ಯಾರಲ್ಲಿ ಹೇಳಲಿ ನಾನು ನವಿರಾದ ಅನುಭವವ
ಮನವೀಗ ಕಲಿತಿರುವಾಗ ಅನುರಾಗ ಕಲರವವ
ನೀರಾಗಿ ಹರಿವುದು ಹೃದಯ ಆ ನೋಟ ತಾಕಿದರೆ
ಏನೇನೋ ಜರಿಗಿತು ಒಳಗೆ ಬಳಿ ನೀನು ಬರುತಲಿರೆ
ಈ ಜಗವೇ ವಿಸ್ಮಯದಂತೆ ನೀ ಮಾಡಿದೆ ಜಾದು
ನೀ ತೋರುವಷ್ಟು ಪ್ರೀತಿ ಇನ್ನೆಲ್ಲೂ ಸಿಗದು
ಆ ನಿಮಿಷ, ಮರಳಿ ಮರಳಿ ನೆನಪಾಗೋ ವೇಳೆ
ಹೂಗಳಿಗೂ ಒದ್ದಾಡೋ ಸುಖವ ಹಂಚಿ ಬರಲೇನು?
ಕಾತರಿಸಿ ಬಾಗಿಲಿಗೆ ಪ್ರಾಣ ಕೊಟ್ಟು ಬಂದಿರುವೆ
ನೀ ಎದುರು ಸಿಕ್ಕಾಗ ನನ್ನ ನಾನೇ ಮರೆತೇನು
ಹಿಂದೆಲ್ಲ ಬೀಳೋ ಕನಸು ಅಪೂರ್ಣವೆನಿಸಿದೆ ಏಕೋ
ಈಗೀಗ ಅಲ್ಲೂ ನೀನಷ್ಟೇ ಆವರಿಸಿಕೊಂಡಿರುವೆ
ಸ್ವೀಕರಿಸು ಒಂದಿಷ್ಟು ಸಲುಗೆಯ ಕಣ್ಣಲ್ಲೇ ಕೊಡುವೆ
ಆದರಿಸೋ ಉಸಿರನ್ನು ನೀಡುತ ಮತ್ತೆ ಕಸಿಯುತಲಿ
ತಲ್ಲಣದ ಒಂದೊಂದು ಹೆಜ್ಜೆಯ ದಾಟಿ ಬಂದಿರುವೆ
ಅಚ್ಚರಿಯ ಒಂದಿಷ್ಟು ರಸಗಳ ಒಟ್ಟುಗೂಡುತಲಿ
ಮೊದಲೆಲ್ಲ ಜರುಗಲು ಹೀಗೆ ಮರುಳಾದ ಸಂಶಯವು
ಈಗೀಗ ಕಾರಣ ಸಿಕ್ಕು ಹಿತವಾದ ಭಾವನೆಯು
No comments:
Post a Comment