Tuesday, 12 August 2025

ನಿನ್ನಲ್ಲೇ ನಲ್ಲೆ

ನಿನ್ನಲ್ಲೇ ನಲ್ಲೆ

ನಾ ಸೆರೆಯಾದೆ
ಕಣ್ಣಲ್ಲೇ ನಿಲ್ಲೆ
ನಾ ಕವಿಯಾದೆ

ಮುಂದೋಡುವ ಸಮಯ
ನಮ್ಮ ಹಿಡಿತಕೆ ಸಿಗದಲ್ಲ
ಒಂದೊಂದು ಕ್ಷಣವನ್ನೂ
ಅನುಭವಿಸಲೇ ಬೇಕಲ್ಲ
ನೀ ಆಡುವ ಮಾತು
ಮನಸನ್ನು ತುಂಬಿಸಿದೆ
ಒಲವೆಂಬ ಕೊಳದಲ್ಲಿ
ಅಲೆಯನ್ನು ಎಬ್ಬಿಸಿದೆ
ಒತ್ತಾಯಿಸಿ ನನ್ನ
ನಿನ್ನೆಡೆಗೆ ದೂಡುತಿದೆ

ನಿನ್ನಲ್ಲೇ ನಲ್ಲ
ನಾ ಬೆರೆತೋದೆ
ನಾನಾರು ಎಂದೇ
ನಾ ಮರೆತೋದೆ

ನೂರಾರು ಪ್ರಶ್ನೆಗಳ
ಉತ್ತರಿಸಲು ನೀ ಬಂದೆ
ನಾ ಹೇಳುವ ಮೊದಲೇ
ನನ್ನಾಸೆ ಮನಗಂಡೆ
ಅಂಗಾಲಿನ ಬೆವರು
ಇನ್ನೂ ಹಸಿರಾಗಿರಲು
ಒದ್ದಾಟದ ನಡುವೆ
ಬಯಕೆ ಹೆಚ್ಚಾಗಿರಲು
ನೀ ನನ್ನ ಕೈ ಹಿಡಿದೆ
ನಾನಾಗ ಹಗುರಾದೆ

ನಿನ್ನಲ್ಲೇ ನಲ್ಲೆ
ನಾ ಸೆರೆಯಾದೆ
ಕಣ್ಣಲ್ಲೇ ನಿಲ್ಲೆ
ನಾ ಕವಿಯಾದೆ

No comments:

Post a Comment

ಬರುವೆ ನಿನಗಾಗಿ

ಬರುವೆ ನಿನಗಾಗಿ  ಇರುವೆ ಜೊತೆಯಾಗಿ  ಪ್ರತಿ ಗಳಿಗೆ ಬೇಕಿದೆ ನಿನ್ನಾಸರೇ  ನೀನದೇ ಈ ಹಾಡು  ಹಿಡಿದು ಹೊಸ ಜಾಡು  ನಾ ಹಾಡುವೆನು ಕೂಡಿ ಬಾ ನೀ ಆದರೆ  ಬೆರೆತ ಮನದಲ್ಲಿ  ಪುಟಿ...