ಕೇಳೈಯ್ಯೋ ಕೇಳಯ್ಯ... ಕೇಳೈಯ್ಯೋ ಕೇಳಯ್ಯ...
ಕೂಡಿಟ್ಟ ಕಾಸು ಎಂದೂ ದಕ್ಕದು
ಕಾಪಿಟ್ಟ ನೀರು ಎಲ್ಲೂ ನಿಲ್ಲದು
ಬಚ್ಚಿಟ್ಟ ಬೀಜ ಮೊಳಕೆ ಬಿಟ್ಟರೆ
ಬಿತ್ತೋದ ಬಿಟ್ಟು ದಾರಿ ಕಾಣದು
ಕಿತ್ತಾಡಿದಲ್ಲೆಲ್ಲ ಕಿತ್ತಾಟ ಗೆಲ್ಲೋದು
ಬೀಸಿದಾಗ ಮಾತ್ರ ಕತ್ತಿ ಕೊಲ್ಲೋದು
ಕೇಳೈಯ್ಯೋ ಕೇಳಯ್ಯ... ಕೇಳೈಯ್ಯೋ ಕೇಳಯ್ಯ...
ಮೋಡನ ಕಟ್ಟಿ ಭೂಮಿ ಕಾಯೋದು
ಕಾಯುತ್ತ ಒಡಲು ಬಿರುಕು ಮೂಡೋದು
ಕೊಡುಗೈಯ್ಯ ಹುಣ್ಣು ಕೂಡಿಕೊಂಡರೂ
ಕನ್ನಡಿ ಕಣ್ಣು ತುಂಬಿ ಬರುವುದು
ಗಡಿಯಾರ ನಿಂತರು ಭೂಮಿ ಸುತ್ತುವುದು
ಕಗ್ಗಂಟಿಗೂ ಕೂಡ ಬಿಡುಗಡೆ ಇಹುದು
ಕೇಳೈಯ್ಯೋ ಕೇಳಯ್ಯ... ಕೇಳೈಯ್ಯೋ ಕೇಳಯ್ಯ...
ನಾಳೆ ಅನ್ನೋದು ಭರವಸೆ ನೀಡುವ ನೆರಳಿನಂತೆ
ನೆನ್ನೆ ಮೊನ್ನೆಗಳೆಲ್ಲವೂ ಅನುಭವ ಬೇರಂತೆ
ಆಳ ಹೊಕ್ಕಷ್ಟೂ ನೆಲೆಯಲ್ಲಿ ನಿಲ್ಲುವ ದೃಢತೆಯಂತೆ
ಕಾಲ
ಎಲ್ಲವ ಮುಂದಕ್ಕೇ ದೂಡೋದು ಎಂದಿನಂತೆ
ನಿದ್ದೆ ನಂತರ ಎಚ್ಚರಗೊಳ್ಳದೆ ಹೋಗುವೆಯಾ
ದೀಪ ಆರಿದ ಕೂಡಲೇ ಕತ್ತಲೆಂದುಕೊಂಡೆಯಾ?
ಕೇಳೈಯ್ಯೋ ಕೇಳಯ್ಯ... ಕೇಳೈಯ್ಯೋ ಕೇಳಯ್ಯ...
ಸೋಲನ್ನು ಒಪ್ಪಿ ತಲೆಯ ಬಾಗೋದು
ಗೆದ್ದಾಗ ಮತ್ತೆ ಎದ್ದು ನಿಲ್ಲೋದು
ಗದ್ದುಗೆ ಹಿಡಿದೋನು ಒದ್ದಾಡುತಾನೈಯ್ಯಾ
ದೇವರಿಗೂ ಕಷ್ಟ ಗೊತ್ತು ಕಣಯ್ಯಾ..
ಕೇಳೈಯ್ಯೋ ಕೇಳಯ್ಯ... ಕೇಳೈಯ್ಯೋ ಕೇಳಯ್ಯ...
ಮನಸು ಗಟ್ಟಿ ಮಾಡಿಕೊಂಡು ಎಲ್ಲವ ಎದುರಿಸುವ
ಕೊಟ್ಟ ಮಾತನ್ನು ಮೀರದ ದಿಟ್ಟತನ ಹೊಂದುವ
ತೋಳು ಚಾಚುತ್ತ ಒಬ್ಬರಿಗೊಬ್ಬರು ನೆರವಾಗುವ
ಮೇಲು ಕೀಳನ್ನು ತೊಲಗಿಸಿ ಒಗ್ಗೂಡೋ ಬಲವಾಗುವ
ನಾಡ ಕಟ್ಟುವ ಕಾರ್ಯವು ಪುಣ್ಯದ ಕಾಯಕವೇ
ಹಂಚಿ ಬಾಳುವ ಸಾಧನ ಗೆಲುವಿಗೆ ಪೂರಕೆವೇ...
ಕೇಳೈಯ್ಯೋ ಕೇಳಯ್ಯ... ಕೇಳೈಯ್ಯೋ ಕೇಳಯ್ಯ...
No comments:
Post a Comment