ಮೆಲ್ಲ ಮೆಲ್ಲ ಕದ್ದು ಓಡಬೇಡ ತಾಳು
ಬಳ್ಳಿಯಂತೆ ನಿನ್ನ ಹಬ್ಬುವೆನು ನಿಲ್ಲು
ಅಪ್ಪಿ ತಪ್ಪಿ ಕೂಡ ಬಿಟ್ಟಿರಲಾರೆ ಮನಸಿಗೆ ಬಾರೆಯಾ..
ಬಣ್ಣದ ಬಲೆಯನು ಬೀಸುವ ಕಣ್ಣಲಿ ಬೀಳಲೇ.. ಬೀಳಲೇ?
ಮಣ್ಣಿನ ಸೊಗಡನು ಸೂಸುವ ಚೆಲುವಿಗೆ ಸೋಲಲೇ..
ಸೋಲಲೇ?
ಒಂದೇ ಒಂದು ಸಣ್ಣ ಆಸೆ, ಸಿಗು ಬೇಗ ಹೇಳುವೆ
ಎಂದೋ ಬರೆದ ಕಾಗದವನ್ನು ಇದೋ ಈಗ ಓದುವೆ
ಮೆಲ್ಲ ಮೆಲ್ಲ ಕದ್ದು ಓಡಬೇಡ
ತಾಳು
ಬಳ್ಳಿಯಂತೆ ನಿನ್ನ ಹಬ್ಬುವೆನು ನಿಲ್ಲು
ಅಪ್ಪಿ ತಪ್ಪಿ ಕೂಡ ಬಿಟ್ಟಿರಲಾರೆ
ಮನಸಿಗೆ ಬಾರೆಯಾ..
ಮನಸಿಗೆ ಬಾರೆಯಾ..
ಬಣ್ಣದ ಬಲೆಯನು ಬೀಸುವ ಕಣ್ಣಲಿ ಬೀಳಲೇ.. ಬೀಳಲೇ?
ಮಣ್ಣಿನ
ಸೊಗಡನು
ಸೂಸುವ ಚೆಲುವಿಗೆ ಸೋಲಲೇ..
ಸೋಲಲೇ?
ಒಂದೇ ಒಂದು ಸಣ್ಣ ಆಸೆ, ಸಿಗು ಬೇಗ ಹೇಳುವೆ
ಎಂದೋ ಬರೆದ ಕಾಗದವನ್ನುಇದೋ ಈಗ ಓದುವೆ
ಮೆಲ್ಲ ಮೆಲ್ಲ ಕದ್ದು ಓಡಬೇಡ
ತಾಳು
ಬಳ್ಳಿಯಂತೆ ನಿನ್ನ ಹಬ್ಬುವೆನು ನಿಲ್ಲು
ಅಪ್ಪಿ ತಪ್ಪಿ ಕೂಡ ಬಿಟ್ಟಿರಲಾರೆ
ಮನಸಿಗೆ ಬಾರೆಯಾ..
ಮನಸಿಗೆ ಬಾರೆಯಾ..
ಹೃದಕ್ಕೆ ಸರಿಯಾಗಿ ಬಡಿಯುವುದ ಹೇಳಿ ಕೊಡು
ಮೌನಕ್ಕೂ ಕೂಡ ಚೂರು ಸಮಯವಿಡು
ಪರಿಚಯವ ಮಾಡಿಸುವೆ ಏಕಾಂಗಿ ಲೋಕವನು
ಆಗಾಗ ಬಂದು ನನ್ನ ಕಾಡುತಿರು
ಗೆರೆ ಹಾಕಿ ನಿಂತಿದೆ ಪ್ರಾಣ
ನಾನಾಗೇ ದಾಟೋ ಅನುಮಾನ
ಅದಕಾಗಿಯೇ ಪರದಾಡುತಿರುವೆನು
ಬರಲಾರೆ ಎಂದು ಹೇಳದಿರು ನೀ
ಮೆಲ್ಲ ಮೆಲ್ಲ ಕದ್ದು ಓಡಬೇಡ
ತಾಳು
ಬಳ್ಳಿಯಂತೆ ನಿನ್ನ ಹಬ್ಬುವೆನು ನಿಲ್ಲು
ಅಪ್ಪಿ ತಪ್ಪಿ ಕೂಡ ಬಿಟ್ಟಿರಲಾರೆ
ಮನಸಿಗೆ ಬಾರೆಯಾ..
ಮನಸಿಗೆ ಬಾರೆಯಾ..
ಬಣ್ಣದ ಬಲೆಯನು ಬೀಸುವ ಕಣ್ಣಲಿ ಬೀಳಲೇ.. ಬೀಳಲೇ?
ಮಣ್ಣಿನ
ಸೊಗಡನು
ಸೂಸುವ ಚೆಲುವಿಗೆ ಸೋಲಲೇ..
ಸೋಲಲೇ?
ತಂಪಾದ ಬೆಳಕಿಂದ ಉರಿವ ಕತ್ತಲು ಸರಿದು
ಕಂಡಷ್ಟೂ ದೂರ ನೀನೇ ಜೊತೆಯಂತೆ
ಇಂಪಾದ ಮಾತಲ್ಲಿ ನನ್ನನ್ನು ಉಪಚರಿಸು
ನೋವೆಲ್ಲ ಮಾಯ ಮಂಜು ಸರಿದಂತೆ
ಕಾಲಾನುಸಾರ ಈ ಪ್ರೀತಿ
ಸರ್ವಾಧಿಕಾರಿಯ ರೀತಿ
ಇದರಂತೆಯೇ ನಡೆದಾಗ ಮಾತ್ರವೇ
ಉಳಿಗಾಲ ಈ ಜೀವಕೆ ಎಂದೂ
ಮೆಲ್ಲ ಮೆಲ್ಲ ಕದ್ದು ಓಡಬೇಡ
ತಾಳು
ಬಳ್ಳಿಯಂತೆ ನಿನ್ನ ಹಬ್ಬುವೆನು ನಿಲ್ಲು
ಅಪ್ಪಿ ತಪ್ಪಿ ಕೂಡ ಬಿಟ್ಟಿರಲಾರೆ
ಮನಸಿಗೆ ಬಾರೆಯಾ..
ಮನಸಿಗೆ ಬಾರೆಯಾ..
ಮನಸಿಗೆ ಬಾರೆಯಾ,
ಮನಸಿಗೆ ಬಾರೆಯಾ
.. ಪ್ರೇಮವೇ ಓ ಪ್ರೇಮವೇ..
No comments:
Post a Comment