ಮನ ಕದವನು ತೆರೆದಿಡುವಾಗ
ಹರಿದ ಬಿಸಿಲೇ
ಹಸಿ ಪದವನು ಮಾಗಿಸುವಂಥ
ಪುಟದ ಮಡಿಲೇ
ನಡೆದರೆ ರಹದಾರಿಯ ಹಿಡಿದು
ಒಡೆದ ಕವಲೇ
ಸವಿಗನಸಿಗೆ ಹಾರಲು ದೊರೆತ
ಒಲವ ಮುಗಿಲೇ
ಬಾ ನಿಗಾ ವಹಿಸು
ಎದೆಯ ಒಳಗೆ ನಿನದೇ ಪದ
ಬಾ ನಿರಾಕರಿಸು
ಒಲವಾದರೂ ಆಗದಿರೋ ಥರ
(ಈ ಹುಸಿ ಸಮರ
ಶುರುವಾಯಿತು ನನ್ನೊಳಗೆ ಇದೋ
ಈ ಹೊಸ ಹೆಸರ
ಇಡು ಎಂದಿತು)
ಹೇಳಿದ ಹಾಗೆ ತೋಚೋದೇ ಪ್ರೇಮ
ನಾ ನನ್ನನು ನಿನ್ನೊಂದಿಗೆ
ಒಂದಾಗಿಸೋ ಜೀವ ಸಂಗಮ
ನಿಲ್ಲದ ಗೊಂದಲ
ಉಲ್ಬಣ ಈ ಹಂಬಲ... ಓ..
No comments:
Post a Comment