ಕಾವ್ಯದ ಪ್ರೀತಿ, ಪ್ರಾಸದ ಕ್ರಾಂತಿ
ಹಾಡಾಗಿ ಹೊಮ್ಮಿದೆ
ಹಾಡುತ ಸೋಲಿಸುವವಳೆಲ್ಲೆಂದು ಕೇಳಿದೆ
ಕಾವ್ಯದ ಪ್ರೀತಿ, ಪ್ರಾಸದ ಕ್ರಾಂತಿ
ಹಾಡಾಗಿ ಹೊಮ್ಮಿದೆ {೧}
ಆಸೆಯ ದೋಣಿಯಲಿ ಹೂವಿನ ಹಾಸಿಗೆಯ
ಮಡಿಲಲಿ ಕನಸಿಗೆ ಜಾಗವು ಎಲ್ಲಿದೆ
ಒಂಟಿ ಯಾನದಲಿ ಪ್ರಾಯದ ಬಿಂದಿಗೆಯು
ಅರೆ-ಬರೆ ತುಂಬಿದೆ, ಕುಲುಕಲು ಚೆಲ್ಲದೇ?
ಕಡಲಿಗೂ ಇಂಥ ಒಂಟಿ ದೋಣಿ ಯಾನ ಬೇಡವಾಗಿದೆ.......
ಕಾಣದ ಶಾಂತಿ, ಕಾಮನೆ ಮೀಟಿ
ಮೀನಾಗಿ ಹೋಗಿದೆ
ಮನದ ಸರೋವರವು ಈಜುಗೊಡದೆ ತೆರೆದಿದೆ
ಕಾವ್ಯದ ಪ್ರೀತಿ, ಪ್ರಾಸದ ಕ್ರಾಂತಿ
ಹಾಡಾಗಿ ಹೊಮ್ಮಿದೆ {೨}
ಕಲ್ಲಿಗೆ ಸ್ಪರ್ಶಗಳ ಸ್ಪಂದನೆಯಾಗಿರಲು
ಸೋಕದ ಬೆರಳಿಗೆ ಕಾಯುತ ನಿಂತಿದೆ
ನಾಚುವ ಕಲೆಯನ್ನು ತಾ ಕಲಿತಾಗಿರಲು
ನಿನ್ನಯ ಸೋಕಿಗೆ ಕರಗಿ ನೀರಾಗಿದೆ
ಹೆಸರಿಗೆ ಮಾತ್ರವಲ್ಲಿ ಕಲ್ಲು ಶಿಲೆಯ ಗುರುತು ಉಳಿದಿದೆ.....
ನೆರಳಿಗೆ ನಾಟಿ, ನನ್ನನೆ ದಾಟಿ
ನಿನ್ನಲ್ಲಿ ಸೇರಿದೆ
ಸವಿದ ಜೆನಿಗೂ ಸಿಹಿ ನೀನೆಂದು ಸಾರಿದೆ.....
ಕಾವ್ಯದ ಪ್ರೀತಿ, ಪ್ರಾಸದ ಕ್ರಾಂತಿ
ಹಾಡಾಗಿ ಹೊಮ್ಮಿದೆ {೩}
--ರತ್ನಸುತ
No comments:
Post a Comment