Thursday, 29 August 2013

ಮನದಲಿ ಒಂದು ಹಾಡು!!

ಎದೆಯಲ್ಲಿ ಎದ್ದ ಅಲೆಯಲಿ 
ಕಾಗದ, ದೋಣಿಯಾಗಲಿ 
ತೇಲಿ ತೇಲಿ ಸಾಗಲಿ 
ನಿನ್ನವರೆಗೂ ಅದು ತಲುಪಲಿ 
ಅಕ್ಷರ ಅಳಿಯದೆ ಇರಲಿ 
ನಿನ್ನ ಓದಿಗೆಲ್ಲಾ ಸಿಗಲಿ 
ಮರು ಅಲೆ ಎದ್ದ ಕೂಡಲೇ 
ಉತ್ತರ ನನ್ನ ಸೇರಲಿ 

ಕಾಯುವ ಪ್ರತಿ ಕ್ಷಣದಲ್ಲೂ 
ಸುಂದರ ಸಾಲು ಹೊರ ಹೊಮ್ಮಲಿ 
ಬರುವುದ ನೀ ಮರೆತರೂ 
ಪ್ರೇಮ ಕಾವ್ಯ ಜೊತೆಯಾಗಲಿ 
ನೆನಪಿಗೆ ನೀ ಬಾರದೇ 
ನೆನೆವುದೇ ಮರೆತ್ಹೊಗಲಿ 
ಹೇಳದ ಆಸೆಗಳೆಲ್ಲಾ 
ಒಂದೊಂದು ಸಂಪುಟವಾಗಲಿ 

ಹೆಸರಿಗೆ ನಾ ಹಾಡುವೆ 
ಆ ಹಾಡು ಪದಗಳ ಜೋಡಣೆ 
ಕೇಳಿ ನೀ ನಲಿಯುವೆ 
ಅದಕಿಂತ ಬೇಕೇ ಪ್ರೇರಣೆ 
ಕಾರಣ ಹುಡುಕುವ 
ತಗಾದೆ ಏಕೆ ಬೇಡಾಗಿದೆ 
"ಇಷ್ಟವಾದೆ" ಅಷ್ಟೇ ನೀನು 
ಬಾಳಿಗೇನು ಬೇಕಾಗಿದೆ !!

                  --ರತ್ನಸುತ 

No comments:

Post a Comment

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ  ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ  ಯಾವ ಮಾತಿಲ್ಲದೆ, ಮೌನವೇ ಸಾಗಿದೆ  ಹೋಗಿ ಬಂದು ನಿಲ್ಲಲಿಲ್ಲ  ಎಚ್ಚರಿಸಿ ಕೇಳಲಿಲ್ಲ ನನ್ನಂತ...