ಅದೊಂದು ಅನರ್ಥ, ಅಪೂರ್ಣ, ಆನಂದಮಯ ಅನುಭವ
ವರ್ಣನೆಗೆ ನಿಲುಕದ ಅಪೂರ್ವ ಕಲರವ
ಹೇಗೆಂಬುದೇನು ಹೇಳಲಾರೆ
ಹಾಗೆ ಮೊದಲಾಗಿ ಕೊನೆಗೊಂಡ ರಮಣೀಯ ಸಂಭವ
ನಾವಿಬ್ಬರು ಮಾತನಾಡಿಲ್ಲ ಅಲ್ಲಿ
ಎದುರಿಗಿತ್ತು ಪ್ರತಿಬಿಂಬದ ಕನ್ನಡಿ
ನನ್ನಿಂದ ಹೋರಡಿದ್ದು ಅವನಿಗೆ ಪ್ರತಿಧ್ವನಿ
ಅವನಿಂದ ಕೇಳಿಸಿತು ನನ್ನದೇ ಸ್ವಂತ ದ್ವನಿ
ಕಪ್ಪು- ಬಿಳಿ ಚಿತ್ರದಂತಿತ್ತು ನೆನಪುಗಳು
ರೆಪ್ಪೆ ಬಡಿದರೆ ಜಾರಬಹುದಿತ್ತು ಕಣ್ಗಳು
ಅಷ್ಟು ಭಾರದ ಕನಸುಗಳ ತುಂಬಿಕೊಂಡೆವು
ಸಾಧನೆಯ ಸಲುವನ್ನು ಅದರೊಳಗೆ ಕಾಣಲು
ಸಾಗಿತ್ತು ಬೇಕು-ಬೇಡದ ಅಂಧ ಚರ್ಚೆ
ಒಂದಷ್ಟು ಹೊತ್ತು ಹಳೆ ಕೆಲಸದ ವಿಮರ್ಶೆ
ಮರೆತದ್ದು ಒಂದೇ, ಸಮಯದ ಪೀಕಲಾಟ
ಕಂಡದ್ದು ಮಾತ್ರ ವರ್ಣಮಯ ಪರಿಶೆ
ನಾ ಕೊಟ್ಟೆ ಅವನಿಗೆ ಕಲೆಗೊಂದು ಗುರುತು
ಮಾತಾಡಿಕೊಂಡೆವು ಇಬ್ಬರನು ಕುರಿತು
ಅವನಿಟ್ಟ ಪ್ರತಿಕ್ರಿಯೆಗೆ ಬೆಲೆ ಕಟ್ಟಲಾರೆ
ಒಬ್ಬರಿಗೊಬ್ಬರು ಅಲ್ಲಿ ಸೋಲಬೇಕಿತ್ತು
ತುಂಬಿದ ಮನಸುಗಳು ಮಾತಲ್ಲಿ ಧ್ವನಿಸಿ
ದೂರದಲೇ ಉಳಿದರೂ ಹಾಗೊಮ್ಮೆ ಬಳಸಿ
ಮೈ ಮರೆತು ಮನಸಾರೆ ಜೋರಾಗಿ ನಕ್ಕು
ಖುಷಿ ಎಂಬುದೇನೆಂದು ಜೀವನಕೆ ತಿಳಿಸಿ
ಮರೆಯಾಗೋ ವೇಳೆಗೆ ಮೌನದ ಆಣೆ
ಮರೆತೂ ಮರೆಯಲಾರದವನು ಅವನೆ
ತುಂಬಿಕೊಂಡ ಹೊಸ ಪರಿಚಯಕೆ ಎಡೆ ಮಾಡಿಕೊಟ್ಟು
ಬಿಗಿಸಿದೆ ಬೀಗವ ನನ್ನೆದೆಯ ಕೋಣೆ
ನಾ ಹೀಗಿರಲು ಆತ ಕಾರಣ ಪುರುಷ
ಹೇಗಿದ್ದರೂ ಇದುವೆ ಗುರುತಾಗೋ ಕಲಶ
ಈ ಎಲ್ಲ ಗುರುತುಗಳ ಒಟ್ಟಾರೆ ನೋಡಲು
ಜೊತೆಗಾತ ಇರಲದುವೆ ಸ್ಮರಣೆಯ ದಿವಸ....
-- ರತ್ನಸುತ
ಪದಗಳಿಗೆ ಪದಾಭಿಷೇಕ
ReplyDeleteಪರಿಚಯಕ್ಕೆ ಭಾವಾಭಿಷೇಕ
ಸ್ನೇಹಕ್ಕೆ ಸ್ವ-ಅಭಿಷೇಕ
wah kaysee wah....
Delete