ಕವಿಯೊಡನೆ ಜಗಳ ಕಾದ ಅವನ ಹೆಂಡತಿ
ಅಂದಿನ ಕವಿತೆಗೆ ಸ್ಪೂರ್ತಿಯಾದಳು!!
ಕಟುಕನೊಡನೆ ಜಗಳ ಕಾದ ಅವನ ಹೆಂಡತಿ
ಇನ್ನಿಲ್ಲದೆ, ಗೋಡೆಗೆ ಜೋತು ಬಿದ್ದಳು!!
________________________________
ಕುರುಡನ ಕಂಬನಿ,
ಅಂದಿನ ಕವಿತೆಗೆ ಸ್ಪೂರ್ತಿಯಾದಳು!!
ಕಟುಕನೊಡನೆ ಜಗಳ ಕಾದ ಅವನ ಹೆಂಡತಿ
ಇನ್ನಿಲ್ಲದೆ, ಗೋಡೆಗೆ ಜೋತು ಬಿದ್ದಳು!!
________________________________
ಕುರುಡನ ಕಂಬನಿ,
ಕಿವುಡನ ಮೌನ,
ಮೂಗನ ಹಾಡು,
ವಿರಹಿಯ ಪಾಡು,
ಎಲ್ಲವೂ ಅವರವರು ಬೇಡದೇ ಪಡೆದ
ಶಾಪಘ್ರಸ್ತ ವರದಾನ....
________________________________
ನಾನಾಡದ ಮಾತಿಗೆ ಸ್ಪೂರ್ತಿಯು ನೀ
ನೀ ಆಲಿಸದ ನುಡಿಗಾರನು ನಾ
________________________________
ನನ್ನನ್ನು ನೋಡಿಯೂ ನೋಡದಂತೆ
ನಟಿಸುವಾಟದಲ್ಲಿ
ನೀ,
ಗೆದ್ದು ಸೋತೆ
ನಾ,
ಸೋತು ಗೆದ್ದೆ
ಇಬ್ಬರೂ ಸೋಲು, ಗೆಲುವನ್ನ ಸಮವಾಗಿ ಉಂಡೆವು
__________________________________
ನಿನ್ನ ಕಂಡು ಮೋಹಗೊಳ್ಳದ ನಾನು
ಆಲೆಮನೆಯ ಬೆಲ್ಲದ ಮುದ್ದೆಗೆ
ಮುಗಿ ಬೀಳದ ಇರುವೆಯಂತೆ
________________________________
ಅಂದು,
ಉಗುರು ಬೆಚ್ಚಗಿನ ಸೋಕಿಗೆ
ಮುದುಡು ಮಲ್ಲೆಯಂತಿದ್ದವಳು
ಇಂದು,
ಶೀತಲ ಸಮರರಂಗದ
ಕೆಂಡ ಸಂಪಿಗೆಯಾದೆ ಏಕೆ?
________________________________
ಅವಳ ಎದೆ ಭಾಗವ ಧಿಟ್ಟಿಸಿದವನ ಕಣ್ಣಲ್ಲಿ,
ಕಾಮ ತ್ರಿಷೆಗಿಂತಲೂ ಹೆಚ್ಚು
ಹೊಟ್ಟೆ ಹಸಿವಿನ ಛಾಯೆಯಿತ್ತು
ಅದಕ್ಕಾಗೇ ಅವಳ ಮಾಂಗಲ್ಯದ ಮೇಲೆ
ಅವನ ಕಣ್ಣಿತ್ತು ....!!
________________________________
--ರತ್ನಸುತ
--ರತ್ನಸುತ
"ಎಲ್ಲವೂ ಅವರವರು ಬೇಡದೇ ಪಡೆದ
ReplyDeleteಶಾಪಘ್ರಸ್ತ ವರದಾನ.... "
ಯಾಕೋ ತುಂಬಾ ಕಾಡಿತು.