Tuesday, 3 September 2013

ಉಲ್ಟಾ Lifeಉ!!

ಹುಡುಗೀರೇ ಹುಷಾರು, ಹುಡುಗರು ಇದ್ದಾರೆ
Friendshipಉ ಮಾಡ್ಕೊಳಿ, safety ಇರುತೈತೆ 
ಹುಡುಗರೇ ಬೇಜಾರು ಮಾಡ್ಕೊಳ್ದೆ friendsಆಗಿ 
ಇಲ್ದಿದ್ರೆ ಗುಟ್ಟಾಗಿ love ಆಗುತೈತೆ 

ಒಮ್ಮೊಮ್ಮೆ ಹಿಂಗೇ ಬೇಕಾ ಬಿಟ್ಟಿ 
ಮನಸು ಮಂಗನ ಹಾಗೆ ಆಡೋದು ಉಂಟು 
Control ಮಾಡೋ friends ಇರ್ಲೇಬೇಕು 
ತಿದ್ದಿ ಹೇಳೋಕೆ, Wrongಉ-Rightಉ 

Friendship ತುಂಬಾ precious ಕಣ್ರೀ 
Love ಅನ್ನೋದಿದ್ಯಲ್ಲಾ, ತುಂಬಾನೇ costly
ರಾವಣ ರಾಮನ friend ಆಗಿಸ್ಕೊಂಡಿದ್ರೆ  
ಧುಷ್ಟನೆಂಬ ಪಟ್ಟ ತಪ್ತಿತ್ತು mostly 

ಮೋಡಕ್ಕೆ ಡಿಕ್ಕಿ ಹೊಡೆದಾಗ ಮೋಡ 
ಮಳೆಯಾಗೋದು ತೀರಾ commonಉ 
ಒಂದಿಷ್ಟು ಬೆಳಕು ಜೊತೆ ಸೇರಿಕೊಂಡ್ರೆ 
ಬಾನಿಗೆ ತೆಳು ಕಾಮನ ಬಿಲ್ಲ screenಉ  

ಬೆರೆತಾಗಲೇ ತಾನೇ lifeಅಲ್ಲಿ ಬಣ್ಣ 
ಇಲ್ದಿದ್ರೆ ನೀರಲ್ಲಿ ಕರಗ್ಹೋದ ಸುಣ್ಣ 
Lucky ನಾವು ಸಿಕ್ಕಿದೆ ಮನುಷ್ಯ ಜನ್ಮ 
ಹೆಗಲಿದೆ ಕೈಯ್ಯಿದೆ ಬಾ ಸೇರು ತಮ್ಮ 

ಆಗಾಗ ಚೂರು lightಆಗಿ loveಆದ್ರೆ 
ನುಗ್ಗಿ ಪರ್ವಾಗಿಲ್ಲ "No Entry"ಅಲ್ಲೂ 
ಸಿಗೋದಿಲ್ಲ ಅಂತ ಗೊತ್ತಿದ್ದೂ ಪಡ್ಕೊಂಡ್ರೆ 
ಬೇರೇನೇ ಅದರಲ್ಲಿ ಸಿಗುವಂತ thrillಉ !!!  

                                       --ರತ್ನಸುತ 

1 comment:

  1. ಅದೆಲ್ಲ ಸರಿ, ನಿಮಗೂ loveಊ ಆಗಿದೆಯೋ? ಭರತ ಮುನಿಗಳೇ!!! ;-)

    ReplyDelete

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ  ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ  ಯಾವ ಮಾತಿಲ್ಲದೆ, ಮೌನವೇ ಸಾಗಿದೆ  ಹೋಗಿ ಬಂದು ನಿಲ್ಲಲಿಲ್ಲ  ಎಚ್ಚರಿಸಿ ಕೇಳಲಿಲ್ಲ ನನ್ನಂತ...