ಹೇಳಲು ಆಗದ ರೂಪವೇ ನಿನ್ನದು
ಯಾವ ಶಿಲೆಯಾದರೂ ನಾಚದೆ ಉಳಿಯದು
ಯಾವ ಕಲೆಯಾದರೂ, ಯಾವ ಕವಿಯಾದರೂ
ನಿನ್ನ ಹಿಡಿವಲ್ಲಿ ಸೋಲುತ್ತ ಶರಣಾದರು
ಕಂಡ ಕನಸಲ್ಲೂ ಏನಿಂಥ ಉನ್ಮಾದವು
ಸ್ಮೃತಿ ನೀನಾದರೆ ಎಂಥ ಆಹ್ಲಾದವು
ಮೌನವೂ ಕೂಡ ನಿನ್ನಲ್ಲಿ ಮಾಧುರ್ಯವೇ
ನೀಡದ ಒಪ್ಪಿಗೆ ಕೂಡ ಸ್ವೀಕಾರವೇ
ಸಾರುವೆ ಕಣ್ಣಲೇ ಏನೋ ಸಂದೇಶವ
ನೀಡು ಈ ಹಾಡಿಗೆ ನಿನ್ನದೇ ರೂಪವ
ಕಾಡುವ ರಾಗದ ತುಣುಕು ನೀನಲ್ಲವೇ (೨)
ಸಾಗರಿ, ಸಾಗರಿ, ಸಾಗರಿ, ಸಾಗರಿ
ನನ್ನ ಅಲೆಯಾಗಿಸು ನಿನ್ನ ಆವರಿಸುವೆ
ಸಾಗರಿ, ಸಾಗರಿ, ಸಾಗರಿ, ಸಾಗರಿ
ಕಾಡುವ ರಾಗದ ತುಣುಕು
ನೀನಲ್ಲವೇ
(೨)
ಬೀಸಿ ಹೋದೆ ಬಾಳಿನಲ್ಲಿ ಪ್ರೇಮ ಗಂಧವ
ನಿಂತು ಮಾತನಾಡು ಮೆಲ್ಲ ಹೇಳು ಎಲ್ಲವ
ಕಾಡಲಿಲ್ಲ ನಿನ್ನ ಹಾಗೆ ಯಾರೂ ನನ್ನನೂ
ಗಾಢವಾಗಿ ಪ್ರೀತಿಯಲ್ಲಿ ಸೋತು ನಿಂತೆನು
ನಗಿಸುವ ಓ ಮಾಂತ್ರಿಕ
ಜೊತೆಲಿರೆ ರೋಮಾಂಚಕ
ನಿನ್ನಲ್ಲೇ ಲೋಕ ಕಾಣುವೆ
ಬಣ್ಣದ ನೂಲಲಿ ಕಟ್ಟಿದ ಕುಸುರಿಯೇ
ಕಣ್ಣನು ಸೇರುವೆ ಮಿಂಚಿನ ಹಾಗೆಯೇ
ನಿನ್ನದೇ ರಂಗನು ಸಂಜೆಯೂ ತಾಳಿದೆ
ನಿದ್ದೆ ಕದ್ದೋಡುವೆ ಹೇಳದೆ ಕೇಳದೆ
ಮಂಜು ಕವಿದಂತೆ ನೀ ನನಗೆ ಎದುರಾದರೆ
ಮಾತಿದು ಸಾಲದು ಹೇಳುತಾ ಹೋದರೆ
ಚಿಮ್ಮಿದೆ ಸಣ್ಣ ಕಾರಂಜಿ ಮನದಾಳದಿ
ಬೇನೆಯೂ ಕೂಡ ಹಿತವಾಗಿ ಅನುರಾಗದಿ
ಸಾಗುತ ಸಾಗುತ
ದಕ್ಕುವ ಉತ್ತರ
ನಮ್ಮ ಈ ಪ್ರೇಮವು ತಾಕುವ ಎತ್ತರ
ಬದುಕಿಗೆ ಭಾವ ತುಂಬಿದ್ದು ನೀನಲ್ಲವೇ (೨)
ಸಾಗರಿ, ಸಾಗರಿ, ಸಾಗರಿ, ಸಾಗರಿ
ನನ್ನ ಅಲೆಯಾಗಿಸು ನಿನ್ನ ಆವರಿಸುವೆ
ಸಾಗರಿ, ಸಾಗರಿ, ಸಾಗರಿ, ಸಾಗರಿ
ಬದುಕಿಗೆ ಭಾವ ತುಂಬಿದ್ದು ನೀನಲ್ಲವೇ (೨)
ಮೌನದ ಸಂಚಿಕೆ ಮಾತಿಗೂ ಸುಂದರ
ಆಲಿಸು ಎದೆಯಲಿ ಮೂಡುವ ಇಂಚರ
ಮೌನದ ಸಂಚಿಕೆ ಮಾತಿಗೂ ಸುಂದರ
ಬದುಕು ಶುರುವಾಯಿತು ಪ್ರೀತಿಯ ನಂತರ (2)..
****************************** *****
ಬಣ್ಣಿಸಲಾಗದ ರೂಪವು ನಿನ್ನದು
ಯಾವ ಶಿಲೆಯಾದರೂ ನಾಚದೆ ಉಳಿಯದು
ಯಾವ ಕಲೆಯಾದರೂ, ಯಾವ ಕವಿಯಾದರೂ
ನಿನ್ನ ಹಿಡಿವಲ್ಲಿ ಸೋಲುತ್ತ ಶರಣಾದರು
ಕಂಡ ಕನಸಲ್ಲೂ ಏನಿಂಥ ಉನ್ಮಾದವು
ಸ್ಮೃತಿ ನೀನಾದರೆ ಎಂಥ ಆಹ್ಲಾದವು
ಮೌನವೂ ಕೂಡ ನಿನ್ನಲ್ಲಿ ಮಾಧುರ್ಯವೇ
ನೀಡದ ಒಪ್ಪಿಗೆ ಕೂಡ ಸ್ವೀಕಾರವೇ
ಸಾರುವೆ ಕಣ್ಣಲೇ ಏನೋ ಸಂದೇಶವ
ನೀಡು ಈ ಹಾಡಿಗೆ ನಿನ್ನದೇ ರೂಪವ
ಕಾಡುವ ರಾಗದ ತುಣುಕು ನೀನಲ್ಲವೇ
ನನ್ನ ಅಲೆಯಾಗಿಸು ನಿನ್ನ ಆವರಿಸುವೆ
ಬಣ್ಣದ ನೂಲಲಿ ಕಟ್ಟಿದ ಕುಸುರಿಯೇ
ಕಣ್ಣನು ಸೇರುವೆ ಮಿಂಚಿನ ಹಾಗೆಯೇ
ನಿನ್ನದೇ ರಂಗನು ಸಂಜೆಯೂ ತಾಳಿದೆ
ನಿದ್ದೆ ಕದ್ದೋಡುವೆ ಹೇಳದೆ ಕೇಳದೆ
ಮಂಜು ಕವಿದಂತೆ ನೀ ನನಗೆ ಎದುರಾದರೆ
ಮಾತಿದು ಸಾಲದು ಹೇಳುತಾ ಹೋದರೆ
ಚಿಮ್ಮಿದೆ ಸಣ್ಣ ಕಾರಂಜಿ ಮನದಾಳದಿ
ಬೇನೆಯೂ ಕೂಡ ಹಿತವೇ ಅನುರಾಗದಿ
ಸಾಗುತ ಸಾಗುತ ದಕ್ಕೀತೆ ಉತ್ತರ?
ನಮ್ಮ ಈ ಪ್ರೇಮವೇ ಎಲ್ಲಕೂ ಎತ್ತರ
ಬದುಕಿಗೆ ಭಾವ ತುಂಬಿದ್ದು ನೀನಲ್ಲವೇ
ನನ್ನ ಅಲೆಯಾಗಿಸು ನಿನ್ನ ಆವರಿಸುವೆ
No comments:
Post a Comment