Friday, 20 February 2015

ಕಾಂತೆಗೊಂದುಪತ್ರ

ಇಂದು ನೀ ಬಹಳ ಚಂದ
ಎಂದಿನಂತೆ
ಅಂದು ನೀ ಮೂತಿ ಮುರಿದೆ
ಇಂದಿನಂತೇ

ಇಂದಿಗೂಬಿಟ್ಟ ಸಾಲು
ನಿನ್ನ ಕವಿತೆ
ಯಾರಿಗೂಕೊಡದ ಪಾಲು
ನಿನ್ನ ಗೀತೆ

ಪ್ರೀತಿಮೈಗಂಟು ಒಗರು
ಮರೆಸಿ ಇಟ್ಟೆ
ಹಾಳೆ ಒತ್ತಾಯ ಪಡಿಸಿ
ಬರೆದು ಕೊಟ್ಟೆ

ಕಣ್ಣ ಮುಂದಿಟ್ಟು ಕನಸು
ಕರಗಿ ಬಿಟ್ಟೆ
ನೀನು ನನ್ನನ್ನು ಸೆಳೆದ
ನವಿರು ಚಿಟ್ಟೆ

ನೋಡು ನನ್ನ ಪಾಡು
ಪೂರ್ತಿಕೆಟ್ಟೆ
ನಿನ್ನ ನಗುವನ್ನೇ ನನ್ನ
ಮನದಿ ನೆಟ್ಟೆ

ನಿನ್ನ ನೇಯುವ ಹೃದಯ
ಹುಚ್ಚುರಾಟೆ
ನಿನ್ನ ಸೇರುವೆ ನಿನಗೇ
ಕಾಣದಂತೆ

ಬೆಳಗು ಕತ್ತಲ ಮನವ
ದೀಪದಂತೆ
ತಟ್ಟಿ ಕಾಡಿಸು ನನ್ನ
ಶಾಪದಂತೆ!!

-- ರತ್ನಸುತ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...