ಎಲ್ಲರ ಕಣ್ಣನು ದಾಟಿ ಬಂದ ನದಿ
ನನ್ನ ಕಣ್ಣಲ್ಲಿ ತುಂಬಿತ್ತು ಆನಂದದಿ
ಎತ್ತರ ಎತ್ತರಲೆಯನ್ನು ತಲುಪಿಲ್ಲದೆ
ಸಿಕ್ಕರೂ ಆಳ ಇನ್ನಷ್ಟು ತಳದಲ್ಲಿದೆ
ತುಂಬಿದ ಕಣ್ಣು ಹರಿವಾಗ ಸದ್ದಿಲ್ಲದೆ
ಇತ್ತ ಹುಸಿಯಲ್ಲದೆ, ಅತ್ತ ಪಸೆಯೊಂದಿಗೆ
ಮುತ್ತಿಗೆ ಹಾಕತಾ ಮೂಡುವ ಪ್ರಶ್ನೆಗೆ
ಉತ್ತರ ಹುಡುಕಲು ತೋಯುವ ಕೆನ್ನೆಗೆ
ಸಿಕ್ಕರೆ ನಿನ್ನ ಮಧು ತುಂಬಿದ ಚುಂಬನ
ನಿಲ್ಲದ ಕಂಪನ, ಭಾವದ ಲಾಂಛನ
ಕವಿತೆಯೆಂಬೋದು ಹುಟ್ಟೋಕಿದೆ ಕಾರಣ
ಕವಿತೆಯೆಂಬೋದು ಹುಟ್ಟೋಕಿದೆ ಕಾರಣ
ಹಾಡಿನ ಹೂರಣ, ಮಾಧುರಿ ಸಿಂಚನ
ಸಂಜೆ ಏಕಾಂತವೇ ಎಲ್ಲಕೂ ಪ್ರೇರಣಾ
ಹಾಡುವ ಸಾಧನ, ಆತ್ಮದ ಮಂಥನ
ಕವಿತೆಯೆಂಬೋದು ಹುಟ್ಟೋಕಿದೆ ಕಾರಣ
ಕವಿತೆಯೆಂಬೋದು ಹುಟ್ಟೋಕಿದೆ ಕಾರಣ..
ದೂರ ನಿಂತು ಆಡೋ ಮಾತು ಕೇಳದಾಗಿದೆ
ಹತ್ತಿರಕ್ಕೆ ಬಂದು ನೋಡು ನನ್ನ ಕಾಡದೆ
ಎಂದಿನಂತೆ ಹಾಡುವಾಗ ಭಿನ್ನ ರಾಗದಿ
ಮೂಡಿ ಬಂತು ಮಂದಹಾಸ ತುಟಿ ಅಂಚಲಿ
ನಿಧಾನಿಸಿ ಸಾಕಾಗಿದೆ
ವಿಚಾರಿಸು ಏನಾಗಿದೆ
ನಿನ್ನಲ್ಲಿದೆ ಈ ಪ್ರಾಣವು...
ತೀರದ ಹಂಬಲ ಬಂತು ನಿನ್ನಿಂದಲೇ
ಹೇಳಲು ಬಾರದ ಮಾತಿಗೋ ಕಣ್ಣಲೇ
ತಲ್ಲಣ ತಾಳದ ತಂತಿಯ ನಾದವು
ಒಮ್ಮೆ ಆತಂಕವು, ಒಮ್ಮೆ ಆಹ್ಲಾದವು
ಮೀಟುವೆ ಹೇಗೆ ನೀ ತಾಕದೆ ನನ್ನನು?
ಕೇಳದೆ ಹೇಗೆ ಆವರಿಸಿದೆ ಬಾಳನು
ನಿಲ್ಲುವೆ ಎಲ್ಲೇ ನೀ ಬಿಟ್ಟ ಗುರುತೊಂದಿಗೆ
ಬಾಳುವೆ ನಿನ್ನ ಸಹಚಾರ ನೆನಪೊಂದಿಗೆ
ಕಾತರ ಇದ್ದರೆ ನಿನ್ನಲೂ ಈ ಥರ
ಕಟ್ಟುವ ಈ ದಿನ, ಭಾವದ ತೋರಣ
ಕವಿತೆಯೆಂಬೋದು ಹುಟ್ಟೋಕಿದೆ ಕಾರಣ
ಕವಿತೆಯೆಂಬೋದು ಹುಟ್ಟೋಕಿದೆ ಕಾರಣ
ಹಾಡಿನ ಹೂರಣ, ಮಾಧುರಿ ಸಿಂಚನ
ಸಂಜೆ ಏಕಾಂತವೇ ಎಲ್ಲಕೂ ಪ್ರೇರಣಾ
ಹಾಡುವ ಸಾಧನ, ಆತ್ಮದ ಮಂಥನ
ಕವಿತೆಯೆಂಬೋದು ಹುಟ್ಟೋಕಿದೆ ಕಾರಣ
ಕವಿತೆಯೆಂಬೋದು ಹುಟ್ಟೋಕಿದೆ ಕಾರಣ..
No comments:
Post a Comment