ಸೂತಕದ ಮನೆಯೊಳಗೆ ಪಾಯಸ ರುಚಿಯಿತ್ತು
ನನ್ನ ಮನೆ ಸಪ್ಪೆ ಊಟಕ್ಕೂ ರುಚಿ ಹೆಚ್ಚಿತ್ತು
ಸತ್ಕಾರಕ್ಕಿರದ ಕೊರತೆ , ಖುಷಿಯ ನೀಡಿತ್ತು
ಅಮ್ಮ ಏತಕೆ ಹೊಡೆದಳೋ? ದೇವರಿಗ್ಗೊತ್ತು!!
ನಾಸ್ತಿಕರಾದವರ ಮನೆ ತುಂಬೆಲ್ಲಾ ಧೂಪ
ನೆನ್ನೆಯ ಮಾನವನಿಗೆ ಇಂದು ಧೈವ ರೂಪ
ಎಲ್ಲರೂ ಕೈ ಮುಗಿದು ಸೇವಿಸಿದರು ಪ್ರಸಾದ ಹಣ್ಣು
ನಾನು ಸೇವಿಸಿದ್ದಕ್ಕೆ ಅಮ್ಮಳಿಗೆ ಕೆಂಗಣ್ಣು
ನನಗಿನ್ನೂ ಹತ್ತರ ಹರೆಯ, ಆಕೆ ನನ್ನ ಸಹಪಾಟಿ
ಆಟೋಟ, ಓದು, ಬರಹ ಆಕೆಯ ಜೊತೆಗೇ
ಅಂದೇಕೋ ದೂರುಳಿದೆವು ಒತ್ತಾಯದ ಮೇರೆಗೆ
ಕಣ್ಣೀರು ಜಿನುಗಿತು ಬಿಕ್ಕಳಿಕೆಯ ಜೊತೆಗೆ
ಶಾಸ್ತ್ರ ಪ್ರಕಾರದಿ ಆತ್ಮ ತೃಪ್ತಿಸುವ ಪರಿ
ಪೂಜೆ, ಹವನಗಳ ಭೂಟಾಟಿಕೆಯ ಮಧ್ಯ
ಮಂಡಲದ ನಡುವಲ್ಲಿ ಸುಡುವಾಗ್ನಿ ಯಜ್ಞ ಕುಂಡ
ಮಂತ್ರಗಳ ಘಧರಿಗೆ ಬೆಚ್ಚಿದಳು ಭಾಗ್ಯ
ಆಕೆಯೇ ಭಾಗ್ಯ, ನನ್ನೊಡನೆ ಕೂಡುವ ತವಕ ಆಕೆಗೆ
ಅಂದು ಅವಳ ತಂದೆಯ ಶ್ರಾಧ, ಕಾರಣ ಬರಲಾಗಿಲ್ಲ ಮನೆಯಿಂದೀಚೆಗೆ
ಅಜ್ಜಿ ಬಿಡಿಸಿಟ್ಟಳು ಸೂತಕ ಮನೆ ಜಾತಕ
ಅರ್ಥವಾಗದೆ ಸೋತೆ ತೆರೆ ಮರೆಯ ನಾಟಕ.........
--ರತ್ನಸುತ
ತೀವ್ರ ವಿಷಾದ - ಪದ್ಧತಿ ಆಚರಣೆಗಳ ವಿವರ ಇಲ್ಲಿದೆ.
ReplyDelete1. ಸೂತಕದ ಮನೆಯೊಳಗೆ ಪಾಯಸ ರುಚಿಯಿತ್ತು.
2. ನೆನ್ನೆಯ ಮಾನವನಿಗೆ ಇಂದು ಧೈವ ರೂಪ
3. ಪೂಜೆ, ಹವನಗಳ ಭೂಟಾಟಿಕೆಯ ಮಧ್ಯ
ತೀವ್ರವಾಗಿ ಕಾಡಿದವು.
ಬದರಿ ಸರ್- ನಿಮ್ಮನ್ನು ಕಾಡಿಸುವ ಕಲೆ, ನಿಮ್ಮಂತ ಮಹನೀಯರಿಂದ ನಾನು ಬೇಡಿ ಪಡೆದ ವರಮಾನ :)
Deleteಕೆಲವೊಮ್ಮೆ ಸಮಂಜಸವೆನಿಸೋ ಶಾಸ್ತ್ರಗಳು ಇನ್ನೂ ಕೆಲವೊಮ್ಮೆ ಕಟೋರವಾಗಿ ಬಿಡುತ್ತವೆ. ಇದನ್ನು ಸಾರುವ ಒಂದು ಸಣ್ಣ ಪ್ರಯತ್ನವೇ ಈ ನನ್ನ ಕವಿತೆಯ ಉದ್ದೇಶವಾಗಿತ್ತು.
ನಿಮ್ಮ ಗ್ರಹಿಕೆಗೆ ನನ್ನ ಕೋಟಿ ಶರಣು :)