ಇದ್ದಂತೆ ಇದ್ದೆ ನಾನು ನೆನ್ನೆ ವರೆಗೆ
ಇದ್ದಕ್ಕಿದ್ದಂತೆ ಬಿದ್ದೆ ನಿನ್ನ ಬಲೆಗೆ
ಇಲ್ಲಿಂದ ಮುಂದೆ ಹೇಗೋ ಏನೂ ತೋಚದಾಗಿದೆ
ನಿನ್ನನ್ನು ಸೇರಿ ಈಗ ದಾರಿ ಕಾಣಬೇಕಿದೆ
ಆಸೆ ಪಟ್ಟ ಗೊಂಬೆ ಸಿಕ್ಕಿ ಅಳುವ ಕಂದ ನಕ್ಕ ಹಾಗೆ
ನಿನ್ನ ಕಂಡ ಮೇಲೆ ಜೇವ ಉಕ್ಕಿ ಬಂದಿದೆ
ಅನಿಸಿದ್ದ ಹೇಳುವೆ ನಾನು ಗುಟ್ಟು ಮಾಡದೇನೆ
ಆಲಿಸು ಬೇಗನೆ..
ಸಿಗುವೆಯಾ, ಸಿಗುವೆಯಾ, ಸಿಗುವೆಯಾ, ಒಂದಿಷ್ಟು ಮಾತನಾಡೋಣ
ಸಿಗುವೆಯಾ, ಸಿಗುವೆಯಾ, ಸಿಗುವೆಯಾ, ಒಂದೊಂದೇ ಆಸೆ ಹೇಳಬೇಕಿದೆ...
ಕದವನ್ನು ನೂಕಿ ಎದೆಯಲ್ಲಿ ಕುಳಿತವಳೇ
ಒಲವೆಂಬ ಪಾಠವ ಮಾಡೆಯಾ
ಮೊದಲಾದ ಭಾವ ವಿಪರೀತ ಆಗುತಲೇ
ನಿನಗೊಂದು ಪಾಲನು ಕೇಳೆಯಾ
ಕೊಂಚ ದೂರವಾದರೂ ಭಾರವಾದ ನೋವಲಿ
ಗೀಚಿಕೊಂಡ ಸಾಲನೆಲ್ಲ ಓದಲೆಂದು ಕಾಯುವೆನು
ಇಷ್ಟವಾದ ರಂಗನು ತೊಟ್ಟು ನಿಂತ ಬಾನನು
ನಿನ್ನ ಕೆನ್ನೆಗೋಲಿಸುತ್ತ ನಾಚುವಂತೆ ಮಾಡುವೆ
ಸಿಗುವೆಯಾ, ಸಿಗುವೆಯಾ, ಸಿಗುವೆಯಾ, ಒಂದಿಷ್ಟು ಮಾತನಾಡೋಣ
ಸಿಗುವೆಯಾ, ಸಿಗುವೆಯಾ, ಸಿಗುವೆಯಾ, ಒಂದೊಂದೇ ಆಸೆ ಹೇಳಬೇಕಿದೆ...
No comments:
Post a Comment