ಚಂದನವನದ ಚೆಲುವೆ
ಇಗೋ ನಿನಗೆ ಮನಸ ಕೊಡುವೆ
ಬೆಳದಿಂಗಳ ಸಂತೆಯಲಿ
ಅಲೆದು ಉಡುಗೊರೆಯೊಂದ ತರುವೆ
ನಿನಗೆಂದೇ ಅರಳಿರುವ
ಹೂಗಳನೊಮ್ಮೆ
ಪರಿಗಣಿಸು
ನಿನಗಾಗೋ ಕನಸುಗಳ
ಕಾತರದಿಂದ ಪರಿಚಯಿಸು
ಕಣ್ಣಿನಲೇ ಕುಶಲೋಪರಿಯ ತಿಳಿಸು
ಬಾ ನನ್ನೊಳಗೆ ರಂಗೋಲಿಯನು ಬಿಡಿಸು
ನಕ್ಕರೆ ನೀನು ಉಕ್ಕಿತು ಜೇನು
ಸವಿಯುತ ಸವೆಯುವೆ ಸಮಯವೇ ನಿಲ್ಲು
ದಕ್ಕಿದ ಹಾಗೆ ಬಣ್ಣದ ಮೀನು
ಕದಡಿತು ಮನದೊಳಗೊಳದಲಿ ಕೇಳು
ಅಂತರವೆಲ್ಲ ಆನಂತರವಿರಲಿ
ಹತ್ತಿರ ಬಂದರೆ ನೀಡುವೆ ಮುತ್ತು
ಸಾಗರದಾಳ ಅಡಗಿದರೇನು
ಹುಡುಕಿ ಬರುವುದು ಸುಲಭದ ತುತ್ತು
ಮೌನವನು ಅನುವಾದಿಸಲು ಕಲಿಸು
ಬಾ ನನ್ನೊಳಗೆ ರಂಗೋಲಿಯನು ಬಿಡಿಸು....
ತಾರೆಗಳೆಲ್ಲ ಸಂಜೆಯ ಮೇಲೆ
ನೀನಿರೆ ಅದು ಸುಳ್ಳೆನ್ನುವೆ ನಾನು
ಎಂದಿಗೂ ಹೀಗೆ ಕೂರಲು ಸಿದ್ಧ
ನೋಡುತ ಮುದ್ದಾಗಿರೋ ಮೊಗವನ್ನು
ನಾಳೆಗೆ ಸಿಗುವ ಚಿಂತೆಯೇ ಬೇಡ
ಇಂದಿಗೆ ನಾಳೆಯ ಒಂದಾಗಿಸುವೆ
ಬಾಳಿಗೆ ನಿನ್ನ ಗೀಳನು ತುಂಬಿ
ತಾಕದ ಎತ್ತರವ ತಲುಪಿರುವೆ
ಸದ್ದಿರದೆ ಎದೆ ಬಾಗಿಲಿಗೆ ಕ್ರಮಿಸು
ಬಾ ನನ್ನೊಳಗೆ ರಂಗೋಲಿಯನು ಬಿಡಿಸು....
****ಹಾಡು****
https://soundcloud.com/bharath-m-venkataswamy/4q1fgcgspth5
No comments:
Post a Comment