೇ ಬೇಕು"
ಮುಂದುವರೆದ ಸಾಲುಗಳಿಗೆ ಕರೆದು ಹೇಳಿದೆ

ನಿಮಗೆ ಬಿಟ್ಟ ಆಯ್ಕೆ, ನನ್ನ ಹೇಗಾದರೂ ಕರೆಯಬಹುದು
ಕರೆಸಿಕೊಳ್ಳುವುದಷ್ಟೇ ನನಗೆ ಅನಿವಾರ್ಯ ಕಸುಬು
"ಅವ" ಬೇರೆ ಯಾರೂ ಅಲ್ಲ, ನನ್ನದೊಂದು ಛಾಯೆ ಮಾತ್ರ
ನನ್ನದೇ ಪ್ರಶ್ನೆಗವನೆ ನನ್ನದೆ ಜವಾಬು........


                                                  -ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...