Saturday, 14 September 2013

ಹಾಡೊಂದು ಬರೆದೆ ನಿನಗಾಗಿ!!!

ನಿನ್ನ ಕಣ್ಣಿಗೆ, ಒಂದು ಕಾಣಿಕೆ 
ನೀಡಬೇಕಿದೆ ಒಪ್ಪಬೇಕು ನೀ ಅನ್ನಲು 
ಒಪ್ಪಿಗೆ ಸೂಚಿಸು 
ತುಂಬು ಚಂದಿರ, ಅರ್ಥವಾಗದೆ 
ಸೋತು ಹೋದೆನು ಅಷ್ಟರಲ್ಲಿ ನೀ ಕಾಣಲು 
ಎಲ್ಲವ ಅರಿತೆನು 

ಹಗಲುಗನಸಿಗೆ ಹೆಗಲು ನೀಡಿದೆ 
ನನ್ನ ಕಣ್ಣಿನ ವೇದಿಕೆ 
ಮುನಿಸಿಕೊಂಡರೆ ಅರ್ಥವೆಲ್ಲಿದೆ
ನೀನು ಇಷ್ಟರ ಮಾತಿಗೆ                                             [೧]


ಗಾಳಿಯಲ್ಲಿ ಸುದ್ದಿ, ನಾ ಓದಿ ಹೇಳಲೇನು 
ಖಾಲಿ ಹಾಳೆ ಹಿಡಿದು ನಾ ದೋಣಿ ಮಾಡಲೇನು 
ಕಾಡಬೇಕು ಚೂರು ನಾ ಮುಂದುವರೆಯಲೇನು 
ಹೂಡಬೇಕು ಕನಸು ನೀ ಜಾಗ ಕೊಡುವೆಯೇನು 

ರಾತ್ರಿ ಬೀಳುವ ಕನಸು ಮಾತ್ರವೇ 
ಮಜವ ನೀಡಲು ಪೂರಕ 
ಯಾವ ಗ್ರಹಗಳೂ ಅಡ್ಡಿ ಬಾರದು 
ಘಟ್ಟಿ ಪ್ರೀತಿಯ ಜಾತಕ                                             [೨]

ನಿನ್ನ ಕಣ್ಣಿಗೆ, ಒಂದು ಕಾಣಿಕೆ ....................... 

ಮಾತುಗಾರ ನಾನು, ನೀನೊಂದು ಮೌನ ಗೀತೆ 
ಹಾಡುಗಾರ ನಾನು ನೀನೊಂದು ಪ್ರಣಯ ಕವಿತೆ 
ಬೆಳೆಸು ಬಾರೆ ಚೂರು ನನ್ನೊಡನೆ ದೂರ ಪಯಣ 
ಸಾಕು ಮಾಡು ಅಲ್ಲಿ ನೀ ಬೇರೆ ಧ್ಯಾನವನ್ನ 

ಮುತ್ತು ಕೊಟ್ಟರೆ ಮೆತ್ತಗಾಗುವೆ 
ಮತ್ತೆ ಕೋಪಕೆ ವಾಲುತ 
ಹೇಗೆ ಉಳಿಯಲಿ ಈಜು ಬಾರದೇ 
ಪ್ರೀತಿ ಕಡಲಿಗೆ ಬೀಳುತ !!!                                       [೩]

ನಿನ್ನ ಕಣ್ಣಿಗೆ, ಒಂದು ಕಾಣಿಕೆ .......................
                                         
                                             --ರತ್ನಸುತ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...