ಅವಳ ಕಣ್ಣಲ್ಲಿ ಹಿಟ್ಲರ್ ಪಡೆಯನ್ನ
ಒಂದೇ ಏಟಿಗೆ ದ್ವಂಸ ಮಾಡುವಷ್ಟು
ಕಿಚ್ಚು ಹಚ್ಚಿದ ಸಿಡಿ ಮದ್ದು ತುಂಬಿತ್ತು
ಬಿಡಿ ಬಿಡಿಯಾಗಿ ಅಗ್ನಿ ಕುಂಡಗಳು
ಬೆಂಕಿ ಕಿಡಿಗಳ ಉಗುಳುವುದನ್ನ ಕಂಡು
ಬೆಚ್ಚಿ ಬೀಳದೇ ಇರುವಷ್ಟು ಛಲ ಛಿದ್ರ
ಆ ನೋಟ ಬಾಣದಲ್ಲಿ ಬೆಟ್ಟವನ್ನೇ ಸೀಳಿ
ತುಂಡಾಗಿಸುವಷ್ಟು ಭಾವೋದ್ವೇಗ
ಎದ್ದೋ, ಬಿದ್ದೋ, ತಪ್ಪಿಸಿಕೊಂಡರೆ ಸಾಕಾಗಿತ್ತು
ಅತ್ತಲಿಂದಿತ್ತಲಿಗೆ ಹೊರಳಿದ ಕಣ್ಗುಡ್ಡೆ
ನೋಟದ ಬೇಲಿ ಸೀಮೆ ನೆಟ್ಟು, ಬೆಂಕಿ ಹಚ್ಚಿ
ದಾಟದಂತೆ ಕಾಣದ ಮಂಡಲ ಹಾಕಿದಂತಿತ್ತು
ವೀಕ್ಷಕ ವರ್ಗದಲ್ಲೊಬ್ಬನಾಗಿದ್ದ ನನಗೇ
ತಂತಾನೇ ಬೆವೆರು ಇಳಿದಿರಬೇಕಾದರೆ, ಪಾಪ
ಕೋಪಕ್ಕೆ ಗುರಿಯಾದ ಆತ? ದೇವರೇ ಕಾಪಾಡಲಿ!!!
ಆ ಕ್ಷಣಕೆ, ಆ ನತದೃಷ್ಟ ನನಗೆ ಕಂಡದ್ದು
ಕಬ್ಬಿಣದ ಸಲಾಕೆಗೆ ತಿವಿದು ಇದ್ದಿಲ ಉರಿಯಲ್ಲಿ
ತಿರುವಿ, ತಿರುವಿ ಸಮವಾಗಿ ಬೇಯಿಸಿದ ತಂದೂರಿನಂತೆ
ಅವಳು, ಮಾಂಸ ಬೇಯುವ ಮುನ್ನವೇ
ಕಸಿದು, ಕಿತ್ತು, ಕಚ-ಕಚ ಅಗಿದು
ಮೂಳೆ ಸಮೇತ ತಿನ್ನಲು ಸಜ್ಜಾದ ಹಸಿದ ಹೆಮ್ಮಾರಿಯಂತೆ !!
--ರತ್ನಸುತ
No comments:
Post a Comment