ಚಂದ್ರ ನನ್ನ ಕರ್ದೌನೆ
ಅವ್ನ್ಹಟ್ಟಿಯಲ್ಲಿ ರೊಟ್ಟಿ ತಟ್ಟಿ
ಬೆಣ್ಣೆ ಸವ್ರಿ ತಿಂದು ತೇಗಿ
ಅವ್ನ್ತಂಗೀರಲ್ಲೊಬ್ಬಳ್ನ ಮೆಚ್ಚಿ
ಕೈ ಹಿಡ್ದು ಕರ್ಕೊಂಡ್ಬರ್ತೀನಿ
ನಿನ್ಮು ದ್ದಿನ್ ಸೊಸೆ ಮಾಡ್ತೀನಿ
ಆಕಾಶ್ದೇವ್ರು ನಂಗೆ ಖಾಸಾ
ಚಪ್ರ ಅವ್ನೆ ಹಾಕ್ಕೊತಾನೆ
ಕಾವೇರವ್ವ ನಂಗೆ ಹತ್ರ
ರಂಗೋಲಿ ಅವ್ಳೇ ಬಿಟ್ಕೋತಾಳೆ
ಬಾಗ್ಲಲ್ ಸೇರು, ಅಕ್ಕಿ, ಬೆಲ್ಲ ಇಟ್ಟಿರು
ಕಟ್ಕೊಂಡೇ ಬರ್ತೀನಿ
ಹೇಳ್ತಿದ್ಯಲ್ಲ ಮದ್ವೆ ಮಾಡ್ಕೋ ಅಂತ
ಹುಡುಕಿ ತಂದೀಯ ಇಂತ ಹೆಣ್ಣ ??
ಹೆಂಗೈತೆ ನೋಡು ಇವ್ಳ ಬಣ್ಣ
ಸೋಲಕಿಲ್ವ ಬಿಳಿ ಸುಣ್ಣ
ಎಲ್ಲಿ ಅಪ್ಪ? ಕರಿ ನೋಡ್ಲಿ
"ನನ್ ಸೊಸೆ ಬಂಗಾರ" ಅಂತನ್ಲಿ
ಹುಡುಕಿ ತಂದೀಯ ಇಂತ ಹೆಣ್ಣ ??
ಹೆಂಗೈತೆ ನೋಡು ಇವ್ಳ ಬಣ್ಣ
ಸೋಲಕಿಲ್ವ ಬಿಳಿ ಸುಣ್ಣ
ಎಲ್ಲಿ ಅಪ್ಪ? ಕರಿ ನೋಡ್ಲಿ
"ನನ್ ಸೊಸೆ ಬಂಗಾರ" ಅಂತನ್ಲಿ
ಚಪ್ಲಿ ಸವೆಯೋ ಮಾತೇ ಇಲ್ಲ
ಇನ್ಮೇಲ್ ಕಾರಲ್ಲೇ ದರ್ಬಾರು
ನಮ್ಮೂರ್ ಪಕ್ದೂರಲ್ಲೆಲ್ಲಾ
ನಮ್ ಸಮಾಚಾರದ್ದೇ ಗುಲ್ಲು
ವರ್ಷ ತುಂಬೋ ಅಷ್ಟ್ರಲ್ ಪಾಪು
ಅವ್ನ ಮುಸುಡಿ ನಂದೇ ಡೂಪು
ಯಾಕವ್ವ ನೀರೆರ್ಚಿದ್ದು?
ಒಳ್ಳೆ ಕನ್ಸು ಬದ್ದಾಗೇನೇ
ಹೆಂಗಿದ್ಲು ಗೊತ್ತಾ ಅವ್ಳು?!!
ಮುಟ್ಟಿದ್ರಂಟೋ ಹಾಲಿನ್ ಕೆನೆ
ಆಗ್ಲೇ ಎದ್ದೆ ಅಂತ ಹೇಳು
ಇಲ್ದಿದ್ರೆ ಅಪ್ಪ ಘದರ್ತಾನೆ !!!
--ರತ್ನಸುತ
ನಮ್ ಸಮಾಚಾರದ್ದೇ ಗುಲ್ಲು
ವರ್ಷ ತುಂಬೋ ಅಷ್ಟ್ರಲ್ ಪಾಪು
ಅವ್ನ ಮುಸುಡಿ ನಂದೇ ಡೂಪು
ಯಾಕವ್ವ ನೀರೆರ್ಚಿದ್ದು?
ಒಳ್ಳೆ ಕನ್ಸು ಬದ್ದಾಗೇನೇ
ಹೆಂಗಿದ್ಲು ಗೊತ್ತಾ ಅವ್ಳು?!!
ಮುಟ್ಟಿದ್ರಂಟೋ ಹಾಲಿನ್ ಕೆನೆ
ಆಗ್ಲೇ ಎದ್ದೆ ಅಂತ ಹೇಳು
ಇಲ್ದಿದ್ರೆ ಅಪ್ಪ ಘದರ್ತಾನೆ !!!
--ರತ್ನಸುತ
ಯಾಕೆ ದೊರೆ ಇಷ್ಟು ಬೇಜಾರೂ, ನಾನೇ ಹುಡುಕುತ್ತಿದ್ದೀವಿ ನಿಮಗೆ ಹುಡುಗಿಯನ್ನ (ಮದುವೆಯಾಗಲಿಕ್ಕೆ!). ಸ್ವಲ್ಪ ತಾಮಸವಿರಲಿ ವರನೇ.... :-D
ReplyDeleteಕ್ವಾಟೆ ಕ್ವಾಟೆಗಳೇ ಮುರ್ದು ಪ್ಯಾಟೆ ಪ್ಯಾಟೆಗಳಾಗವೆ ಸಿಕ್ಕಾರು ಸಿಕ್ಕಾಳು ಚಂದುಳ್ಳೆ ಚಲುವೆ ಅಳ್ಬ್ಯಾಡ ಹಿಂಗೇ, ಹುಡ್ಕ್ತೀನಿ ಹುಡ್ಗೀಯ ನಿಂಗೆ.
ReplyDelete