ಒಲವೇ, ಒಲವೇ
ನನ್ನೊಲವೆ, ನನ್ನೊಲವೆ
ಏನೋ ಅನುಮಾನ ನನ್ನ ಮೇಲೆ
ನನಗೀಗ ಮೂಡಿದೆ
ಒಲವನ್ನು ಬಿಡಿಸಿ ಹೇಳು
ಅತಿಯಾಗಿ ಕಾಡದೆ
ಮಿಗಿಲಾದೆ ಏಕೆ ಹೀಗೆ
ಸುಳಿವನ್ನೂ ನೀಡದೆ
ಒಲವೇ ನನ್ನೊಲವೆ
ನಿನ್ನಲ್ಲೇ ಪ್ರಾಣ ಇಟ್ಟೆ ಆಗಲೇ .. ಆಗಲೇ..
ಎದುರು ಬಂದಾಗ
ಮಂಜಂತೆ ಸೋತು ಕರಗಿ ಹೋಗಲೇ.. ಹೋಗಲೇ..
ನದಿಯೊಂದು ಕಡಲ ಸೇರಿ
ಕುಣಿದಂತೆ ಆಸೆಗೆ
ಅಲೆಯೊಂದು ಮೂಡಿ ಬಂದು
ದಡವನ್ನು ಸೇರಿದೆ
ಮುಗಿಲೆ ಬೆಳ್ಮುಗಿಲೇ
ಮಳೆಯನ್ನು ಹೊತ್ತು ಎಲ್ಲಿ ಸಾಗುವೆ, ಸಾಗುವೆ...
ಇನ್ನಷ್ಟು ಹಾಳೆ ಹರಿದು
ಶೃಂಗಾರ ಕಾವ್ಯ ಬರೆದು
ಮುಕ್ತಾಯವನ್ನು ನೀ ನೀಡು
ಓದಬೇಕು ನಾನು
ಕದಿಯಲು ಬರುವೆನು ಮೆಲ್ಲಗೆ
ಪರಿಚಯವಿಡು ತಲೆ ದಿಂಬಿಗೆ
ನಿದಿರೆಯ ಬೇಡಿ ತೂಕಡಿಸು
ಕನವರಿಕೆಗಳ ಪರಿಗಣಿಸು
ಓ.. ಇನ್ನೆಲ್ಲಿ ಎಚ್ಚರ ಆವರಿಸಿದಾಗ
ಕಣ್ಣಲ್ಲೇ ಉತ್ತರ ಬಾ ನೀಡು ಬೇಗ..
No comments:
Post a Comment