ಅದೇಕೋ ಗೊತ್ತಿಲ್ಲ. ಎಲ್ಲರೂ ಇದ್ದೂ ಯಾರೂ ಇರದಂತೆ, ಯಾರೂ ಇರದೆ ಎಲ್ಲರೂ ಇದ್ದಂತೆ, ಎಲ್ಲವೂ ಇದ್ದು ಏನೂ ಇರದಂತೆ, ಏನೂ ಇರದೆ ಎಲ್ಲವವೂ ಇದ್ದಂತೆ, ಹೀಗೆಲ್ಲ ಅನಿಸಬಹುದೆಂದು ಅಂದುಕೊಂಡಿದ್ದೆ ವಿದೇಶದಲ್ಲಿ. ಯಾವೊಂದೂ ಅನಿಸದಿದದ್ದೇ ಅಚ್ಚರಿಯ ಸಂಗತಿ. ಎಲ್ಲರೂ ನಮ್ಮವರೇ, ಇದು ನಮ್ಮೂರೇ ಎನ್ನುವ ಭಾವನೆ ಸುಳ್ಳೆಂದುಕೊಳುವಷ್ಟರ ಮಟ್ಟಿಗೆ ತಯಾರಾಗಿದ್ದ ನನ್ನ ಬುದ್ಧಿ ಒಂದೇಬಾರಿ ತಲೆಕೆಳಗಾಗಿದ್ದು ಸುಳ್ಳಲ್ಲ, ಹಾಗಾದಾಗ ನಾನು ದಂಗಾದಿದ್ದು ಸುಳ್ಳಲ್ಲ.
ಆ ವಿಷ್ಯ ಬಿಡಿ. ಇದೊಂದು ಕನಸುಗಾರರ ಸಂತೆ ಎಂದರೆ ತಪ್ಪಾಗಲಾರದು. ಇಲ್ಲಿ ಯಾರೇ ಕಂಡರೂ ಅವರ ಕಣ್ಗಳಲ್ಲಿ ನಾಳೆಯ ಕನಸುಗಳ ದರ್ಶನವಾಗುವುದೇ ವಿಶೇಷ. ಎಲ್ಲರಲ್ಲೂ ಗಾಂಭೀರ್ಯದ ಚೌಕಟ್ಟಿನ ಒಳಗೆ ಒಂದು ಸಣ್ಣ ತುಂಟತನವಿದೆ, ಅದು ಯಾರಿಗೂ ಕಾಣದಂತೆ ಇರಿಸಿಯೂ ಗೋಚರವಾಗುವ ಅಮಾಯಕತ್ವವಿದೆ, ನನ್ನಲ್ಲೂ ಇತ್ತು ಆ ದಡ್ಡತನದ ಬುದ್ಧಿವಂತಿಕೆ, ಅದು ನನ್ನದಲ್ಲದ ಸ್ವಂತಿಕೆ.
ಇದು ಮೊದಲ ವಾರದ ಅನುಭವ ಅಷ್ಟೇ, ಹಾಗೆಂದು ಎಲ್ಲವನ್ನು ಅರಿದು ನೀರಿನಂತೆ ಗಟ-ಗಟ ಕುಡಿದೆನೆಂದಲ್ಲ ಅರ್ಥ, ನೂರು ಮೈಲಿ ವಿಸ್ತಾರದ, ಆಳದ ಕಡಲ ಜೀವನದಲ್ಲಿ, ನಾನು ಕುಡಿದಿರುವುದು ಕೇವಲ ಒಂದು ಚಮಚ ತೀರ್ಥ.
ಎಲ್ಲೆಲ್ಲಿ ನೋಡಿದರು ಎಲೆರಹಿತ ಮರಗಳೇ, ಮಾಗಿಯ ಚಳಿಯಲ್ಲಿ ಮರಗಳಿಗೆ ಹಿಮದ ಹೊದಿಗೆ, ಚಿಗುರಿಗೆಂದೇ ಕಾದಿವೆ ಕಣ್ಗಳು, ಹಕ್ಕಿಗಳು ಹಾಗು ಕ್ಯಾಮೆರಾ zoomಗಳು. ಸದ್ಯಕ್ಕೆ ಇದೇ ನನ್ನ ಅನಿಸಿಕೆ, ತಿದ್ದುಪಡಿಗಳೇನೇ ಇದ್ಧರು ಮುಂದೆ ಆಗಬಹುದು.
ಜೈ ಕರ್ನಾಟಕ..... ಒಂದೇ ಮಾತರಂ...... ಟಿಪ್ಪು ಸುಲ್ತಾನ್.....
- ರತ್ನಸುತ
thumba olle kannada channagide....
ReplyDeleteThanks Putti
ReplyDelete