Tuesday, 12 August 2025

ಬರುವೆ ನಿನಗಾಗಿ

ಬರುವೆ ನಿನಗಾಗಿ 

ಇರುವೆ ಜೊತೆಯಾಗಿ 
ಪ್ರತಿ ಗಳಿಗೆ ಬೇಕಿದೆ ನಿನ್ನಾಸರೇ 
ನೀನದೇ ಈ ಹಾಡು 
ಹಿಡಿದು ಹೊಸ ಜಾಡು 
ನಾ ಹಾಡುವೆನು ಕೂಡಿ ಬಾ ನೀ ಆದರೆ 
ಬೆರೆತ ಮನದಲ್ಲಿ 
ಪುಟಿದಂಥ ಪ್ರೇಮ 
ಅರಿತು ಬಿಡಬೇಕು 
ಹೊಸ ಬಾಳ ನೇಮ 
ಮೊದಲ ಮಳೆಯಂತೆ 
ಮೊದಲ ಒಲವಂತೆ 
ನಿರಂತರವೇ ಕಾಡುವ ಪ್ರೇಮಾಂಕುರ..
ನಿರಂತರವೇ ಕಾಡುವ ಪ್ರೇಮಾಂಕುರ..

ಇರುವಂತೆ ಬದುಕೋರು ಸಾಮಾನ್ಯರು
ಅದರಾಚೆ ನಿಲ್ಲೋರೇ ಸಿರಿವಂತರು
ಸಿರಿಯನ್ನು ಹೊರೆಯಾಗಿ ತಿಳಿದ ಜನ
ಒಲವನ್ನು ಪಡೆವಲ್ಲಿ ಸೋತೋದರು
ಒಂದಲ್ಲ ಒಂದು ಬಾರಿ ಎಲ್ಲ ಪ್ರೀತಿಯಲ್ಲಿ ಮುಳುಗಿ ಬಂದರೆ
ಈ ಲೋಕದಲ್ಲಿ ಎಲ್ಲೂ ಕೂಡ ಪ್ರೇಮಿಗಳಿಗೆ ಇರದು ತೊಂದರೆ..
ಬೆರೆತ ಮನದಲ್ಲಿ 
ಪುಟಿದಂಥ ಪ್ರೇಮ 
ಅರಿತು ಬಿಡಬೇಕು 
ಹೊಸ ಬಾಳ ನೇಮ 
ಮೊದಲ ಮಳೆಯಂತೆ 
ಮೊದಲ ಒಲವಂತೆ 
ನಿರಂತರವೇ ಕಾಡುವ ಪ್ರೇಮಾಂಕುರ..
ನಿರಂತರವೇ ಕಾಡುವ ಪ್ರೇಮಾಂಕುರ..

ನಿನ್ನ ಮೌನ, ಸುಡೋ ಮೇಣದ ಹಾಗೆ

ನಿನ್ನ ಮೌನ, ಸುಡೋ ಮೇಣದ ಹಾಗೆ

ನಿನ್ನಾಗಮನ, ಅತಿ ಸುಂದರ ಗಳಿಗೆ
ನೀನು ಇರದೆ ಖುಷಿಯೆಂಬುದೇ ಇಲ್ಲ
ನೀನೇ ಮೊದಲು ಆನಂತರ ಎಲ್ಲ 
ಏನಾದರೂ ನೀನಿದ್ದರೆ
ಗೆಲ್ಲುವ ಉತ್ಸಾಹಿ ನಾನು
ಓ ಗೆಳೆಯ ನಾನು..
ನಿನ್ನ ಗೆಳೆಯ ನಾನು..

ಇದೇ ಕಡೆ ಇನ್ನೆಂದೂ ನೀ ನನ್ನನು
ಹೆಸರಿಟ್ಟು ಕೂಗೋದೇ ಬೇಡ
ಮಗ-ಮಗ ಅಂತಾನೇ ನಾವಿಬ್ಬರೂ
ಜಗಳಾನೇ ಆಡೋದು ಬೇಡ
ನೀನು ತಂದ ಆನಂದಕೆ
ಉಡುಗೊರೆ ನಾ ನೀಡಲೇನು?
ಓ ಗೆಳೆಯ ನಾನು ..
ನಿನ್ನ ಗೆಳೆಯ ನಾನು..

ನೀ ನನ್ನ ಮೇಲೆ ಇಟ್ಟಂಥ ನಂಬಿಕೆ
ನನ್ನ ಮೇಲೆ ನಂಗೇನೇ ಇಲ್ಲ 
ಆರಂಭದಿಂದ ಇಲ್ಲಿಯ ತನಕವೂ
ಏನೇನೂ ಬದಲಾಗೇ ಇಲ್ಲ 
ನಾ ನಿನ್ನಲಿ, ನೀ ನನ್ನಲಿ
ಗಾಜಿನಂತೆ ನಾವಿಬ್ಬರೂ
ಚೂರಾದರೂನೂ ನಾವೊಟ್ಟಿಗೇನೇ
ನೂರಾಗಿ ಮತ್ತೆ ಸೇರೋಕಿದೆ 
ಊರಿಗೂರೇ ಆಡಿಕೊಂಡು
ದೂರಿದರೂ ಕೈ ಬಿಡೆನು ನಾನು
ಓ ಗೆಳೆಯ ನಾನು..
ನಿನ್ನ ಗೆಳೆಯ ನಾನು..

ಮೊದಲೇ ಸಿಗಬೇಕಿತ್ತು

ಮೊದಲೇ ಸಿಗಬೇಕಿತ್ತು 

ಹೃದಯ ಕೊಡಬೇಕಿತ್ತು 
ಪ್ರೀತಿ ಸರಿ ತಪ್ಪುಗಳನು 
ತಿದ್ದಿ ಬಿಡಬೇಕಿತು 
ಪ್ರಾಣವೇ, ಪ್ರಾಣವೇ, ಪ್ರಾಣವೇ...
ನಿನ್ನದೇ ಗೊಂದಲ
ನಿನ್ನದೇ ಉತ್ತರ
ನಿನ್ನದೇ ದ್ಯಾನವು ಇಲ್ಲದೆ ಎಚ್ಚರ..
ಮನದೊಳಗೆ ಬಾರೆಯಾ...?

ನೀನಾದರೆ ಚೂರು

ನೀನಾದರೆ ಚೂರು

ನಾನು ಚೂರು
ಬೆಳದಿಂಗಳಾದ ಚಂದಿರ
ನೀ ಮಿಂಚುವ ಚುಕ್ಕಿ
ನಾನು ಹಕ್ಕಿ
ಆಕಾಶವಿನ್ನೂ ಸುಂದರ
ಎಚ್ಚರಿಸುವೆ ನಾನೇ
ನಿನ್ನನ್ನು ಆಗಾಗ ಮೆಲ್ಲ
ಅಕ್ಕರೆಯಿಂದ ನನ್ನ
ಆಲಂಗಿಸು ನಿಂದೇ ಎಲ್ಲ
ಎಲೆ ಉದುರಿ ಚಿಗುರೊಡೆವ ಆರಂಭವೇ
ಗರಿಗೆದರೋ ಸಡಗರವೇ ಈ ಪ್ರೇಮವೇ

ನೀ ಬಂದೆ, ನಿರಾಳ ನಾ
ಕನಸಲ್ಲಿಯೂ ಕೈ ಬಿಡೆನು
ನೀರಾಗಿ ಹರಿವಾಗ 
ನಾ ದೋಣಿ ಆಗುವೆನು
ಕನಿಕರಿಸು ಹಾ ಉಪಚರಿಸು
ಒಲವುಣಿಸಿ ನೀ ಸಹಕರಿಸು
ದಾರಿ ನಮ್ಮದಾಗಿದೆ
ಇನ್ನು ಪಯಣ ನಮ್ಮ ಪಯಣ 
ದೂರ ದೂರ ಸಾಗೋದಿದೆ...

ಕೊನೆ ಉಸಿರ ಕೇಳು

ಕೊನೆ ಉಸಿರ ಕೇಳು 

ಬಯಸುವೆನು ಅಲ್ಲೂ 
ಜೊತೆಯಾಗಿರಬೇಕೆನುವೆ 
ನೀ ಇರದೆ ಖುಷಿಯೆಲ್ಲಿದೆ?
ನಿನ್ನನ್ನು ಬಿಟ್ಟು ಬಾಳಲ್ಲಿ ಬೇರೇನಿದೆ 
ನಿನ್ನನ್ನು ಬಿಟ್ಟು ಬಾಳಲ್ಲಿ ಬೇರೇನಿದೆ 
ಈ ನನ್ನ ಜೀವ ನಿನ್ನಿಂದ ಹಾಯಾಗಿದೆ 
ನಿನ್ನನ್ನು ಬಿಟ್ಟು ಬಾಳಲ್ಲಿ ಬೇರೇನಿದೆ 
—————
ನನ್ನಲ್ಲಿ ನಿನ್ನ ಸಿರಿಯಂತೆ ಕಾಪಾಡುವೆ (೨)
ನಿನ್ನನ್ನು ಬಿಟ್ಟು ಬೇರೇನೂ ನಾ ಬೇಡದೆ
ನನ್ನಲ್ಲಿ ನಿನ್ನ ಸಿರಿಯಂತೆ ಕಾಪಾಡುವೆ 
—————

ಅನಿಸಿದೆ ಈಗ ಬದುಕಿನ ಭಾಗ 
ಬರೆದಿಡಬೇಕು ನಿನಗಾಗಿಯೇ 
ಒಲವಿನ ಸಾರಥಿ ಆಗುವೆ ನಾನು 
ಕೂರುವೆಯೇನು ಜೊತೆಯಾಗಿಯೇ 
ನಿಜವಾಗಿಯೂ ನಾ ಹೇಳುವೆ 
ನಿನ್ನಾಸೆಗಳ ನಾ ಪೂರೈಸುಲು 
ಈ ಜನ್ಮಕ್ಕೆ ಸಾಕಾಗಿದೆ…

ಎದೆಗಡಲಲ್ಲಿ ಅಲೆಗಳು ನೂರು

ಎದೆಗಡಲಲ್ಲಿ ಅಲೆಗಳು ನೂರು

ಹೇಗೆ ತಡೆಯಲಿ ನಾ?
ನಿನ್ನ, ಹೇಗೆ ಸೆಳೆಯಲಿ ನಾ?
ಮುಳುಗದ ನೌಕೆ ನಡೆಸುತ ನಾವು 
ದಡವ ಹುಡುಕೋಣ 
ಪ್ರೀತಿ ದಡವ ಹುಡುಕೋಣ 
ಹಗಲು ರಾತ್ರಿ  ದೂರ ಪಯಣ
ಒಲವೇ ಇರದೆ ತುಂಬ ಕಠಿಣ
ಕೈಯ್ಯ ಹಿಡಿದೇ ಸಾಗೋಣ..

ಮುತ್ತಿನ ಸಾಲ ನೀಡುವೆಯೇನು?
ಕಂತು ಕಂತಲಿ ತೀರಿಸುವೆ
ಖುಷಿಯ ಹನಿಯ ಹರಿಸೋ ಕಣ್ಣಿಗೆ
ಹನಿಗವಿತೆಯನು ಪೋಣಿಸುವೆ
ಈಗಲೇ ಹೀಗೆ ಆರಂಭವಿದು
ಮುಂದಿನ ತಿರುವು ಎಲ್ಲೋ ಹೇಗೋ 
ಸಾಗರದಾಚೆ, ಪ್ರೀತಿ-ಪ್ರಣಯ ಪಯಣಿಸಲಿ....

ಆಗಾಗ ನೀ ಸತಾಯಿಸು

ಆಗಾಗ ನೀ ಸತಾಯಿಸು 

ಸಮೀಪ ಬಾರದೆ 
ಬಾ ಬೇಗನೆ ಕಿಚಾಯಿಸು 
ಮಾತನ್ನೇ ಆಡದೆ 
ಆದರೆ ಉಳಿಯಲಿ 
ಪ್ರೀತಿಯು ಕಣ್ಣಿನಂಚಲಿ 
ನೆರಳು ನೆರಳನು 
ಮೋಹಿಸಿ ತಬ್ಬಿಕೊಳ್ಳಲಿ 

ಎಚ್ಚರವಿಲ್ಲ ಇಚ್ಛಿಸಿದಾಗ 
ಸ್ವಚ್ಛವೇ ಅಲ್ಲವೇ ಪ್ರೇಮಾನುರಾಗ 
ನೆಚ್ಚಿನ ಬಾಳು ರೆಕ್ಕೆಯ ಬಿಚ್ಚಾಗಿದೆ 
ಬಚ್ಚಿಟ್ಟುಕೊಂಡು ಬಿಚ್ಚಿಟ್ಟ ಆಸೆ 
ತುತ್ತಿನ ಹಾಗೆ ಮುತ್ತಿಟ್ಟ ಭಾಷೆ 
ಗುಟ್ಟಲ್ಲೂ ಕೂಡ ಎಲ್ಲವೂ ತೋಚುತ್ತಿದೆ 

ಅನಾಮಿಕ ನಾನೀಗಲೂ 
ಆ ನಿನ್ನ ಕನಸಿಗೆ 
ನೀ ತೋರದೆ ಈ ದಾರಿಯೂ 
ಸಾಗೋಕೆ ಹೇಸಿಗೆ 
ಬೆಚ್ಚನೆ ಅನುಭವ 
ನಿನ್ನ ನೆನೆಯುತ್ತಾ ಗೀಚಲು 
ಸುತ್ತಲೂ ಕಲರವ 
ನಗುವಿಗೆ ನಾನೇ ಕಾವಲು 

ನೇರವಾಗಿ ಹೇಳುತೀನಿ ನಾನು ನಿನ್ನವ

ನೇರವಾಗಿ ಹೇಳುತೀನಿ ನಾನು ನಿನ್ನವ

ಯಾರು ಏನೇ ಅಂದರೆಲ್ಲ ನೋಡಿಕೊಳ್ಳುವ
ನಿನ್ನಿಂದ ಸಾಧ್ಯವೇ ನನ್ನನು ಬಿಟ್ಟು ಬಾಳಲು
ನಾನಂತೂ ನಿನ್ನನು ಜೀವಕೆ ಹಚ್ಚಿಕೊಂಡವ

ಕಣ್ಣು ಬೇಡುತಿದೆ 
ಏನೆಂದು ಬಂದು ವಿಚಾರಿಸು
ಮೌನ ಮಾತಾಡಿದೆ
ಬಂದೊಮ್ಮೆ ನನ್ನನ್ನು ಆಲಿಸು

ನೇರವಾಗಿ ಹೇಳುತೀನಿ ನಾನು ನಿನ್ನವ
ಯಾರು ಏನೇ ಅಂದರೆಲ್ಲ ನೋಡಿಕೊಳ್ಳುವ
ಆರಂಭವಾಗಲಿ ಈಗಲೇ ಒಂದು ಕಾಳಗ
ನೀ ಕೊಲ್ಲಲೆಂದೇ ನಾ ಪ್ರಾಣವ ಊಳಿಸಿಕೊಂಡವ

ಪ್ರೀತಿಗೆ ಸೋಲು, ಸೋಲುವುದಲ್ಲ
ಸುಲಭಕೆ ತಾನು ದಕ್ಕುವುದಲ್ಲ
ದಕ್ಕಿಸಿಕೊಂಡು ಕಳೆದರೆ ಪ್ರೀತಿ
ಯಾರನೂ ಕುಡ ಕ್ಷಮಿಸುವುದಿಲ್ಲ

ಮರೆತು ಬಿಡು ಮಗನೇ

ಮರೆತು ಬಿಡು ಮಗನೇ

ಅಪ್ಪನ ಪೆಟ್ಟನ್ನು
ಮರೆಸಿಡು ತಾ ಬಿಟ್ಟ
ಬೆರಳಿನ ಅಚ್ಚನ್ನು

ಯಾರಿಗೂ ಅರ್ಥವಾಗದ ನೀನು
ನನಗೂ ಅರ್ಥವಾಗಿಲ್ಲವೆಂದರೆ
ತಪ್ಪು ನನ್ನದೇ ಕಂದ
ತಪ್ಪಾಯ್ತು ನನ್ನಿಂದ

ನಿನ್ನ ವಯಸ್ಸಿಗೆ
ಸರಿದೂಗುತ್ತಿಲ್ಲ ನನ್ನ ಜಾಣ್ಮೆ
ನಿನ್ನ ಹುಮ್ಮಸಿಗೆ
ತಾಳೆಯಾಗುತ್ತಿಲ್ಲ ನನ್ನ ತಾಳ್ಮೆ

ಯಾವ ತುಂಟತನ ನನ್ನ ಹಿಗ್ಗಿಸಿತ್ತೋ
ಅದು ತಲೆ ತಗ್ಗಿಸೀತು ಎಂದು ಭ್ರಮಿಸಿ
ನೆರೆದವರು ಎಲ್ಲಿ ಚಿವುಟುವರೋ ಎಂದು
ಎಲ್ಲಕೂ ಮುನ್ನ ನಾನೇ ಥಳಿಸಿದೆ

ನೀನಿಲ್ಲದೆ ಮನೆ ಬಿಕೋ ಅನ್ನುವುದು
ಚೀರಾಟಕೆ ಮಾತ್ರ ಏಕೆ ಸಿಟ್ಟು ಬರುವುದು?
ಲೋಪ ನನ್ನಲ್ಲೇ ಇದೆ ನಿಜ
ನೀ ನನಗೆಂದೂ ನಿಲುಕದ ಕ್ಷಿತಿಜ

ಎಲ್ಲ ನಡೆದ ಮರು ನಿಮಿಷ
ಏನೂ ಆಗಿಲ್ಲವೆಂಬಂತೆ ನನ್ನ ತಬ್ಬಿದೆ
ನನ್ನ ಅಹಂ ಪಾತಾಳಕ್ಕೆ ಕುಗ್ಗಿದೆ
ಎದೆ ಭಾರವಾಗಿ ತಗ್ಗಿದೆ

ನೀನೂ ನನ್ನಂತೆ ಒಳಗೊಳಗೇ ಚೂರಾಗಿ
ಮತ್ತೆ ಜೋಡಣೆಗೊಂಡ ಪಟವಾದೆಯಾ?
ಮೆತ್ತಿದರೆ ಸಹಜತೆಗೆ ಹತ್ತಿರವಾಗದು ನಿಜ
ವಿರೂಪದಲೂ ಸ್ವರೂಪವ ಕಂಡುಕೊಂಡೆಯಾ?

ಕನ್ನಡಿಯ ಎದುರಲ್ಲಿ ನಿಂತಾಗಲೆಲ್ಲ
ಕಣ್ಣೀರು ತರಿಸಿದ ಆ ಕರಾಳ ನೆನಪು
ಕ್ಷಮೆಯಿಲ್ಲದ ತಪ್ಪು ಆಗಿದೆ ನನ್ನಿಂದ
ಕಷ್ಟವಾದರೂ ಸರಿಯೇ, ನನಗೆ ಶಿಕ್ಷೆ ವಿಧಿಸು!

ನಿನ್ನಲ್ಲೇ ನಲ್ಲೆ

ನಿನ್ನಲ್ಲೇ ನಲ್ಲೆ

ನಾ ಸೆರೆಯಾದೆ
ಕಣ್ಣಲ್ಲೇ ನಿಲ್ಲೆ
ನಾ ಕವಿಯಾದೆ

ಮುಂದೋಡುವ ಸಮಯ
ನಮ್ಮ ಹಿಡಿತಕೆ ಸಿಗದಲ್ಲ
ಒಂದೊಂದು ಕ್ಷಣವನ್ನೂ
ಅನುಭವಿಸಲೇ ಬೇಕಲ್ಲ
ನೀ ಆಡುವ ಮಾತು
ಮನಸನ್ನು ತುಂಬಿಸಿದೆ
ಒಲವೆಂಬ ಕೊಳದಲ್ಲಿ
ಅಲೆಯನ್ನು ಎಬ್ಬಿಸಿದೆ
ಒತ್ತಾಯಿಸಿ ನನ್ನ
ನಿನ್ನೆಡೆಗೆ ದೂಡುತಿದೆ

ನಿನ್ನಲ್ಲೇ ನಲ್ಲ
ನಾ ಬೆರೆತೋದೆ
ನಾನಾರು ಎಂದೇ
ನಾ ಮರೆತೋದೆ

ನೂರಾರು ಪ್ರಶ್ನೆಗಳ
ಉತ್ತರಿಸಲು ನೀ ಬಂದೆ
ನಾ ಹೇಳುವ ಮೊದಲೇ
ನನ್ನಾಸೆ ಮನಗಂಡೆ
ಅಂಗಾಲಿನ ಬೆವರು
ಇನ್ನೂ ಹಸಿರಾಗಿರಲು
ಒದ್ದಾಟದ ನಡುವೆ
ಬಯಕೆ ಹೆಚ್ಚಾಗಿರಲು
ನೀ ನನ್ನ ಕೈ ಹಿಡಿದೆ
ನಾನಾಗ ಹಗುರಾದೆ

ನಿನ್ನಲ್ಲೇ ನಲ್ಲೆ
ನಾ ಸೆರೆಯಾದೆ
ಕಣ್ಣಲ್ಲೇ ನಿಲ್ಲೆ
ನಾ ಕವಿಯಾದೆ

ನನ್ನ ಬಾಳ ಪುಸ್ತಕಕ್ಕೆ

ನನ್ನ ಬಾಳ ಪುಸ್ತಕಕ್ಕೆ 

ನೀನೇ ಮುನ್ನುಡಿ 
ಬಿಂಬವಾಗಿ ಬೀರೋ 
ನೀನೇ ಚಂದ ಕನ್ನಡಿ 
ನೀನು ಇದ್ದಲೆಲ್ಲ 
ಲೋಕವನ್ನೇ ಮರೆವೇನು 
ನಿನ್ನ ನಗುವ ಕಂಡು 
ನಾನು ಹಿಗ್ಗಿ ನಲಿವೆನು 
ಯಾರ ಮೇಲೂ ಇಷ್ಟು
ಗಮನ ಹರಿಸಿಯಿಲ್ಲವೇ 
ಖುಷಿಯ ಮೂಲಕ್ಕೆಲ್ಲ 
ನಿನ್ನ

ಏನು ಅಂತ ನಾನು ಹೇಳೋಕಾಗೋದಿಲ್ಲ

ಏನು ಅಂತ ನಾನು 

ಹೇಳೋಕಾಗೋದಿಲ್ಲ 
ಪ್ರೀತಿ ಅನ್ನೋದು ಹೀಗೇನಾ?
ಹೋಗಿ ಬಂತು ಜೀವ 
ಮತ್ತೇರಿದಂತೆ ಭಾವ 
ಹೀಗೆಲ್ಲ ಆಗೋದೇ ಪ್ರೀತಿನಾ?
ಮನಸಾಗಿ ನಿನ್ನ ಮೇಲೆ 
ನಾ ಗೀಚಿಕೊಂಡೆ ಕವನ 
ಒಂದೊಂದು ಸಾಲಿನಲ್ಲೂ 
ಬರಿ ನಿಂದೇ ಛಾಯೆ ಮೂಡಿದೆ 
ಕಣ್ಣು ಕಣ್ಣಿನಲ್ಲೇ 
ನೂರಾರು ಮಾತು ನುಡಿದೆ 
ಅನುವಾದ ಮಾಡಿ ಹೋಗು 
ಒಗಟಲ್ಲಿ ನನ್ನನ್ನು ಕೊಲ್ಲದೆ 

ಚೆಲುವೆ ಒಮ್ಮೆ ಮಾತಾಡಿ ಹೋಗು

ಚೆಲುವೆ 

ಒಮ್ಮೆ ಮಾತಾಡಿ ಹೋಗು 
ಒಲವೇ 
ಉಸಿರ ನೀಡುತ್ತಾ ಸಾಗು 
ಮನವೇ 
ಅವಳ ಜೋರಾಗಿ ಕೂಗು 
ವರವೇ 
ಮಧುರ ಹಾಡಾಗಿ ಬಿಗು 

ಏನಿದು ಹೊಸ ಸೂಚನೆ
ಸೋಲುವೆ ಸುಖಾ ಸುಮ್ಮನೆ 
ಹೇಳಲು ನುಡಿ ಸಾಲದು 
ಹಾಗಿದೆ ಸಿಹಿ ಭಾವನೆ 
ಜೀವ ದನಿಯ ವಿಳಾಸ ನೀನು 
ಪ್ರೀತಿ ಕಲಿಸೋ ಸರಸ್ವತಿ …

ನನ್ನ ಜೀವದಿ, ನಿನ್ನ ಪಾಲಿದೆ

ನನ್ನ ಜೀವದಿ, ನಿನ್ನ ಪಾಲಿದೆ

ನೀನೇ ಇಲ್ಲದೆ, ಬಾಳು ಎಲ್ಲಿದೆ?

ಎಲ್ಲೇ ನೋಡಲಿ, ನಿಂದೇನೇ ಮುಖ 
ಏನೂ ತೋಚದೆ ಸೋಲೋದೇ ಸುಖ...

ಚಿಗುರು ಕಾಲಕೆ, ತಳಿರು ಕಾದಿದೆ
ಸವರಿ ಹೋಗೆಯಾ ಒಮ್ಮೆ ಬಂದು?
ಸುಗ್ಗಿ ಬಂದರೆ, ಸಿಗ್ಗು ಏತಕೆ?
ನಿನ್ನ ಆಸೆಯು ಈಗ ನಂದೂ...

ಮೊಗ್ಗು ಮೆಲ್ಲನೆ, ಅರಳೋ ವೇಳೆಗೆ
ಹಚ್ಚಿ ಕೂರುವ ಜೋಡಿ ದೀಪವ
ಬೆಳಕು ಎಂದಿಗೂ, ಅಲ್ಲ ರೋಚಕ
ದೀಪ ಆರಿಸಿ ಸೋಲೋದೇ ಸುಖ...

ನನ್ನ ಆಗಸದ ತುಂಬ

ನನ್ನ ಆಗಸದ ತುಂಬ

ಬರಿ ನಿನ್ನದೇ ಮುಗುಳು ನಗು
ಅರೆಗಣ್ಣನು ತೆರೆಯುವೆನು
ಹೊಂಬಣ್ಣದಿ ಮಿನು ಮಿನುಗು
ನಾ ಹುಡುಕದ ದಾರಿಯಲೂ
ನೀ ಮರೆಯದೆ ಎದುರಾಗು..

ಸ್ವರವಾಗಿಸು ಕೊರಳಿನಲಿ
ದನಿಗೂಡಿಸು ಹರುಷದಲಿ
ನೀ ತುಂಬಲು ಮೀಯುವೆ ನಾ
ಅಪರೂಪದ ಖುಷಿಗಳಲಿ
ಗರಿಗೆದರಿವೆ ತವಕಗಳು
ಬಿಡಿ ಬಿಡಿ ಹನಿಗವಿತೆಗಳು
ಡವಗುಡುತಿರೋ ಹೃದಯದಲಿ
ಅತಿಯಾಗಿವೆ ಮಿಡಿತಗಳು

ಮುಗಿಲೆತ್ತರ ಆಸೆಗಳ
ತಲುಪುತ್ತಿರೋ

ನೀ ಒಪ್ಪಿಗೆ ಸೂಚಿಸಲು

ಯಾರಿರದ ಊರಿನಲಿ

ಯಾರಿರದ ಊರಿನಲಿ 

ನಾನಿರುವೆ ನಿನಗೆ
ನೀನಿರುವೆ ನನಗೆ
ನಮ್ಮೊಳಗೆ ನಮಗೆ ಆಸರೆ 
ಮಾತಿರದ ಭಾಷೆಯಲಿ 
ಕಣ್ಣಂಚಿನಲ್ಲೇ 
ಒಲವನ್ನು ಹೇಳಿ 
ಅನುವಾದಿಸೋಣ ಆದರೆ..

ನಿನಗೇನು ಬೇಕು ಎಂಬುದ ತಿಳಿದ ಹಾಗೆ 
ಗುಟ್ಟಾಗಿ ನೆರಳ ಹಿಡಿಯುವೆ 
ಒಲವಿಂದ ನೆಟ್ಟು ಸಲುಹಿದ ಬಳ್ಳಿಯಿಂದ 
ಹೂವೆಲ್ಲ ಹೊಸೆದು ನೀಡುವೆ 
ಕಾದಿರುವೆ ಕನಸಿನಲೂ 
ನೀನಲ್ಲಿ ಬರಲು 
ಜೋಕಾಲಿ ತರಲು
ಮಗುವಾಗಿ ನಿನ್ನ ತಬ್ಬುವೆ 

ಭಯವೇಕೆ ನನ್ನ ಪ್ರಾಣವೇ ನೋಡು ಹೀಗೆ
ನಾನಿರುವೆ ಎಂದೂ ಜೊತೆಯಲಿ
ಜಗದಲ್ಲಿ ಯಾರೂ ಯಾರಿಗೂ ನೀಡದಂಥ
ಉಡುಗೊರೆ ಕೊಡಲೇ ನಗುವಲಿ
ನೀ ಮುಗಲ 
ಬೆವರ ಹನಿ
ನಾ ನೆಲದ ಬಿರುಕು
ನೀ ಬರಲು ಬದುಕು
ಹೊರತಾಗೆ ಹೇಗೆ ಉಳಿಯಲಿ...

ಕಾತರ ನಿರಂತರ

ಕಾತರ ನಿರಂತರ

ನಿನ್ನ ದಾರಿಯ ಕಾಯುವಾಗ
ಬರುವೆಯಾ ಹೇಳು ಚೂರು ಬೇಗ (೨)
ಪ್ರೀತಿಯು ನಿರಂತರ
ಸದಾ ಸೋಜಿಗ ನೀಡೋ ಯೋಗ
ಹೃದಯದಿ ಬಂದು ಸೇರು ಬೇಗ (೨)

ಏನೋ ಉಲ್ಲಾಸ ನಿನ್ನ ನೋಡಿದಾಗ

ಏನೋ ಉಲ್ಲಾಸ ನಿನ್ನ ನೋಡಿದಾಗ

ಏನೋ ಉಲ್ಲಾಸ ನಿನ್ನ ನೋಡಿದಾಗ
ನಾನು ನೀನು ಅನ್ನೋ ಮಾತೇ ಇಲ್ಲ ಈಗ
ಯಾರೂ ಕಂಡೇ ಇಲ್ಲ ನಾವು ಸೇರೋ ಜಾಗ
**************
ಓ ಗೆಳತಿಯೇ
ಓ ಗೆಳತಿಯೇ
ಓ ಗೆಳತಿಯೇ ತುಸು ಮಾತಾಡೆಯಾ?
ನೀನೆಲ್ಲೋ ಕೂತು ಅಡೋ ಪಿಸು ನುಡಿಯನ್ನು
ನಾನೆಲ್ಲೋ ಸೋತು ಕೇಳೋ ಮಾಯೆಗೆ
ನೀಡೋದು ಹೇಗೆ ನಾನು ವಿವರಣೆಯನ್ನು
ನೂರಾರು ಭಾವ ಕೂಡಿ ಬಂದ ಈ ಹಾಡಿಗೆ

ಕೇಳದೆ ಬರಲೇ ಸಮೀಪ

ಕೇಳದೆ ಬರಲೇ ಸಮೀಪ 

ಕೇಳಲಿ ನಿನಗೂ ಕಲಾಪ 
ನೊಂದ ಎದೆಯಲ್ಲೂ ಹಾಡೊಂದಿದೆ 
ಓ 
ಕಾವಲು ಇಡುವೆ ಈ ಜೀವ 
ನಿನ್ನದೇ ಎನುವ ಸ್ವಭಾವ 
ಸೋಲಲು ದಾರಿ ನೂರಾರಿದೆ
ನೀನಿಲ್ಲದ ಊರಲಿ
ಏನಾದರೂ ಆಗಲಿ
ಒಂದೂ ಕ್ಷಣ ಬಾಳೆನು ಗೊತ್ತಾಗಿದೆ
ಈ ಭಾವನೆ ಗುಟ್ಟಾಗಿದೆ...

ಮುದ್ದಾದ ಸವಿ ಸಂಜೆಯೊಂದು ಮರಳಿ
ನಮ್ಮನ್ನು ಕಂಡು ಬರಲಿ
ಒಂದಾಗಿಸೋಕೆ ಮಿಂದ ಕಣ್ಣ ಪ್ರತಿಯೊಂದು ಆಸೆಯನ್ನು
ತಡವಾಗಿ ಬಂದ ವೇಳೆ
ಹರಿದಷ್ಟೂ ಖಾಲಿ ಹಾಳೆ
ಪದಕೆ ಸಿಲುಕೋದೇ ಇಲ್ಲ ಕೊಡು ಗೀಚು ಹಾಳೆಯನ್ನು
ನಿಂತಲ್ಲಿಯೇ ನಿಲ್ಲುವ
ನಿಲ್ಲುತ್ತಲೇ ಸಾಗುವ
ಸಾಗುತ್ತಲೇ ಪ್ರೀತಿಯ ಸುತ್ತಾಗಿದೆ
ಈ ಭಾವನೆ ಗುಟ್ಟಾಗಿದೆ...

ಮುಡಿಗೆ ಮಲ್ಲಿಗೆ ಹೂವು

ಮುಡಿಗೆ ಮಲ್ಲಿಗೆ ಹೂವು 

ಪಾದಕೆ ಪಾರಿಜಾತ
ಹೀಗೆ ನೀತಿ ಬರೆದ ಬೇರು 
ಹೂಗಳ ವಿಂಗಡಿಸಿತು 
ಬಳ್ಳಿಲಿ ಉಳಿದರೆ ಏನು 
ಉದುರಿ ಬಿದ್ದರೂ ತಾನು 
ಘಮಲನು ಪಸರಿಸಿ 
ಬೇರಿನ ಆಜ್ಞೆಯ ಧಿಕ್ಕರಿಸಿತು 

ಪ್ರೀತಿ ಅಂದರೇನು?

ಪ್ರೀತಿ ಅಂದರೇನು?

ಹುಡುಕಿ ಹೊರಟೆ ನಾನು 
ಎಲ್ಲ ಭಾವ ತೀರವನ್ನೂ
ಕೇಳಿ ಬಂದ ಮೀನು
ನಿನ್ನ ಕಣ್ಣಿನಾಳದಲ್ಲಿ
ನನ್ನ ಕಂಡು ಹಿಗ್ಗಿದವನು
ನಾನಿನ್ನೂ ನಿನ್ನವನು
ನೀ ನನ್ನ ಜೀವದಣು
ನಾನು ಮತ್ತು ನೀನು
ಬೇಡ ಇನ್ನೂ ಏನೂ
ನಾನು ಮತ್ತು ಜಾನು...

ಇದ್ದ ಪ್ರಾಣವನ್ನು
ಪಣಕೆ ಇಟ್ಟ ಮೇಲೆ
ಏನೇ ಆದರೂನೂ
ದಕ್ಕ ಬೇಕು ತಾನು
ಲೆಕ್ಕ ಮಾಡಲಾಗದಷ್ಟು
ನಗುವ ಸರಕು ತಂದು
ಸುರಿದೆ ತುಂಬಿದೆದೆಯ 
ಮಿಂದು ಹೊಮ್ಮುವಂತೆ ನೀನು
ನಾನು ಮತ್ತು ನೀನು
ಬೇಡ ಇನ್ನೂ ಏನೂ
ನಾನು ಮತ್ತು ಜಾನು...

ಅರೆ ಬರೆ ಬಿರಿದ ತಾವರೆ

ಅರೆ ಬರೆ ಬಿರಿದ ತಾವರೆ 

ಇಬ್ಬನಿಗಳ ಸೆರೆಗೆ ಸಿಕ್ಕರೆ 
ಹೊಳೆ ಹೊಳೆ ಹೊಳೆದಿದೆ 
ಬಿರು ಬಿರು ಬಿಸಿಲಲಿ 
ನಗೆ ಕುಡಿಯೊಡೆಯುವ 
ಥರ ಪಕಳೆಗಳಲಿ
(ಜಾರಿದೆ ಮಡಿಲನು 
ಸೋಕಿದ ಹನಿಗಳು
ಗೀಚದೆ ಏನನೂ
ಎಲೆ ಎಲೆಯಲಿ)
ಚಿಗಿರಿದ ಪ್ರೇಮ ಅಚ್ಚರಿ
ಎದೆ ಬಡಿತಕೆ ಮೊದಲ ಸೆಂಚುರಿ
(ಮರೆಯದೆ ನೆನೆಪಿಡು
ಹೆಸರನು ಕಡೆಯಲಿ
ಗುರುತಿಗೆ ಸಿಗದಿರೆ
ಜೊತೆಗುಳಿಯಲಿ)
ಹೆಸರಿಗೆ ಹೆಸರನು
ಬೆರೆಸುವ ಕುಸುರಿಯ
ಕೆಲಸವು ನಡೆಯಲಿ
ಅಬ್ಬರದಲಿ..

ಇಡುವ ಜೊತೆ ಈ ಹೆಜ್ಜೆಯನು

ಇಡುವ ಜೊತೆ ಈ ಹೆಜ್ಜೆಯನು 

ದಾರಿ ಸಾಗಲು ಬಲು ದೂರವಿದೆ 
ಸೋತಾಗಲೇ ತಾ ಗೆಲುವಾಗುವುದು 
ಎದೆಗೊರಗಿ ಇರು ಚಡಪಡಿಸುತಿದೆ 
ಏನಾದರೂ ಮಾತಾಡುತಿರು 
ನಿನ್ನ ಮೌನ ಸತಾಯಿಸಿದೆ 
ನೀ ಬೇಕು ಅನ್ನೋ ಆಸೆಯಿದೆ 
ನೀ ಬೇಕು ಅನ್ನೋ ಆಸೆಯಿದೆ 
ಈ ಆಸೆಗೆ ಕೊನೆಗಾಣದಿದೆ 
ನೀ ಬೇಕು ಅನ್ನೋ ಆಸೆಯಿದೆ 

ನೀರಿನ ಹಂಗನು ತೊರೆದಿರುವ 
ಮೀನಿನ ಹಾಗೆ ನಾನಿರುವೆ 
ಇಚ್ಚೆಯ ಮೇರೆಗೆ ಹಾಡಿದರೂ 
ಇಂಚರವಿಲ್ಲದೆ ಚೀರಿರುವೆ 
ಸಕಲ ನಿನಗೆ ಮೀಸಲಿದೆ 
ಬಹಳ ಕಾಡೋ ವಿಷಯವಿದೆ 
ಬಿಡುವಾಗಿಸಿಕೊಂಡು ಬೆರೆಯಲು ಬಾ 
ಬದುಕನ್ನು ಬದಲಿಸಿ ಬರೆಯುವ ಬಾ 
ಬಾ ಬಾರೆ ಸಖಿ ಬಲಗಾಲಿರಿಸಿ 
ನೀ ನೀಡದೆ ಸಾವೂ ಬೇಡದಿದೆ 

ನೀ ಬೇಕು ಅನ್ನೋ ಆಸೆಯಿದೆ 
ನೀ ಬೇಕು ಅನ್ನೋ ಆಸೆಯಿದೆ 
ಈ ಆಸೆಗೆ ಕೊನೆಗಾಣದಿದೆ 
ನೀ ಬೇಕು ಅನ್ನೋ ಆಸೆಯಿದೆ

ನೀನು ಸಿಕ್ಕಿದ ಗಳಿಗೆ

ನೀನು ಸಿಕ್ಕಿದ ಗಳಿಗೆ 

ಜೀವ ಉಳಿಸೋ ಗುಳಿಗೆ 
ಇದೊಂಥರ ಭಾವನೆ 
ಹೇಳೋಕೆ ಪದವೇ ಸಾಲದೇ 
ಅನುಭವವೇ ಅತೀವ 
ಕಣ್ಣಲ್ಲಿ ಕಾಣಿಸದೇ 
ಹೊಸ ವಿಷಯ 
ನಿನ್ನನ್ನು ಕಂಡು ಮಿಂಚುತ್ತಿವೆ 
ಬೇಡೆಂದರೂ ನಾಚುತ್ತಿವೆ 
ನೀನೇ ಖುಷಿ 
ನೀನೇ ನಗು 
ನೀನೇ ಸಖಿ ಹೊಂಬೆಳಗು 

ಕಂಗೊಳಿಸುವ ಚೆಲುವೆ 
ಹಂಬಲಿಸಿದೆ ಮನವೇ 
ಈ ಗೋಜಲಿನಂತಿರೋ 
ಬದುಕಲ್ಲಿ ಸಿರಿಯಾದೆ 
ಕದ ಬಡಿಯದೆಲೆ ನುಸುಳಿ..

ಮರಳಿ ಬಂದೆನು
ಕೊರಳ ಆಲಿಸಿ 
ಹೇಳಿಬಿಡುವೆನು ಕೇಳು 
ನಿನ್ನ ರೂಪವ
ತಾಳಿದಂತಿದೆ 
ಮನದ ಕಾಮನಬಿಲ್ಲು 
ಹಗಲಲಿ ಬಿರು ಬಿಸಿಲ 
ಇರುಳಲಿ ಕವಲುಗಳ 
ಸಂಬಾಳಿಸೋ ಕಲೆ 
ಒಲಿದಂತಿದೆ ನಿನಗೆ ಸಖ 
ಒಲವಿದುವೇ ಅನಂತ…

ಏನನ್ನೂ ಹೇಳಲಾಗಲಿಲ್ಲ ನಿನಗೆ

ಏನನ್ನೂ ಹೇಳಲಾಗಲಿಲ್ಲ ನಿನಗೆ

ನೀನಾಗೇ ಎಲ್ಲ ಊಹೆ ಮಾಡಿರುವೆ
ನೂರಾರು ಕಣ್ಣ ದಾಟಿ ಕನಸಲಿ ಬಂದು
ನನ್ನನ್ನು ಭೇಟಿ ಮಾಡಿ ಹೋಗಿರುವೆ
ನಿರಂತರ ಈ ಕಾಡೋ ಪ್ರೀತಿಯ (೨)
ನಿಧಾನವಾಗಿ ಕೈಯ್ಯ ಚಾಚಿ ದೋಚಿಕೊಂಡೆಯಾ..

ನೀನೊಂದು ಮಾಯೆಯಂತೆ
ಸಿಕ್ಕಲ್ಲೇ ಮಾಯವಾದೆ
ನಾನೆಲ್ಲಿ ಹೋಗಬೆಕೋ ಮರೆತೇ ಬಿಡುವೆ
ನಾಲ್ಕಾರು ಸಾಲು ಗೀಚಿ
ಹಾಡನ್ನು ಹೇಳ ಬಂದೆ
ನೀನೇನೇ ಚಂದವೆಂದು ಸುಮ್ಮನಿರುವೆ
ಪ್ರತಿ ಸಲ, ಈ ಸೋಲೋ ಪ್ರೇಮಿಯ (೨)
ನಿಧಾನವಾಗಿ ಕೈಯ್ಯ ಚಾಚಿ ದೋಚಿಕೊಂಡೆಯಾ..

ಮಿಂಚಿನ ಕರೆಯಲಿ ಸೆಳೆದೆಯಾ ಚೆಲುವೆ

ಮಿಂಚಿನ ಕರೆಯಲಿ ಸೆಳೆದೆಯಾ ಚೆಲುವೆ

ಸೋಲದೆ ಉಳಿದರೆ ಸೋಲುವೆ ನಾ
ಹಂಬಲದೊಳಗಳಿದುಳಿದಿರೋ ಹಾಡು
ಹಾಡುವೆ ಆಲಿಸು ನಾನೀದಿನ

ನೀನಿಲ್ಲದೆ ನಾ ಬದುಕಿರಲಾರೆ
ನನ್ನೆದೆಯಲ್ಲಿದೆ ನಿನ್ನುಸಿರು
ನೆರಳಾಗಿರುವೆ ನಿನ್ನ ಖುಷಿಯಲಿ
ಇರಲಿ ಎಂದಿಗೂ ನನ್ಹೆಸರು
ಅನುಮಾನಿಸದೆ ಅನುಮೋದಿಸೆಯಾ
ಶರಣಾಗಿದೆ ಈ ಹೃದಯ... ಹ್ಮ್ಮ್

ನಿನಗಾಗಿಯೇ, ನಿನಗಾಗಿಯೇ
ಈ ಜೀವನ ನಿನಗಾಗಿಯೇ
ಸೋತಿರೋ ಈ ಗುಂಡಿಗೆ
ಹಂಬಲಿಸಿದೆ ನಿನಗಾಗಿಯೇ...

ಯಾರೊಂದಿಗೂ ಹೇಳದೆ ನಾ
ನಿನ್ನೋಂದಿಗೇ ಹೇಳ ಬಂದೆ
ನನ್ನೆದೆಯಲ್ಲಿ ಅಡಗಿರುವ ನೋವ
ನಿನ್ನನ್ನೇ ಬೇಡಿ ಸೊರಗಿಹುದು ಜೀವ
ಜೋತೆಯಾಗುವೆಯಾ ಕೊನೆಯ ವೆರೆಗೆ
ಕೊಡು ಬೇಗನೆ ಒಪ್ಪಿಗೆಯಾ... ಹ್ಮ್ಮ್

ನಿನಗಾಗಿಯೇ, ನಿನಗಾಗಿಯೇ
ಈ ಜೀವನ ನಿನಗಾಗಿಯೇ
ಸೋತಿರೋ ಈ ಗುಂಡಿಗೆ
ಹಂಬಲಿಸಿದೆ ನಿನಗಾಗಿಯೇ...

ಕಣ್ಣಂಚಲೇ ಇದ್ದು ಬೀಡು

ಕಣ್ಣಂಚಲೇ ಇದ್ದು ಬೀಡು

ಜಾರೋದು ಬೇಡ ನೀ ಕಣ್ಣ ಮರೆಗೆ
ಕನ್ನಡಿಯ ಬಿಂಬದಲೂ
ಕಾಣುವೆ ನಾನು ನಿನ ರೂಪವೇ
ಉಕ್ಕಿರೋ ಸಾಗರ
ಆಗುವೆ ನೀ ಸೇರಲು.. ಓ

ನೀ ಸಮೀಪಿಸಲು
ಶರಣಾಗುವುದೀ ಹೃದಯ ಸದಾ
ನೀ ಪ್ರವೇಶಿಸಲು
ಕುಣಿದಾಡುವುದೀ ಹೃದಯ ಸದಾ..

ಏನೋ ಹೇಳುವ ಆಸೆ ಮನದಲಿ

ಏನೋ ಹೇಳುವ ಆಸೆ ಮನದಲಿ

ಹೇಗೆ ಹೇಳಲಿ
ಏನೂ ಹೇಳದೆ ಹಾಗೇ ಉಳಿಯಲೇ
ನಿನ್ನ ಎದುರಲಿ
ನೀನೊಂದು ಚಂದ ಸೋಜಿಗ
ಅನಿಸೋದು ಏತಕೆ?
ಆನಂದ ನೀನು ಅಂದರೆ
ಅತಿಯಾಸೆ ಜೀವಕೆ...

ಬಳಿ ಬಂದು ದೂರ ನಿಂತೆ
ಹೂ ಬನದ ಕುಸುಮವೇ
ಹಳಿ ತಪ್ಪಿ ಹೋದ ಹೃದಯ
ವಿಚಲಿತ ಎದೆ ಬಡಿತವೇ
ಇಳಿ ಸಂಜೆ ತಂಪು ಗಾಳಿ
ನಿನ್ನ ಈ ಇರುವಿಕೆ
ನನ್ನುಳಿಸೋ ಚುಚ್ಚು ಮಾದ್ದು
ಆಗುವೆಯಾ ಬಾಲಿಕೆ?
ಬರಗಾಲ ಈಗ ಒಲವಿಗೆ
ಮಳೆಯಂತೆ ಸುರಿದು ಬಾ
ಉಳಿಗಾಲವಿಲ್ಲ ಪ್ರೇಮಿಗೆ
ನೀನಿರದೆ ಒಲಿದು ಬಾ...

ಈ ಊರಿನ ದಾರಿ

ಈ ಊರಿನ ದಾರಿ

ಅತಿ ವಿಶಾಲವಾಗಿದೆ
ನಾ ಹೆಜ್ಜೆಯ ಗುರುತೊಂದ
ಕದಿಯೊಕಿದೆ
ಈಗಂತೂ ಹೀಗೇ 

ನಿನ್ನೂರಿನ ಹವಾಮಾನ
ಸದಾ ತಂಪಾಗಿದೆ
ನಾನೊಂದು ಸಂಜೆ ಕದಿಯಲೇ?
ಅನ್ನೋ ಇರಾದೆ ಇದೆ
ನಿನ್ನಲ್ಲೂ ಕೂಡ ನನ್ನ ಹಾಗೆ
ಆಯಿತಾ ಹೇಗೆ?
ಈಗಂತೂ ಎಲ್ಲಕ್ಕಿಂತ ಚಂದ
ನೀ ಕಾಡೋ ಬಗೆ...
ನೀ ಕಾಡೋ ಬಗೆ
ನೀ ಕಾಡೋ ಬಗೆ
ನಾ ತಾಳಲಾರೆ, ನಿಜ
ನೀ ಕಾಡೋ ಬಗೆ

ನಿನ್ನೊಂದಿಗೇ ಇರಬೇಕಿದೆ

ನಿನ್ನೊಂದಿಗೇ ಇರಬೇಕಿದೆ

ತುಸುವಾದರೂ ನೀ ಅನುಮೋದಿಸೆಯಾ
ಯಾರೊಂದಿಗೆ ನಾ ಹೇಳಲಿ
ನಿನಗಾಗಿ ಅಡಗಿಸಿರೋ ವಿಷಯ
ಆರಂಭವೇ ಹೀಗಾದರೆ
ಮುಂದೇನೋ ಹೇಗೋ ತಿಳಿಯೆನು ನಾ...
ಅತೀವವಾದ ಸಂಕಟ
ನೀ ಬೇಕು ಅನ್ನುವ ಹಠ
ಪರೀಕ್ಷೆ ಮಾಡಿ ನೋಡಿಕೋ
ನನ್ನೆದೆಗೆ ಇನ್ನು ಸ್ವಾಗತ...

ಒಂದೇ ಸಮ ನೀ ಕಾಡುವುದೇನು
ಏನಾದರೊಂದು ಅನಬಾರದೇ?
ಬಿಟ್ಟು ಹೋದಲ್ಲಿಯೇ ಕಾದಿಹೆ ಇನ್ನೂ
ಮತ್ತೊಮ್ಮೆ ಅಲ್ಲೇ ಸಿಗಬಾರದೇ?
ಕೋಲಾಹಲ ಅತಿಯಾಗಿದೆ
ಅರಿವಾಗದೇ ನನ್ನ ಚಡಪಡಿಕೆ...

ಕಣ್ಣು ಬಿಗಿಯಾಗಿ ಮುಚ್ಚಿ

ಕಣ್ಣು ಬಿಗಿಯಾಗಿ ಮುಚ್ಚಿ

ಹೃದಯ ಹಾರಿ ಬಿಟ್ಟೆ
ನಿನ್ನ ತಲುಪುವ ಮೊದಲೇ
ನಾ ಬಣ್ಣ ಪಡೆದ ಚಿಟ್ಟೆ
ಸಣ್ಣ ನಗುವಲ್ಲಿ ನಿನ್ನ
ನನ್ನೊಳಗೆ ಬಚ್ಚಿ ಇಟ್ಟೆ
ಮತ್ತೆ ಬೆರೆಯೊಣವೆಂದು
ನಿನ್ನನ್ನು ಕಳಿಸಿಕೊಟ್ಟೆ
ಯಾವ ಸೀಮೆಯ ಹೂವು ನೀನು
ನನ್ನಾವರಿಸಿಕೊಂಡೆ
ಎಲ್ಲ ಹೇಳುವ ಆಸೆ ಆದರೆ
ಚೂರು ಉಳಿಸಿಕೊಂಡೆ

ನೀಲಿ ಕಡಲ ಅಲೆಂತೆ ಬರುವೆ

ನೀಲಿ ಕಡಲ ಅಲೆಂತೆ ಬರುವೆ

ನನಗಾಗಿ ಕಾಯುವೆಯಾ?
ದಡವಾಗಿ ಕಾಯುವೆಯಾ?

ಒಡೋ ಮುಗಿಲು ಇಳೆಗಾಗಿ ಎಂದು
ಬರುವಾಗ ಕರೆಯುವೆಯಾ?
ಹೂವಾಗಿ ಬಿರಿಯುವೆಯಾ?
ನನಗಾಗಿ ಕಾಯುವೆಯಾ?
ಒಲವೇ ನೀ ಕಾಯುವೆಯಾ?



ನಿಂತು ನಿರಾತಂಕವಾದಂತೆ ಪ್ರೀತಿ ಬಾಳಲಿ

ನಿಂತು

ನಿರಾತಂಕವಾದಂತೆ ಪ್ರೀತಿ ಬಾಳಲಿ
ಬಂತು
ಇದೋ ಜಾರಿ ಹೊರಮ್ಮಿ ಪ್ರೀತಿ ಕಣ್ಣಲಿ

ನಿಂತೆ
ತುದಿಗಾಲಿನ ಮೇಲೆ ನಿನ್ನ ನೋಡುತ
ಬಂತೇ?
ಪಿಸು ಮಾತಿನ ಸಣ್ಣ ಮಿಂಚು ಕಾಡುತ
ಜೀವವೇ ನಿನ್ನದು
ಆದರೂ ಸಾಲದು
ನೀಡಬೇಕು ಇನ್ನೇನೋ ಅನ್ನೋ ಆಸೆ ಈಗ, ನನ್ನಲಿ
ಕಾಡುವಾಗ ನೀ ಹೀಗೆ ನನ್ನ ಪಾಡು ಯಾರಲ್ಲಿ ಹೇಳಲಿ

ಒಂದೋ ಎರಡೋ ಮಾತಲ್ಲಿ ನಿನ್ನ
ಹೊಗಳೋದು ಹೇಗೆ, ಅದುವೇ ಸವಾಲು
ಎಂದೋ ಮರೆತ ಕತೆಯಂತೆ ನೀನು
ನೆನಪಾಗುವಾಗ, ತಾನೇರೋ ಅಮಲು
ನೀನು ಇರದ ಯಾವ ಜಾಗನೂ ನನ್ನದಲ್ಲ
ಮಾತು ಬರದ ಈ ಹುಂಬನ ಕವಿ ಮಾಡಿದೆಯಲ್ಲ... 

ನಿಂತೆ
ತುದಿಗಾಲಿನ ಮೇಲೆ ನಿನ್ನ ನೋಡುತ
ಬಂತೇ?
ಪಿಸು ಮಾತಿನ ಸಣ್ಣ ಮಿಂಚು ಕಾಡುತ

ಇದೆಂಥ ಮಳೆ?

ಇದೆಂಥ ಮಳೆ?

ಬಿಸಿಲಿನ ಬೆನ್ನೇರಿ 
ಮಾಯದ ಕುದುರೆ 
ಬರಿದಾದ ಬಯಲಲ್ಲಿ 
ಲಾಗ ಹಾಕಿದ ಹಾಗೆ 
ಗೆಜ್ಜೆ ಕಟ್ಟಿದ ಹಾಗೆ
ಓಡುತಿರುವಂತೆ 

ಬಾಯಾರಿದ ತರು 
ಲತೆ, ಹೂ ಬಳ್ಳಿ 
ಮೈ ಮುರಿಯದ 
ಇನ್ನೂ ಮೊಗ್ಗಲ್ಲೇ 
ಉಳಿದ ಪಕಳೆಗಳು 

ಓ ಗೆಳೆಯ ಕೆಳದೇ

ಓ ಗೆಳೆಯ ಕೆಳದೇ

ನನ್ನ ಮನದ ಕೂಗು
ಈ ಮೌನವ ಆಲಿಸಿ
ಎಲ್ಲಿಗಾದರೂ ಹೋಗು
ಹೊತ್ತಿಸಿದ ದೀಪವು ಮಂಕಾಗಿದೆ
ಬಂದೊಮ್ಮೆ ಕಿಡಿಯನು ನೀಡು
ಕಲಿಸುತ್ತ ಬೆಳಕಿನ ಹಾಡು
ಹ್ಮ್...
ಓ ಗೆಳೆಯ ಕೆಳದೇ
ನನ್ನ ಮನದ ಕೂಗು
ನಿಂತಲ್ಲೇ ನಿಂತು ನೀ
ಬೇಗ ನನ್ನವನಾಗು

ಎಲ್ಲೋ ಬಿಟ್ಟ ಹೆಜ್ಜೆ ಗುರುತ
ಇಲ್ಲಿ ಹುಡುಕುವೆ ಏತಕೆ?
ಎಲ್ಲೇ ಇರು ನೀ ಸನಿಹದಲ್ಲೇ
ಇರುವ ಹಾಗೆ ಜೀವಕೆ
ಗಡಿಯಾರಕಾದರೂ ಬೇಡವೇ
ಇಷ್ಟಾದರೂ ತಾಳ್ಮೆ?
ಗಡಿ ದಾಟಿ ಬಂದು ಕೂಡಲೇ 
ಮೋಹಿಸುವೆಯಾ ಒಮ್ಮೆ?
ಕನ್ನಡಿಯ ಬಿಂಬವು ಮಂಕಾಗಿದೆ
ಕಣ್ಣೀರ ಹಿಡಿಯುತ ನೀನು
ಒರೆಸುತ್ತ ಕೂರುವೆಯೇನು?
(ಶುಚಿ ಮಾಡಿ ಹೋಗುವೆಯೇನು?)
ಹ್ಮ್....
ಓ ಗೆಳೆಯ ಕೆಳದೇ
ನನ್ನ ಮನದ ಕೂಗು
ನಿಂತಲ್ಲೇ ನಿಂತು ನೀ
ಬೇಗ ನನ್ನವನಾಗು

ಮರುಗಬೇಕೇ ಬದುಕ ಪೂರ್ತಿ?
ನೋವಿಗೇಕೋ ನಾನೇ ಪ್ರೀತಿ
ಯಾರಿಗಾರು ಎಂದು ಯಾರೋ ಬರೆದು ಆಗಿರಲು
ನೀನೇ ನನಗೆ, ಮೊದಲ ಭೇಟಿಗೆ ಪ್ರೀತಿ ಮೂಡಿರಲು
ಕಣ್ಣಾರೆ ನೀ ನೋಡು ಇನ್ನೆಷ್ಟು ಸೊರಗಬೇಕು
ಯಾರಿರದ ಊರಲಿ
ಒಂದು ಮನೆಯ ಮಾಡಿ
ಹೂಡುವ ಬಾ ಬಾಳನು
ನೂರು ಬಣ್ಣವ ತೀಡಿ
ಹೊಂಗನಸ ಹಾಳೆಯು ಮಂಕಾಗಿದೆ
ಬಂದೊಮ್ಮೆ ಎದೆಗೆ ಒರಗು
ಉಳಿವಂತೆ ಕೊನೆಯ ವರೆಗೂ
ಹ್ಮ್....

ಹಾರಿ ಹಾರಿ ಸಿಕ್ಕ ರೆಕ್ಕೆ

ಹಾರಿ ಹಾರಿ ಸಿಕ್ಕ ರೆಕ್ಕೆ

ಹದ್ದು ಮೀರಿ ಎತ್ತರಕ್ಕೆ
ಭೂಮಿ ಆಗ ಸಣ್ಣ ಚುಕ್ಕೆ ಅರೆರೆ..
ಬಣ್ಣ ಹಚ್ಚಿ ಆಗಸಕ್ಕೆ
ಸಣ್ಣದಾಗಿ ನಾಚಿ ನಕ್ಕೆ
ಚಾಚಿಕೊಂಡೆ ನನ್ನ ತೆಕ್ಕೆ ಅರೆರೆ..
ಕಣ್ಣು ಕಣ್ಣು ಕೂಡುವಾಗ
ಮಾತಿಗೊಂದು ಅರ್ಥವೀಗ
ಗೊಂದಲಕ್ಕೆ ಇಲ್ಲ ಜಾಗ ಪ್ರೇಮದೂರಲಿ
ನೀನು ನಾನು ಎಂಬುದೀಗ
ಒಂದೇ ಅಂತ ಅನಿಸುವಾಗ
ಮೂಡಿ ಬಂದ ಚಂದ ರಾಗ ಹೇಗೆ ಹಾಡಲಿ
ಕಥೆಯನ್ನು ಹೇಳಲು, ಕೆವಿತೆಯ ಗೀಚಲು
ಯುದ್ಧವ ಸಾರಲು, ಕಾರಣವಾಯಿತು ಪ್ರೇಮವೇ
ತಪ್ಪೇನಿಲ್ಲ ಪ್ರೇಮವೇ...

ಆಕಾಶ ಅಂಗೈಲಿ ಇಡಲೇನು?
ಆಶ್ಚರ್ಯ ಇನ್ನಷ್ಟು ಪಡು ನೀನು?
ಬೆಲ್ಲಕ್ಕೆ ಮುಂದಾದ ಇರಿವೇನು 
ಮಾತಲ್ಲೇ ಕಂಡಿತ್ತು ಸಿಹಿಯನ್ನು
ಅರೆಗಣ್ಣ ಮೇಲೆ ನಿಂತಿರೋ ತುಂಟ ಸ್ವಪ್ನ ನಿನ್ನದು
ಆ ಕನಸ ಹಾದಿಯಲ್ಲಿಯೂ ದಾರಿ ತಪ್ಪಬಾರದು
ಎಷ್ಟೆಂದರೂ ಅದಕಿಂತಲೂ
ಮಿಗಿಲಾಗಿರೋ ಸಿರಿವಂತಳು... ಓ.. ನೀನೇ ಓ..

ಜೋರಾಗಿ ನಿನ್ನನ್ನು ಕೂಗುತ್ತಾ
ನಾನೆಷ್ಟೋ ಹಗುರಾದೆ ಅನಿಸೋದು
ಏನೇನೋ ಯೋಚಿಸ್ತಾ ಕೂತಾಗ
ನೀನೇಕೆ ಪ್ರತ್ಯಕ್ಷ ಆಗೋದು?
ಪರಿಣಾಮವೇನೆ ಆದರೂ ಪ್ರೀತಿ ನಮ್ಮ ದೇವರು
ಪರಿತಾಪದಾಚೆ ನಮ್ಮನು ಕಾಯುತಾವೆ ಖುಷಿಗಳು
ಒಪ್ಪಂದವು ಸಜ್ಜಾಗಿದೆ
ತಾ ಕಾದಿದೆ ರುಜುವಾತಿಗೆ.. ಓ.. ಇದೋ ಓ...

ಬರುವೆ ನಿನಗಾಗಿ

ಬರುವೆ ನಿನಗಾಗಿ  ಇರುವೆ ಜೊತೆಯಾಗಿ  ಪ್ರತಿ ಗಳಿಗೆ ಬೇಕಿದೆ ನಿನ್ನಾಸರೇ  ನೀನದೇ ಈ ಹಾಡು  ಹಿಡಿದು ಹೊಸ ಜಾಡು  ನಾ ಹಾಡುವೆನು ಕೂಡಿ ಬಾ ನೀ ಆದರೆ  ಬೆರೆತ ಮನದಲ್ಲಿ  ಪುಟಿ...