Friday, 26 April 2013

ತೆಲುಗು ಹುಡುಗಿಗೆ, ಕನ್ನಡ ಪ್ರೇಮ ನೆವೇದನೆ

ನೀ ನಕ್ಕಾಗ, ನಿನ್ನ ನಗುವಿನಷ್ಟೇ ಆ ಮುಖವೂ ಮುದ್ದು
ಹೇಳಬೇಕನಿಸಿದ್ದುಂಟು ಈ ವಿಷಯ ನಿನಗೇ ನಾ ಖುದ್ದು
ಆದರೂ ಮೂಖಾಗಿಸಿದವು ಮರೆಯಾಗಿ ಮಾತು ಕದ್ದು
ಏನೆಂದು ಬಣ್ಣಿಸಲಿ, ಮನ ಬಳಲುತ್ತಿತ್ತು ಎದ್ದು-ಬಿದ್ದು
ಆ ಕ್ಷಣಕೆ ಸಮಾದಾನಕರ ಕಾರಣಗಳು ರದ್ದು
ಕೇವಲ ನನ್ನೊಳಗೆ ಕಿತ್ತಾಟ ಸದ್ದು
ನೀ ಮೆಚ್ಚುವ ಹಾಗೆ ನೀನೆ ನನ್ನ ತಿದ್ದು
ಆಗಲೇ ಮೆರೆಯ ಬಲ್ಲೆ ನಿನ್ನ ಗೆದ್ದು ......
ಪದ್ದು....  ಈ ಕವನ ಇಷ್ಟವಾಗದಿದ್ದರೆ ನನ್ನ ನೋಯಿಸ ಬೇಡ ಎದೆಯ ಒದ್ದು...
ನನಗೆ ತೆಲುಗುಲೋ ಬರೆಯಲು ರಾದು.... ಪ್ಲೀಸ್ ಅಲಾ ಚೂಡೋದ್ದು......

                                                                                   --ರತ್ನಸುತ

1 comment:

  1. "ನೀ ಕೋಸಮೇ ಭರತೂ ನೇನು ನೇರ್ಚಿಕೊಂಟುನ್ನಾನು ಕನ್ನಡಮೂ. ಲವ್ ಚೇಸೇಕಿ ಒದ್ದು ಲಾಂಗ್ವೇಜು ಪ್ರಾಬ್ಲಮ್ಮು" ಎಂದು ನಿಮಗೆ ಆಕೆ ಹೇಳಿ ಕಳುಹಿಸಿದ್ದಾಳೆ ಭರತ ಮುನಿಗಳೇ...

    ReplyDelete

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...