Saturday 22 September 2012

ಪ್ರೀತಿಯ ತಾತ!!!











ಆತನ ಕೈಗಳಷ್ಟೇ ಒರಟಾಗಿದ್ದವು
ಎದೆ, ಅದೇ ಬೆಚ್ಚನೆ ಗೂಡು
ದಿನೇ - ದಿನೇ ಹೆಚ್ಚುತ್ತಿದ್ದ ಪ್ರೀತಿ
ನವೀಕರಿಸಿದ ಹಳೆಯ ಹಾಡು

ನಿರ್ಬಂಧಗಳಲ್ಲೊಂದು ಮುಗ್ಧ ಸ್ವಾರ್ಥ
ಮಾತು ತಪ್ಪಿದರೆ ಕಿವಿ ಹಿಂಡುತ
ಅಳುವಿಗೊಂದು ಸಾಂತ್ವನ ಬಿಗಿ ಅಪ್ಪುಗೆ
ಮತ್ತೊಂದು ಚೇಷ್ಟೆಗದು ಅನುಮತಿ ಕೊನೆಗೆ

ಬಿಟ್ಟುಕೊಡುತಿದ್ದ ಆಗಾಗಿನ ಹಠ
ಮರೆತಲ್ಲಿ ಮರೆಸಿಟ್ಟ ತನ್ನೆಲ್ಲ ಚಟ
ಜೇಬಿನಲಿ ಜಣಗುಡುವ ದೊಡ್ಡ ಮೊತ್ತ
ಸಿಕ್ಕಷ್ಟೂ ಇಷ್ಟಪಟ್ಟವರಿಗಿಡುತ

ದೊಡ್ಡತನ ಬೀರುವ ಅನುಭವದ ಆಸ್ತಿ
ಅಲ್ಪತನ ಕಿಂಚಿಷ್ಟೂ ಇರದ ವ್ಯಕ್ತಿ
ಬಯಸುವ ಮುನ್ನವೇ ಬಯಕೆಗಳನ್ನರಿವ
ಬೆನ್ನೆಲುಬಿನೊಳ ಹೊಕ್ಕ ದೈತ್ಯ ಶಕ್ತಿ

ಭಾವನೆಯ ಬಿಗಿದಿಟ್ಟ ಭಾವುಕ ಜೀವಿ
ಮಗುವೊಡನೆ ಮಗುವಾಗೋ ದಡ್ಡ ಮೇದಾವಿ
ಮನೆಯೊಳಗೆ ದೇವರು, ಹೊರಗೆ ಕಲಶ
ಹೆದರಿಸಿದರೂ ಆತ ಗುಂಡಿರದ ಕೋವಿ

ಹೆಗಲ ಮೇಲೆ ಹೊತ್ತ ಹೆಗಲಿಗೆ ಈ ಹೆಗಲು -
- ಸಮನಾದರೇನಂತೆ ನಾ ಮಗುವೆ ಅವಗೆ
ತಾತನಿಗೆ ಮೊಮ್ಮಗನ ಚಿಗುರು ಮೀಸೆ ಕಂಡು ಖುಷಿ
ವಂಶ ಗೆಲ್ಲಿಸಿದ ಖುಷಿ ಮೊಮ್ಮಗನಿಗೆ

ಕಾಲಕೂ ವಯ್ಯಸ್ಸಾಗಿ, ಹಸಿರೆಲೆ ಹಣ್ಣಾಗಿ
ಇನ್ನೂ ಬೀರುತಿದೆ ಮಂದಹಾಸ
ಹಿಡಿದು ಆತನ ಕೈಯ್ಯ ತುಸು ದೂರ ನಡೆದರೆ
ಆಗದೇ ಅದುವೇ ಒಂದು ಸುಪ್ರವಾಸ?!!

ಕಿವಿ  ಕೊಂಚ ಸವೆದಿದೆ, ಸ್ವೀಕಾರ ಕುಗ್ಗಿದೆ
ಆದರೂ ಚಾಚಿದ ಕೈ ನೀಡಲಿಕ್ಕೆ
ತಾತನ ಹೆಜ್ಜೆ ಗುರುತನ್ನು ಹಿಂಬಾಲಿಸುವೆ
ಮಾನವೀಯ ಗುಣಶೀಲ ಮನುಜನಾಗಲಿಕ್ಕೆ.........

--ರತ್ನಸುತ

5 comments:

  1. soooper maga....baLa ishta aithu....

    ReplyDelete
  2. ಓ ರತ್ನಸುತ, :)
    ಬೆರಗಾದೆ ಕಂಡು ನಿನ್ನೀ ತಾತನ ಮೇಲಿರುವ ಅಭಿಮತ, :)
    ಸಾಲು ಸಾಲಲ್ಲೂ ಕಾಣುತ್ತಿದೆ ನಿನ್ನ ತಾತನ ಮೇಲಿನ ಪ್ರೀತಿ,
    ಆಗಲಿ ಇವು ಮು೦ದಿನ ಪೀಳಿಗೆಗೆ ನೀತಿ, :)
    ಸಾಗಲಿ ಸದಾ ಈ ನಿನ್ನ ಪ್ರಯತ್ನ,
    ಯಾಕೆಂದರೆ ಇವೆಲ್ಲ ಬದುಕಿನ ಅಮೂಲ್ಯವಾದ ರತ್ನ.

    -ಸಹನವಿನಯ್

    ReplyDelete
    Replies
    1. Thanks SahanaVinay... ninnallina kaavyaathmaka gunavanna hora hommisida nanna kavanave dhanya... :)

      Delete
  3. ಭರತ್ ತಾತನ ನೆನೆದು ಬರೆದ ಈ ಕವನ ನಿಜಕ್ಕೂ ನನ್ನನ್ನು ಭಾವಪರವಶನನ್ನಾಗಿಸಿತು... ಬಹಳ ಚನ್ನಾಗಿ ಈ ಬಾಂಧವ್ಯಕ್ಕೆ ಪದಗಟ್ಟಿನಲ್ಲಿ ಕವನಿಸಿದ್ದೀರಿ,,,ಶುಭವಾಗಲಿ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...