ಪಲ್ಲವಿ...
ಈ ಮರುಳನ ಬಾಳಿಗೆ
ಹೊಸತು ದಾರಿ ನೀ ತೋರಿದೆ
ಈ ಕವಿದ ಕನಸಲ್ಲಿಯೂ
ನಿನದೇ ಮಧುರ ಮಳೆಯಾಗಿದೆ
ಕಳೆದ ಪ್ರತಿ ಕ್ಷಣವೆಲ್ಲವೂ
ನವಿರು ನೆನಪಾದಂತಿವೆ
ಅರಳೋ ತುಟಿಯೇ ಮಾತಾಗಿದೆ
ನೀ ಕಲಿಸಿದ ಹಾಡನೇ
ಮನವು ಬಯಸುತ ಹಾಡಿದೆ
ಕರಗೋ ಹಿಮವಾಗುತ್ತಲೇ
ಬಳಿಗೆ ಹರಿದೆ ಮೆಲ್ಲಗೆ
ಚರಣ ೧
ಆರಂಭವೇ ಹೀಗೆ ಆಹ್ಲಾದವಾಗಿ
ಅನುಭಂದದ ಸವಿ ಕೈ ಬೀಸಿ ಕೂಗಿ
ನನ್ನಲ್ಲಿ ಈ ನಿನ್ನ ಸ್ವೀಕಾರವಾಗಿ
ಸಂತೋಷವು ನಮ್ಮ ಅನುಯಾಯಿಯಾಗಿ
ಬಾ ತೆರೆಯಲು ಬಾಗಿಲ
ಬೆಳಕು ಕೊಡುವ ಚೈತನ್ಯವೇ
ಬಾ ಬೆರೆಯಲು ಕೂಡಲೇ
ಒಲವ ಸೆಲೆಯ ಅಧ್ಯಾಯವೇ
ಚರಣ ೨
ತಂಗಾಳಿ ಕೂಡ ತಂಪಾದ ಹಾಗೆ
ನೀನೆಲ್ಲೇ ಕಾಲಿಟ್ಟರೂ
ಖುದ್ದಾಗಿ ನೀನೇ ನೆರವಾದ ಹಾಗೆ
ನಾನೆಲ್ಲೇ ಕಂಗೆಟ್ಟರೂ
ಆಗಾಗ ಮೂಡಲಿ ಮುನಿಸು
ಕಣ್ಣೋಟ ಸಮರವೇ ಸೊಗಸು
ನಾ ಸೋತು ಶರಣಾಗುವೆ
ನಾ ನಿನ್ನ ಸಮವಾಗುವೆ...
ಪಲ್ಲವಿ
ಈ ಮರುಳನ ಬಾಳಿಗೆ
ಹೊಸತು ದಾರಿ ನೀ ತೋರಿದೆ
ಈ ಕವಿದ ಕನಸಲ್ಲಿಯೂ
ನಿನದೇ ಮಧುರ ಮಳೆಯಾಗಿದೆ
ಕಳೆದ ಪ್ರತಿ ಕ್ಷಣವೆಲ್ಲವೂ
ನವಿರು ನೆನಪಾದಂತಿವೆ
No comments:
Post a Comment