Tuesday, 30 April 2013

ಅನಾಮಿಕೆ

ಹಳದಿ ಕೇಶ ಬಂದಿ (hair band) ಸಂಬಾಳಿಸಿತ್ತು ಅವಳ,
ಕೋಲು ಮುಖವ ಮರೆಸುತಿದ್ದ ತುಂಟ ಮುಂಗುರುಳ
ಗಮನ ಸೆಳೆಯುವಷ್ಟು ಘಾಢವಾಗಿ ಅಲ್ಲದಿದ್ದರೂ
ಸಹಜತೆಯ ಮುಖ ಲಕ್ಷಣ ಇಷ್ಟವಾಯ್ತು ಬಹಳ
ಕೊಟ್ಟ ಸುಳಿವ ಹಿಡಿದು ನನ್ನ ಗುರುತು ಹಿಡಿವಳೇನೋ?!!
ಇನ್ನೂ ಬಣ್ಣಿಸುತ್ತಾ ಇಕ್ಕಟ್ಟಿಗೆ ಸಿಲುಕಲಾರೆ
ಅವಳ ಹೆಸರು ಏನೆಂಬುದು ತಿಳಿದಿಲ್ಲ ನನಗೆ,
ಆದರೆ ನಾನಿಟ್ಟ ಮುದ್ದು ಅಡ್ಡ-ಹೆಸರ ಹೇಳಲಾರೆ :p


ಕಳೆದುಕೊಂಡಳಾ ಕೇಶ ಬಂದಿಯ, ಮುಂಗುರುಳಿಗೆ ಬಿಡುವು ಕೊಟ್ಟು ??!!
ಇಂದೇಕೋ ನೋಡಬೇಕನಿಸುತಿದೆ ಅವಳ ಮುಖ :(

ಮುಂಗುರುಳ ಮರೆಯಲ್ಲಿ ಕದ್ದು ನೋಡಲೇ?
ತಂಗಾಳಿ ಬೀಸಿಗೆ ಕಾದು ಕೂರಲೆ?
ಅವಳಾಗೇ ಸುರುಳಿ ಕಿವಿ ಮರೆಗೆ -
- ಸಿಕ್ಕಿಸಿಕೊಳ್ಳುವಾಗ ಸಿಕ್ಕಿ ಬೀಳಲೇ?

ಶಬ್ಧವನ್ನೇ ನಾಚಿಸುವ ಹೆಸರು ಅವಳದ್ದು
ನಾಚಿ ಕಚ್ಚಿಕೊಂಡ ಗಾಯದ ನಾಲಿಗೆ ನನ್ನದು
ಯಾಕೆ, ಹೇಗೆ, ಏನಾಯಿತೆಂದು ಕೇಳದಿರಿ
ವಿವರಿಸಲಾರೆ ಮುಂದೆ ಏನೊಂದು .. !!!


                                                    --ರತ್ನಸುತ

1 comment:

  1. ನಮ್ಮ ಯವ್ವನವನ್ನು ಪುನರ್ ಪ್ರತಿಷ್ಟಾಪಿಸುವ ನಿಮ್ಮ ಈ ಕವನದ ಹೂರಣಕ್ಕೆ ಶರಣು.

    ಆಕೆಯ ಅಡ್ಡ ಹೆಸರನ್ನು ಯಾರಿಗೂ ಹೇಳಬೇಡಿ, ಪರಿಚಯವಾದ ಮೇಲೆ ಆಕೆಗೆ ಹೇಳಿ, ಹೊಸ ಕೇಶ ಬಂದಿ ಕೊಡಿಸಿ ಬಿಡಿ.

    ReplyDelete

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ  ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ  ಯಾವ ಮಾತಿಲ್ಲದೆ, ಮೌನವೇ ಸಾಗಿದೆ  ಹೋಗಿ ಬಂದು ನಿಲ್ಲಲಿಲ್ಲ  ಎಚ್ಚರಿಸಿ ಕೇಳಲಿಲ್ಲ ನನ್ನಂತ...