Friday, 7 June 2013

ಪ್ರಕೃತಿಯ ಕವನ


ಇಳೆಗಿಳಿದ ತಿಳಿ ಮಂಜು 
ಹೊದ್ದು ಹುಲ್ಲಿನ ಮೇಲೆ 
ಶಮನಗೊಂಡಿತು ತಂಪು 
ಅಂತೆಯೇ ಹಸಿರೆಲೆ ಜ್ವಾಲೆ 
ಮುದ್ದಾಟದ ಫಲವೇ 
ಇಬ್ಬನಿಯ ಜನನ 
ಮುಂಜಾವ ಸ್ವಾಗತಕೆ 
ಪ್ರಕೃತಿಯ ಕವನ................ 

          --ರತ್ನಸುತ 


(ಚಿತ್ರ ಕೃಪೆ - ಹೇಮಂತ್ ಮುತ್ತರಾಜು) 

1 comment:

  1. ಓದುತ್ತಾ ಓದುತ್ತಾ ಹಾಗೇ ಆ ಪರಿಸರಕ್ಕೆ ಹೋಂದಿಕೊಂಡೆ, ಒಳ್ಳೆಯ ಕವಿತೆಯ ಲಕ್ಷಣವೇ ಇದು.

    ReplyDelete

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...