ಯಾರಿರದ ಊರಿನಲಿ
ನಾನಿರುವೆ ನಿನಗೆ
ನೀನಿರುವೆ ನನಗೆ
ನಮ್ಮೊಳಗೆ ನಮಗೆ ಆಸರೆ
ಮಾತಿರದ ಭಾಷೆಯಲಿ
ಕಣ್ಣಂಚಿನಲ್ಲೇ
ಒಲವನ್ನು ಹೇಳಿ
ಅನುವಾದಿಸೋಣ ಆದರೆ..
ನಿನಗೇನು ಬೇಕು ಎಂಬುದ ತಿಳಿದ ಹಾಗೆ
ಗುಟ್ಟಾಗಿ ನೆರಳ ಹಿಡಿಯುವೆ
ಒಲವಿಂದ ನೆಟ್ಟು ಸಲುಹಿದ ಬಳ್ಳಿಯಿಂದ
ಹೂವೆಲ್ಲ ಹೊಸೆದು ನೀಡುವೆ
ಕಾದಿರುವೆ ಕನಸಿನಲೂ
ನೀನಲ್ಲಿ ಬರಲು
ಜೋಕಾಲಿ ತರಲು
ಮಗುವಾಗಿ ನಿನ್ನ ತಬ್ಬುವೆ
ಭಯವೇಕೆ ನನ್ನ ಪ್ರಾಣವೇ ನೋಡು ಹೀಗೆ
ನಾನಿರುವೆ ಎಂದೂ ಜೊತೆಯಲಿ
ಜಗದಲ್ಲಿ ಯಾರೂ ಯಾರಿಗೂ ನೀಡದಂಥ
ಉಡುಗೊರೆ ಕೊಡಲೇ ನಗುವಲಿ
ನೀ ಮುಗಲ
ಬೆವರ ಹನಿ
ನಾ ನೆಲದ ಬಿರುಕು
ನೀ ಬರಲು ಬದುಕು
ಹೊರತಾಗೆ ಹೇಗೆ ಉಳಿಯಲಿ...
No comments:
Post a Comment