Tuesday, 12 August 2025

ನಿನ್ನ ಮೌನ, ಸುಡೋ ಮೇಣದ ಹಾಗೆ

ನಿನ್ನ ಮೌನ, ಸುಡೋ ಮೇಣದ ಹಾಗೆ

ನಿನ್ನಾಗಮನ, ಅತಿ ಸುಂದರ ಗಳಿಗೆ
ನೀನು ಇರದೆ ಖುಷಿಯೆಂಬುದೇ ಇಲ್ಲ
ನೀನೇ ಮೊದಲು ಆನಂತರ ಎಲ್ಲ 
ಏನಾದರೂ ನೀನಿದ್ದರೆ
ಗೆಲ್ಲುವ ಉತ್ಸಾಹಿ ನಾನು
ಓ ಗೆಳೆಯ ನಾನು..
ನಿನ್ನ ಗೆಳೆಯ ನಾನು..

ಇದೇ ಕಡೆ ಇನ್ನೆಂದೂ ನೀ ನನ್ನನು
ಹೆಸರಿಟ್ಟು ಕೂಗೋದೇ ಬೇಡ
ಮಗ-ಮಗ ಅಂತಾನೇ ನಾವಿಬ್ಬರೂ
ಜಗಳಾನೇ ಆಡೋದು ಬೇಡ
ನೀನು ತಂದ ಆನಂದಕೆ
ಉಡುಗೊರೆ ನಾ ನೀಡಲೇನು?
ಓ ಗೆಳೆಯ ನಾನು ..
ನಿನ್ನ ಗೆಳೆಯ ನಾನು..

ನೀ ನನ್ನ ಮೇಲೆ ಇಟ್ಟಂಥ ನಂಬಿಕೆ
ನನ್ನ ಮೇಲೆ ನಂಗೇನೇ ಇಲ್ಲ 
ಆರಂಭದಿಂದ ಇಲ್ಲಿಯ ತನಕವೂ
ಏನೇನೂ ಬದಲಾಗೇ ಇಲ್ಲ 
ನಾ ನಿನ್ನಲಿ, ನೀ ನನ್ನಲಿ
ಗಾಜಿನಂತೆ ನಾವಿಬ್ಬರೂ
ಚೂರಾದರೂನೂ ನಾವೊಟ್ಟಿಗೇನೇ
ನೂರಾಗಿ ಮತ್ತೆ ಸೇರೋಕಿದೆ 
ಊರಿಗೂರೇ ಆಡಿಕೊಂಡು
ದೂರಿದರೂ ಕೈ ಬಿಡೆನು ನಾನು
ಓ ಗೆಳೆಯ ನಾನು..
ನಿನ್ನ ಗೆಳೆಯ ನಾನು..

No comments:

Post a Comment

ಈ ಬಿರು ಬಿಸಿಲಲ್ಲೂ ಕಂಗೊಳಿಸುವೆಯಲ್ಲ

ಈ ಬಿರು ಬಿಸಿಲಲ್ಲೂ ಕಂಗೊಳಿಸುವೆಯಲ್ಲ ನೀ ಖಂಡಿತ ಈ ಗ್ರಹದವಳಲ್ಲ ನಕ್ಷತ್ರಗಳ ಊರು? ಬಂಗಾರದ ಸೂರು? ಅಷ್ಟಲ್ಲದೆ ನಿನ್ನ ಹಾಗೆ ಕಾಣುವವರಿಲ್ಲ ಆಗೋ ಆ ಹಣೆಯಲ್ಲಿ ಬೆವರು ಜಿನು...