ಆಳೋ ಪ್ರಭುಗಳೇ ಒಳಗಾಗಿರುವರು ಶಂಕೆಗೆ
ಸನ್ಮಾರ್ಗ ತೋರುವವರೇ ಹಾರಿದರು ಬೆಂಕಿಗೆ
ದೇಶವೇ ತತ್ತರಿಸಿದೆ ಭ್ರಷ್ಟಾಚಾರ ಸೋಂಕಿಗೆ
ಪ್ರತಿಪಕ್ಷಗಳು ಆಂಟಿವೆ ಆರೋಪದ ಕೊಂಕಿಗೆ
ರೈತನೋ ನಿದ್ದೆಗೆಟ್ಟ ಬೇಸಿಗೆ ಬಿಸಿ ಕ್ರಾಂತಿಗೆ
ಆಶ್ರಮಗಳು ದುಬಾರಿ ಬೆಲೆ ನಿಯೋಜಿಸಿದವು ಶಾಂತಿಗೆ
ಗಡಿಯಲ್ಲಿ ಗಡಿಬಿಡಿ ದೇಶ-ಭಾಷೆ ಉಳಿವಿಗೆ
ಗುಡಿಯಲ್ಲಿ ಗೊಡ್ಡು ಪೂಜೆ, ತುಂಬು ಹೊಟ್ಟೆ ಹುಂಡಿಗೆ
ಮನುಜ ಮನ ಹೊಲಸಾಗಿದೆ ಕಾಮನೆಯ ಧೂಳಿಗೆ
ಹೊಸ ರೋಗಗಳ ಸೇರ್ಪಡೆ ಇದ್ದವುಗಳ ಸಾಲಿಗೆ
ನಿತ್ಯ ಪೂಜೆ, ಹೋಮ, ಹವನ ಪಾಪದ ವಿನಾಯ್ತಿಗೆ
ದೇವರೂ ಕಿವುಡನಾದ ಪ್ರಾಮಾಣಿಕ ವಿನಂತಿಗೆ.......
-- ರತ್ನಸುತ
ಅದ್ಭುತ!!
ReplyDeleteನಮ್ಮ ಇಂದಿನ ಪಾಪ-ಜಗತ್ತಿಗೆ ಹಿಡಿದ ಕನ್ನಡಿಯಂತಿದೆ ನಿಮ್ಮ ಕವಿತೆ. ಪದಗಳ ಬಳಕೆ ಮತ್ತು ವಿಷಯದ ವ್ಯಾಖ್ಯಾನ ಅತ್ಯಂತ ಪ್ರಭಾವಶಾಲಿಯಾಗಿದೆ ಸರ್..
ಲೋಕದ ಡೊಂಕುಗಳ ನೇರಾ ನೇರಾ ಅನಾವರಣ. ಪ್ರತಿ ಸಾಲೂ ಚಿಂತನಾರ್ಹ.
ReplyDeletehttp://badari-poems.blogspot.in
ಧನ್ಯವಾದಗಳು ಪ್ರಶಾಂತ್ ಹಾಗು ಬದರಿ ಸರ್..... ನನ್ನ ಹುರುಪು ಹಾಗು ಜವಾಬ್ಧಾರಿ ಮತ್ತಷ್ಟು ಹೆಚ್ಚಿಸಿದ್ದೀರಿ :)
ReplyDelete