ಬಿಡಾರವಿಲ್ಲದೂರಿನಲ್ಲಿ, ಗುಡಿಗೆ ಕೈ ಮುಗಿದ ಬಳಿಕ
ದುಡಿಮೆ ಬೆವರು ಹರಿಸಿದನು, ಅತ್ತ ಭೂಮಿ ನಗುವ ತನಕ
ಉತ್ತು, ಬಿತ್ತು, ಮಳೆಗೆ ಕಾದು, ನೆರೆಗೆ ಅಂಜಿ ಬಾಳಿದವನು
ಪುಡಿಗಾಸು ಕೈ ಸೇರಲು, ಮೆಲ್ಲ ಗಿಂಜಿ ಬೆದರಿದನು
ತೆಂಗು, ಜೋಳ, ಬತ್ತ, ತೇಗ, ಇವೇ ಆಪ್ತ ಬಂಧು-ಬಳಗ
ಕತ್ತಲೆಂಬ ಭೂತ ಗೆಲ್ಲಲಾಗಲಿಲ್ಲಾ ಕನಸ ಮೀನುಗ
ಧಿಟ್ಟವಾದ ಮಾಳಿಗೆ, ಸಂಸಾರವೆಂಬ ಜೋಳಿಗೆ
ಮೆಲ್ಲ ತೂಗಿ ಸಾಗುತಿರಲು ದೃಷ್ಟಿ ಬಿತ್ತೇ ಬಾಳಿಗೆ??
ಬಂಡಿ ಮೊಟಾರಾಯಿತು (Motor)
ಮಣ್ಣು ಟಾರಾಯಿತು (Tar)
ಆಗಸದಲಿ ಹಾರಾಡುವ ಲೋಹದ್ಹಕ್ಕಿ ಜೋರಾಯಿತು
ಹೆದ್ದಾರಿಗೆ ಹೆದರಿ ಭೂಮಿ
ಸಿಕ್ಕ ರೇಟಿಗೆ (Rate) ಸೇಲು (Sale)
ಒಂದಿಷ್ಟು ಪರಿಹಾರದ ಜೊತೆಗೆ ಕಣ್ಣೀರ ಪಾಲು
ಮನೆ ಉರುಳಿ ಟೋಲಾಯಿತು (Toll)
ಕಣ ಕಾಂಕ್ರೀಟಾಯಿತು (Concrete)
ಚಕ್ರ ಉರುಳಿತು
ಸ್ವಾಭಿಮಾನಿ ಮತ್ತೆ ತಿರುಕನಾದ
ದೇವರೂ ಸೋತನೆ ಅಸ್ತಿತ್ವ ಉಳಿಸಿಕೊಳ್ಳಲು??
--ರತ್ನಸುತ
ಮನಕಲಕುವ ಚಿತ್ರ.. ಅತ್ಯಂತ ಪ್ರಭಾವಶಾಲಿ ಪದಗಳು.. ಶೀರ್ಷಿಕೆ - ವಾಸ್ತವದ ಘೋರ ದುರಂತ..
ReplyDelete"ಭೇಷ್" ಎನ್ನಲೇಬೇಕು ಸರ್ ನಿಮ್ಮ ಈ ಬರೆಹಕೆ..
ಪ್ರಶಾಂತ್ ಸರ್, ಇದು ನಾವು ದಿನ ನಿತ್ಯ ಕಾಣುತ್ತಿರುವ, ಕೇಳುತ್ತಿರುವ, ಓದುತ್ತಿರುವ ಹಾಗು ಅನುಭವಿಸುತ್ತಿರುವ ಶೋಷಣೆ. ಬದಲಾವಣೆ ಬಯಸುವುದಷ್ಟೇ ನಮ್ಮ ಕೈಯಲ್ಲಿ ಸಾಧ್ಯ, ಹೀಗೊಂದೆರದು ಪದಗಳಿಂದ ಮುಟ್ಟಬೇಕಾದವರನ್ನ ಮುಟ್ಟುವುದು ಮಾತ್ರವಲ್ಲದೆ ಅವರ ಮನಸನ್ನ ತಟ್ಟಿ ಪರಿವರ್ತಿಸುವುದೆಂದು ಕನವರಿಸಿ ಈ ಕವನ ಬರೆದಿರುವೆ. ಇದೊಂದು ಕ್ರಾಂತಿಕಾರಿ ಕವನವಲ್ಲ, ವಿನಂತಿ ಬರಿತ ಕವನ.
Deleteನಿಮ್ಮ ಅನಿಸಿಕೆಗೆ ನನ್ನ ನಮನಗಳು :)
ವ್ಯವಸಾಯ - ನೀನ್ ಸಾಯಾ ನಾನ್ ಸಾಯ ಎನ್ನುವಂತಾಗಿದೆ ಎನ್ನುತ್ತದೆ ಒಂದು ಚಲನಚಿತ್ರದ ಪಾತ್ರ.
ReplyDeleteಇಂದಿನ ರೈತರು ಅನುಕ್ಷಣ ಅನುಭವಿಸುತ್ತಿರುವ ನರಕವನ್ನು ಈ ಕವನ ತೆರೆದಿಟ್ಟಿದೆ. ಆಧಿನಿಕೀಕರಣಕ್ಕೆ ಮೊದಲ ಬಳಿ ಪಶು ನೇಗಿಲ ಯೋಗಿ! :(
ಜೀವ ನೀಡುವ ಶಕ್ತಿ ಇರುವ ರೈತನೇ ಸತ್ತರೆ, ಬದುಕುಳಿದ ಸಾಮಾನ್ಯ ಮಂದಿ ಸತ್ತಂತಲ್ಲವೇ ಬದರಿ ಸರ್. ಎಂದು ಸಿಗುವುದೋ ಬೆಸಾಯಕೆ ಮನ್ನಣೆ ಅಂದೇ ರೈತರ ಬದುಕು ಕಾಣುವುದು ಸುದಾರಣೆ.
Deleteನಿಮ್ಮ ಅನಿಸಿಕೆಗೆ ನನ್ನ ನಮನಗಳು :)