ಮುಂಬಾಗಿಲಿಗೆ ಕಣ್ಣಿರಿಸಿ
ನಾ ಕಾದೆ ನಿನ್ನ ಬರುವಿಕೆಗೆ
ಬಾರದೆ ನೀ ಮನ ಭಾರದಲಿ
ಉಲಿಯುವುದಾದರೂ ಹೇಗೆ?
ತಂಗಾಳಿಯನು ತಡೆದಿರಿಸಿ
ತುಸು ತಡವಾಗಿಸುವ ಸಾಹಸಕೆ
ಒಲ್ಲದ ಮನಸಲಿ ಬೀಸಿ ಸಾಗಿತು
ಮುನಿಸನು ಧರಿಸಿದ ಹಾಗೆ..
ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...
No comments:
Post a Comment