ವಿಮಾನದಲ್ಲಿ ನನ್ನ ಮೊದಲ ಪಾದಾರ್ಪಣೆ... ಎಲ್ಲರಿಗೂ ಇದ್ದಂತೆಯೇ ನನಗೂ ಇತ್ತು ಕುತೂಹಲ ಮಿಶ್ರಿತ ಭಯದ ಅನುಭವ. ಅದೇನು ಅಪರಿಚಿತರೊಡನೆ ಮೌನದ ಚರ್ಚೆ, ಪ್ರಪಂಚ ಕಿರುದಾಗಿತು ಕಿಟಕಿ ಗಾಜಿನಾಚೆ. ಕೇವಲ ನೋಡುವುದೇ ಆಯಿತು, ಸ್ಪಂದನೆಗೆ ಎಡೆಯಿಲ್ಲ, ಭಾವಗಳ ಮುಡಿಗಲ್ಲಿ ಚಂದದ ಜಡೆಯಿಲ್ಲ. ಗಗನ ಸಖಿಯರೋ, ಹೆಸರಿಗಷ್ಟೇ ಸಖಿಯರು, ಕೇವಲ ಅಲಂಕಾರಕ್ಕೆಂದೇ ನಗುವೊಂದ ತುಟಿಮೇಲೆ ಅಂಟಿಸಿಕೊಂಡು ನೆಡೆದಾದುತ್ತಾ ಉಸ್ಸ್ಸ್ ಎಂದು ಕೂತುಬಿಡುತ್ತಿದರು ಎಲ್ಲೋ ಅವೆತು, ಒತ್ತಿದರೆ ಬಟನ್ನೊಂದ ಓಡಿ ಬಂದು ಹಾಜರು ನಮ್ಮ ಸೇವೆಗೆ, ಅದೆಷ್ಟು ಶಪಿಸಿರುವರೋ ನನ್ನಂತ ನೂರಾರು ಮಂದಿಯ.. ಹಂದಿಗಳೆಂದು.... ಇನ್ನೇನು ಹೆಚ್ಚು ಬದಲಾವಣೆಗಳೇ ಕಾಣಲಿಲ್ಲ ಅಲ್ಲಿ, ಎಲ್ಲವೂ ಇದಂತೆಯೇ ಇತ್ತು, ಗೋಡೆಗೆ ಜೋತು ಹಾಕಿದ ಭಾವಚಿತ್ರದಂತೆ... ನೋಡಿದ ಮೊದಲ ಕಣ್ಣಿಗೆ ಮಾತ್ರ ಮುಧ, ಆನಂತರ ಎಲ್ಲವೂ ಸೀದಾ-ಸಾದಾ......
ಮಾತಿಗೆ ಯಾರೂ ಸಿಗದೆ, ಮಾತೂ ಸತ್ತು ಹೋಗಿತ್ತು, ಆಗಾಗ ಕೊನೆಯಲ್ಲಿದ್ದ ಬಾತ್ರೂಂ ಮಾತ್ರ ಒಂದಿಷ್ಟು ಜೋತೆಯಾಗುತಿತ್ತು; ಏಕೆಂದರೆ ಅಲ್ಲೊಂದು ಕನ್ನಡಿ ಇತ್ತು, ನಮ್ಮೊಂದಿಗೆ ನಮ್ಮನ್ನೇ ಪರಿಚಯ ಮಾಡಿಕೊಂಡು ಒಂದಷ್ಟು ಮಾತನಾಡಿ ಹಿಂದಿರುಗಿದರೆ ಅಷ್ಟೇ ಸಮಾದಾನ.
ಮೊದಲೇ ಮುದ್ದೆಗೆ ಪಳಗಿದ ನಾಲಿಗೆ, ಬನ್ನು- ಬಟರ್ರು ಎಂದರೆ ಹಿಂಜರಿಕೆ, ಬೇರೆ ವಿಧಿಯಿಲ್ಲದೆ ತುರುಕಿದ್ದಾಯಿತು. ಊಟ ಮಿತ, ಹಸಿವಿನ ಮೊಣಕಾಲಿನಷ್ಟಕ್ಕೆ ಸೀಮಿತ, ಇನ್ನೆಲ್ಲಿ ತುಂಬ ಬೇಕು ಹೊಟ್ಟೆ? ಸಿಟ್ಟಾಗಿ ಸಿಬ್ಬಂದಿಯ ಕೇಳಿಯೇ ಬಿಟ್ಟೆ "ಏನಾರ ತಿನ್ನೋಕಿದ್ರೆ ಕೊದ್ರಮ್ಮ" ಅಂತ, ಪುಣ್ಯಾತಗಿತ್ತಿ ಕೊಟ್ಳು ಮತ್ತೊಂದು ಬ್ರೆಡ್ಡಿನ ತುಂಡು.
ಸುದೀರ್ಗ ಒಂಬತ್ತೂವರೆ ಗಂಟೆಯ ನಿರಾಯಾಸ, ನಿಶಬ್ದ, ನೀರಸ ಪಯಣದ ಅಂತ್ಯಕ್ಕೆ ತೆರೆ ಬಿದ್ದಿತು ತಲುಪಲು ಲಂಡನ್ ವಿಮಾನ ನಿಲ್ದಾಣ..... ಇನ್ನೇನು ಈ ಮೆಲಿನವುದರ ಬಗ್ಗೆ ಬರೆವುದಕ್ಕೆ ಬೆರಳುಗಳು ಹಾತುರಿಯುತಿದ್ದವು, ಈಗ ಬರೆದಾಯಿತಲ್ಲ ಸಮಾದಾನವಾಯಿತು, ಮಲಗಲೂ ಹೊತ್ತಾಯಿತು...... ಇನ್ನು ಅಪ್ಪಣೆ ಕೊಡಿ.....
- ರತ್ನಸುತ
vimana hatthuva aase
ReplyDeleteparadeshakke hoguva aase
hodhamela manemandhiya dyase