ನೂರು
ದಾರಿ ಒಂದುಗೂಡಿ ಏಕೆ ಸಾಗಬಾರದು?
ಊರು ನಾಡು ದೇಶ ಏಕೆ ಒಂದುಗೂಡಬಾರದು?
ನನ್ನ ನಿನ್ನ ಭಾಷೆಯಲ್ಲಿ ಪ್ರೀತಿಗುಂಟು ಅರ್ಥವು
ಯಾವ ಗಾಳಿ ಮಾತೂ ನಮ್ಮ ದೂರ ಮಾಡಲಾಗದು
ನಾವೆಲ್ಲಾ ಒಂದಾಗಿ
ಹೂದೋಟದಂತೆ ಬೀಸೋ ಗಾಳಿಯಲ್ಲಿ ತೂಗುವ
ಹೋದಲ್ಲಿ ಬಂದಲ್ಲಿ
ನಗುವನ್ನೇ ಹಂಚಿ ಸ್ನೇಹದಿಂದ ಕೂಡಿ ಬಾಳುವ
ಒಂದೇ ನೀರಿನ ಮೀನುಗಳು ನಾವು
ಈಜಬೇಕು ಎದುರು ಪ್ರವಾಹ ಬಂದರೂ
ಒಂದೇ ಸೂರಡಿ ಕನಸ ಕಂಡೆವು
ತಿದ್ದಲೇ ಬೇಕು ಅಕ್ಷರ ಏನೇ ಆದರೂ
ನಾಳೆ ಹೊಸತು ಅಧ್ಯಾಯ, ಮುಗಿದ ನೆನ್ನೆ
ಇತಿಹಾಸ
ಇಂದೇ ಇಂದೇ ಇಂದೇ ನಮ್ಮ ಪಾಲಿನ ಅವಕಾಶ
ರೆಕ್ಕೆ, ಬಿಚ್ಚಿ, ಹಾರೋವಾಗ ನಮ್ಮದೇ ಆಕಾಶ.....
ಬಣ್ಣ ರಾಚುವ ಗೋಡೆಗಳ ಮೇಲೆ
ಮೂಡೋ ರೇಖೆಯು ನಮ್ಮ ಭಾವ ಸೂಚಕ
ಮೋಡ ಮಣ್ಣಿನ ನಂಟು ಬೆಸೆವಾಗ
ಹರಿದು ಹಾಳೆಯ ದೋಣಿ ಮಾಡೋ ಕಾಯಕ
ಕಲಿಕೆ ಇಲ್ಲಿ ಆಟವೇ, ಕಲ್ಲು-ಮುಳ್ಳು ಪಾಠವೇ
ಮನೆಯೇ ನಮ್ಮ ಮೊದಲ ಶಾಲೆ, ಇಲ್ಲಿ ಎಲ್ಲ ಚಂದವೇ
ಬೆರೆತು, ಕಲಿತು, ಸಿಕ್ಕ ಅರಿವೇ ಶಿಕ್ಷಣ ಅಲ್ಲವೇ...
**ಹಾಡು**
https://soundcloud.com/bharath-m-venkataswamy/nsf9tmhmowsp
No comments:
Post a Comment