ಬಾ ಕ್ಷಣಿಕ ಮಳೆ ಬಿರು ಬಿಸಿಲ ಮುದ ಗೊಳಿಸು
ಈ ನಿಮಿಷವನು ಪುಳಕಿಸಲು ಸಹಕರಿಸು
ನಾ ಮರೆತಿರುವ ನೆನಪುಗಳ ಮರಳಿಸು ನೀ
ತೋರ್ಬೆರಳಿಗೆ ಆ ಆಗಸವ ಪರಿಚಯಿಸು
ಬಾ ಕ್ಷಣಿಕ ಮಳೆ ಬಿರು ಬಿಸಿಲ ಮುದ ಗೊಳಿಸು...
ತಂಗಾಳಿಯಲಿ ತೇಲಾಡೋ ಮುಂಗುರುಳೆ
ನೀಡುವೆ ಬೆಂಗಾವಲಿಗೆ ನಾಚಿಯ ನಾಚುತಲಿ
ಆಲಂಗಿಸುವ ಕೋರಿಕೆಯ ಸ್ವೀಕರಿಸು
ಚಂದಿರ ನೀನೀಗಲೇ ಬೇಕಂತಲೇ ಬೇಡೆನ್ನುತಲಿ
ಮಾರ್ದನಿಸುತಿದೆ ಕಾರ್ಮುಗಿಲ ಏದುಸಿರು
ಝೇಂಕರಿಸುವುದೇ ಮಳೆಯ ಹನಿ?
ಬಾ ಕ್ಷಣಿಕ ಮಳೆ ಬಿರು ಬಿಸಿಲ ಮುದ ಗೊಳಿಸು...
ಹೊಂಚಾಕುತಿವೆ ಹನಿಗಳು ನೀರ್ಜಾಡಿನಲಿ
ಗಾಜಿಗೆ ಆಭರಣಗಳಾಕರ್ಷಣೆ ತಾವಾಗುತಲಿ
ತೂಕಡಿಕೆಯನು ಮರೆಸುವ ಈ ಸಿಂಚನಕೆ
ತಾಳಿವೆ ಹೂ ಕಂಪನವ ಜಾರಿದ ಈ ಸಂಜೆಯಲಿ
ಉಮ್ಮಳಿಸುವುದೇ ಚಿತ್ತ ಮಳೆ ಉತ್ಸುಕದಿ
ಭೋರ್ಗರೆಯುತಲಿ ಇಳಿದ ಹನಿ?
ಎಚ್ಚರಿಸುತ ಈ ಇಳೆಯ ಹನಿ?
ಬಾ ಕ್ಷಣಿಕ ಮಳೆ ಬಿರು ಬಿಸಿಲ ಮುದ ಗೊಳಿಸು...
ಆರಂಭದಲೇ ಆರಿತು ನೀಲಾಂಜನವು
ರೂಢಿಯೇ ಆದಂತಿದೆ ಈ ವೇಳೆಯು ಈ ಕತ್ತಲಿಗೆ (ಕಗ್ಗತ್ತಲಿಗೆ )
ಆನಂದಿಸುವೆ ಕೂಡಲೆ ಏಕಾಂತದಲಿ
ಬೇಡಿದ ಆ ಸ್ವಪ್ನವನು ನೀಡುತ ಈ ಕಂಗಳಿಗೆ
ಹಾತೊರೆಯುತ ಈ ಕ್ಷಣವನು ಆಚರಿಸುವೆನು
ಬಾ ರಮಿಸಲು ನೀ ಕಣ್ಣ ಹನಿ?
ಬಾ ಕ್ಷಣಿಕ ಮಳೆ ಬಿರು ಬಿಸಿಲ ಮುದ ಗೊಳಿಸು...
***ಹಾಡು***
https://soundcloud.com/bharath-m-venkataswamy/fvywjgfkdkcj
***ಹಾಡು***
https://soundcloud.com/bharath-m-venkataswamy/fvywjgfkdkcj
No comments:
Post a Comment