ಕಾರಣ ನೀಡದೆ ಏತಕೆ ಕಾಡಿದೆ
ಅಪ್ಪಣೆ ಕೇಳದೆ ಜೀವವ ಸೇರಿದೆ
ಅಂದುಕೊಂಡಿರಲಿಲ್ಲ ಆಗಬಹುದು ಹೀಗೆ
ಅಂದಹಾಗೆ ನೀನೇ ಇಷ್ಟವಾದೆ ಹೇಗೆ?
ಒಂದೊಂದೇ ಬಯಕೆ ಬಿಚ್ಚಿ ಹೇಳುವಾಗ ಮಾತು ಬಾರದೇ... (ಟನ್ ಟಾನ್ ತಡಂತಡಂ - ಗಿಟಾರ್)
ನೀನೊಂದು ಕಾವ್ಯವೆಂದು ಓದೋಕೆ ಹೋದರೆ
ಹಾಡೊಂದು ತೇಲಿ ಬಂತು ಬಾ ಕೇಳು ಹಾಡುವೆ
ನಿನ್ನಲ್ಲೇ ಲೀನವಾದ ಈ ನನ್ನ ಧ್ಯಾನಕೆ
ನೂರಾರು ಪಾತ್ರದಲ್ಲಿ ನೀನಷ್ಟೇ ಕಾಣುವೆ
ಊರಲ್ಲದೂರಲಿ ನೀ ಸಿಕ್ಕ ನಂತರ
ಬೇರೇನು ಯೋಚನೆ ಬೇರೂರಿ ನಿಂತೆನು
ಇನ್ನೊಮ್ಮೆ ಕೇಳಿ ಹೋಗು ನಿನ್ನ ಹಾಡು ನಿನ್ನೇ ಬೇಡಿದೆ.. (ಟನ್ ಟಾನ್ ತಡಂತಡಂ - ಗಿಟಾರ್)
ಚೂರಾದ ನಿನ್ನ ಬಳೆಯೇ ಮಳೆ ಬಿಲ್ಲು ಎನ್ನುವೆ
ಬಾಯಾರಿ ಬಂದೆ ಈಗ ಮಾತಾಡು ಸೋನೆಯೇ
ಕಲ್ಲನ್ನು ಕಣ್ಣಿನಲ್ಲೇ ನೀ ಕೆತ್ತಿ ಹೋಗುವೆ
ನಿನ್ನಿಷ್ಟದಂತೆ ಮಾಡು ನಾ ಕಣ್ಣು ಮುಚ್ಚುವೆ
ಆರಂಭಕ್ಕಿಂತಲೂ ಈ ವೇಳೆ ಸುಂದರ
ನಾ ಸೋತ ಹಾಗೆಯೇ ನೀ ಸೋತ ನಂತರ
ನೀನಾಡೋ ಸುಳ್ಳೂ ಕೂಡ ಹಾಯಿ ಹಾಯಾಗಿ ತಾಗಿದೆ...
(ಟನ್ ಟಾನ್ ತಡಂತಡಂ - ಗಿಟಾರ್)
****ಹಾಡು****
https://soundcloud.com/bharath-m-venkataswamy/9v4ow21qjnw2
No comments:
Post a Comment