Tuesday, 1 September 2020

ನನ್ನೊಲವೆ ನೀ ನನ್ನೊಲವೇ

ನನ್ನೊಲವೆ ನೀ ನನ್ನೊಲವೇ

ಈ ಜೀವದ ಇಂಚರವೇ
ಆಲಿಸು ಬಾ ಈ ಕೋರಿಕೆಯ
ನಿನಗಾಗಿಯೇ ಕಾದಿರುವೆ
ಮುದವಾಗಿಸುವ ಮಧುರಾಮೃತವ
ಹೃದಯಾಂಕುರವಾಗಿಸುವೆ
ನೀಗಿಸುತ ಮನದಾಸೆಯನು
ಅನುರಾಗವ ಪಾಲಿಸುವೆ 
ಒಲವಾಗುತಲಿ ಒಲಿದ ಸುಖವ
ತಡ ಮಾಡದೆ ಸೇವಿಸುವೆ..

ನನ್ನೊಲವೆ ನೀ ನನ್ನೊಲವೇ
ಈ ಜೀವದ ಇಂಚರವೇ
ಆಲಿಸು ಬಾ ಈ ಕೋರಿಕೆಯ
ನಿನಗಾಗಿಯೇ ಕಾದಿರುವೆ

ಸಾಗರವ ಒಳಗೊಂಡಿರುವ 
ನಿನ್ನ ಕಣ್ಣಿನ ಆಳದಲಿ
ಸಿಲುಕಿರುವ ಚಿಪ್ಪಿನ ಒಳಗೆ
ಬೆಚ್ಚಗೆ ನಾ ಕುಳಿತಿರುವೆ 
ಹೂ ಗರಿಯ ಪುಟಗಳ ಮೇಲೆ 
ಹನಿಗೂಡಿಸಿ ಗೀಚುತಲಿ 
ರಾಗವನು ಜೊತೆಯಾಗಿಸುತ 
ಸವಿ ಗೀತೆಯ ಹಾಡಿರುವೆ 
ಇದು ಛಾಯೆಯೋ, ಮಾಯೆಯೋ
ನಿನ್ನ ಇರುವಿಕೆಯೋ
ಪರಿತಾಪದ ಪರಿಚಯ ಮಾಡಿಸೋ 
ಪ್ರೇಮದ ಕಾಣಿಕೆಯೋ ... 

ನನ್ನೊಲವೆ ನೀ ನನ್ನೊಲವೇ
ಈ ಜೀವದ ಇಂಚರವೇ.. 

ಅಧರಗಳ ಬಿಗಿ ಹಿಡಿಯುವ ಈ 
ಕಿರು ಸಾಹಸ ನಡೆದಿರಲು 
ಕಣ್ಣಿನಲಿ ಗೋಚರಿಸುವುದು 
ನಾಚಿಕೆಯನು ಮರೆಸಿಡಲು 
ಮುಂಗುರುಳ ರಂಗೋಲಿಯಲಿ 
ಕೆಂಪಾಗಿವೆ ಕೆನ್ನೆಗಳು 
ಅಂತೆಯೇ ರಂಗೇರಿವೆ ನಡುಗಿ 
ಈ ಸುಂದರ ಬೆರಳುಗಳು 
ಹಿತ ನೀಡುವ, ಸಂಜೆಯ 
ನಿನಗೇ ಬರೆದಿಡುವೆ 
ಕತೆಯೆಲ್ಲಕೂ ಮುನ್ನುಡಿಯಾಗಿಸಿ 
ಬದುಕ ಮುಡುಪಿಡುವೆ.. 

ನನ್ನೊಲವೆ ನೀ ನನ್ನೊಲವೇ
ಈ ಜೀವದ ಇಂಚರವೇ.. 

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...