ತೀರಾ ಆಸೆ ಆದರೆ, ಚೂರು ಹತ್ತಿರ, ಬಂದು ಸೇರುವ
ತಾನಾಗಿ ಬರುವಂತೆ ಮಳೆಯನ್ನು ಮನಸಾರೆ ಕೂಗುವ
ಕಣ್ಣಲ್ಲಿ ಕಣ್ಣಿಟ್ಟು ನವಿರಾದ ಕನಸೊಂದ ಕಾಣುವ
ನೇರ ನೇರ ನಿಲ್ಲುತ, ಮಾತೇ ಆಡದೆ, ಪ್ರೀತಿ ಮಾಡುವ
ತೀರಾ ಆಸೆ ಆದರೆ, ಚೂರು ಹತ್ತಿರ, ಬಂದು
ಸೇರುವ
ಕೋಮಲ ನಿನ್ನ ಕೈಯ್ಯನು ಹಿಡಿದೇ ತೀರುವ ಹಂಬಲ
ವೇಳೆಗೆ ಕಾಯಲಾರೆನು ತೆರೆದು ನೋಡು ಎದೆ ಬಾಗಿಲ
ನೀನಾಗಿ ಕೊಡಬೇಡ ಏನೊಂದೂ ಸುಳಿವನ್ನೂ
ನೀರಾಗಿ ಹರಿಯುತ್ತ ತಲುಪುವೆನು ನಿನ್ನನ್ನು
ನಿನ್ನ ನೋಡಿ ಕದ್ದು ಓಡಿ ಹೋದ ಚಂದ್ರ ನೋಡು
ಹುಣ್ಣಿಮೆಯ ನನ್ನ ಪಾಲಿಗಂತ ಬಿಟ್ಟು ಹೋದ
ಅದೇನೋ ಮೋಡಿ ಮಾಡಿ, ನಗೋದು ಏಕೆ ಹೀಗೆ?
ಸರಾಗವಾಗಿ ನನ್ನ ಪ್ರಾಣದಲ್ಲಿ ಸೇರಿ ಹೋದೆ
ನೇರ ನೇರ ನಿಲ್ಲುತ, ಮಾತೇ ಆಡದೆ, ಪ್ರೀತಿ ಮಾಡುವ
ತೀರಾ ಆಸೆ ಆದರೆ, ಚೂರು ಹತ್ತಿರ, ಬಂದು ಕೂರುವ
ಭೇದಿಸು ನನ್ನ ಆಸೆಯ, ನಿನ್ನನ್ನೇ ಸುತ್ತುವರಿದಂತಿವೆ
ಏರು ಬಾ ಬಾಳ ನೌಕೆಯ, ಆ ದೂರ ಕಡಲನೂ ದಾಟುವೆ
ಏನೇನೋ ಅನಿಸೋಕೆ ಶುರುವಾಗಿ ಈಗೀಗ
ನಿನ್ನನ್ನು ಬೆರೆಯೋದೇ ಅತಿಶಯದ ಸಹಯೋಗ
ಈಗ ಹೆಚ್ಚು ಏನೂ ಹೇಳಲಾರೆ ನಿನ್ನ ಮುಂದೆ
ಇನ್ನು ಮೇಲೆ ನಿನ್ನ ನನ್ನ ದಾರಿ ಎಲ್ಲ ಒಂದೇ
ಈ ಪ್ರೀತಿ ಆಗೋವಾಗ, ವಿಶೇಷ ಎಲ್ಲ ಕೂಡ
ಅದೇನು ಹೇಗೆ ಎತ್ತ ಅಂತ ನನ್ನ ಕೇಳಬೇಡ
ನೇರ ನೇರ ನಿಲ್ಲುತ, ಮಾತೇ ಆಡದೆ, ಪ್ರೀತಿ ಮಾಡುವ
ತೀರಾ ಆಸೆ ಆದರೆ, ಚೂರು ಹತ್ತಿರ, ಬಂದು
ಸೇರುವ
ತಾನಾಗಿ ಬರುವಂತೆ ಮಳೆಯನ್ನು ಮನಸಾರೆ ಕೂಗುವ
ಕಣ್ಣಲ್ಲಿ ಕಣ್ಣಿಟ್ಟು ನವಿರಾದ ಕನಸೊಂದ
ಕಾಣುವ
No comments:
Post a Comment