**ಪಲ್ಲವಿ**
ಏನು ಬಾಸು ನಿಮ್ಮ ಪವರು
ಏನು ಬಾಸು ನಿಮ್ಮ ಪವರು
ಅಲ್ಟಿಮೇಟು ಡ್ಯಾನ್ಸರ್ರು
ಕ್ಲಾಸು, ಮಾಸು ಏನೇ ಇರ್ಲಿ
ಎಲ್ಲ ರೋಲೂ ಸೂಪರ್ರು
ಮೂನು ವಾಕು, ಬ್ಯಾಕು ಫ್ಲಿಪ್ಪು
ಸೋಮೆರ್ ಸಾಳ್ಟು ಮಾಸ್ಟರ್ರು
ಸ್ಟೈಲಿಗ್ಯಾರೂ ಸಾಟಿಯಿಲ್ಲ
ಥೇಟು ನಮ್ಮ ಅಣ್ಣಾವ್ರು
ನೇರ ಮಾತು ಎಲ್ಲ ಹೊತ್ತು, ಕಾಂಟ್ರವರ್ಸಿ ಬ್ರೇಕರ್ರು
ಸ್ಯಾಂಡಲ್ ವುಡ್ಡಿನಲ್ಲಿ ನೀವು ಗ್ಲೋರಿಯಸ್ ಚಾಪ್ಟರ್ರು....
**ಚರಣ ೧**
ಫೀಮೇಲು ಫಾಲ್ಲೋವರ್ಸಿಗೆಲ್ಲ ನೀವೇ ಡಾರ್ಲಿಂಗು
ಅಪ್ ಟು ಡೇಟ್ ಅಪ್ಪು ನೀವು ಎಲ್ಲೇ ಹೋದ್ರೂ ಶೈನಿಂಗು
ಕೋಟಿ ಕೋಟಿ ಅಭಿಮಾನಿ ಬಳಗ ಬೆಳೆಸಿಕೊಂಡಿರುವ
ಪುನೀತ ಅಂದ್ರೆ ಬೈ ಹಾರ್ಟು ಪ್ಯೂರು ಅಂತ ಮೀನಿಂಗು
ಗಾಸಿಪ್ ಇಲ್ಲ ಸಾರೀ, ಒಳ್ಳೆದಷ್ಟೇ ಸುದ್ದಿ
ಎಷ್ಟೇ ಆದ್ರೂ ನಿಮ್ದು , ತಂದೆ ಅಂಥ ಬುದ್ಧಿ
ಏನೇ ಮಾಡ್ಲಿ ನೂರಕ್ನೂರು ಡೆಡಿಕೇಟೆಡ್ ಆಸಾಮಿ
ಸೈಲೆಂಟಾಗಿ ದಾರಿ ಬಿಡಿ ಬಂತು ಮತ್ತೆ ಸುನಾಮಿ...
**ಚರಣ ೨**
ದೊಡ್ಡೋರ ಮುಂದೆ ನೀವು ತೋರೋ ಗೌರವ ಸನ್ಮಾನ
ಅಷ್ಟು ಪ್ರೀತಿ ಕೊಡ್ತೀರಲ್ಲ ಮನ್ಸೇನ್ ಆಕಾಶನಾ?
ಕಲಿ ಬೇಕು ಈ ಜನರೇಶನ್ ನಿಮ್ಮಿಂದ ನೀತಿ ಪಾಠ
ಅದ್ಕಾಗೇ ಇಷ್ಟು ಎತ್ರ ಬೆಳ್ಸಿರೋದು ನಿಮ್ಮನ
ಕವಲು ದಾರಿ ಹಿಡಿದೂ, ಗೆಲುವು ಪಡೆದ ಧೀರ
ಮಾಯಾ ಬಜಾರಿನಂಥ, ಕನಸಿಗೆ ಕೊಟ್ಟ ಸೂರ
ಸೋಲಿಲ್ಲದ ಸರದಾರ ಮುತ್ತುರಾಜ ಹೆತ್ತ ಯುವರತ್ನ
ಬನ್ನಿ ಬನ್ನಿ ಇವರ ಕೀರ್ತಿ ಎಲ್ಲ ಕಡೆಗೂ ಹಂಚೋಣ....
No comments:
Post a Comment