ಕಣ್ಣು ಕಣ್ಣಿಗೆ ಏನೋ ಹೇಳಿದಂತಿವೆ
ಬಣ್ಣ ಬಣ್ಣದ ಹೂವು ನಾಚಿದಂತಿವೆ
ಸಣ್ಣದೊಂದು ಸಂಕೋಚ ಮಾತು ಮಾತಿಗೆ
ಎಚ್ಚರ ತಪ್ಪುವೆ ನಕ್ಕ ಮೋಡಿಗೆ
ತಂಪು ಗಾಳಿ ಸೀರೆಯುಟ್ಟು
ಮಾಡಿದಂತೆ ಏನೋ ಗುಟ್ಟು
ಹಿಡುಯಲು ಮುಂದಾಗಿ ಸೋಲುವೆ ಹಾಗೇ
ಹಾಡಿನಲ್ಲಿ ಪ್ರಾಸವಿಟ್ಟು
ಹಾಡುವಾಗ ಆಸೆ ಪಟ್ಟು
ನಟಿಸುವೆ ಹೀಗೇಕೆ ಕೇಳದ ಹಾಗೆ
ಹೂ ಮಳೆಯನು ನಾ ಸುರಿಸುವೆ ಎದುರಾಗುವ ವೇಳೆ
ಮೌನದ ಅನುಮೋದನೆಯನು ನೀ ನೀಡು .. ಓ...
ಕಣ್ಣು ಕಣ್ಣಿಗೆ ಏನೋ ಹೇಳಿದಂತಿವೆ
ಬಣ್ಣ ಬಣ್ಣದ ಹೂವು
ನಾಚಿದಂತಿವೆ
ಸಣ್ಣದೊಂದು ಸಂಕೋಚ ಮಾತು ಮಾತಿಗೆ
ಎಚ್ಚರ ತಪ್ಪುವೆ ನಕ್ಕ ಮೋಡಿಗೆ
ದೂರವಾಗಿ ಕಾಡಬೇಡ
ಕೈಯ್ಯ ತಪ್ಪಿ ಹೋಗಬೇಡ
ಮರೆಯದೆ ಬರಬೇಕು ಕನಸಲೂ ನೀನೇ
ನೇರವಾಗಿ ಮಾತಿನಲ್ಲಿ
ಹೇಳುವಾಗ ಪ್ರೀತಿಯನ್ನು
ಒಗಟಿನ ಪರಿಹಾಸ ವ್ಯರ್ಥವು ತಾನೆ
ತಾಕಿಸು ತುಸುವಾದರೂ ಬೆರಳಂಚನು ಓ ಬಾಲೆ
ಅಂತರವನು ಕಾದಿರಿಸುವ ಆಮೇಲೆ.. ಓ..
ಕಣ್ಣು ಕಣ್ಣಿಗೆ ಏನೋ ಹೇಳಿದಂತಿವೆ
ಬಣ್ಣ ಬಣ್ಣದ ಹೂವು
ನಾಚಿದಂತಿವೆ
ಸಣ್ಣದೊಂದು ಸಂಕೋಚ ಮಾತು ಮಾತಿಗೆ
ಎಚ್ಚರ ತಪ್ಪುವೆ ನಕ್ಕ ಮೋಡಿಗೆ
No comments:
Post a Comment