ಹಾರಿ ಬಂದ ಕನಸೇ
ಬೀಳುವಂತೆ ಕಣ್ಣಿಗೆ
ಮೂಡಿ ಬಂದ ಕವಿತೆ
ಹಾಡುವಂತೆ ಮೆಲ್ಲಗೆ
ದೂರ ವಿಷಾದ ಇನ್ನು ನನ್ನಲಿ
ಇನ್ನೂ ಸಂತೋಷ ಒಂದೇ ಬಾಳಲಿ
ಏನೋ ಹೊಸ ಆಸೆ ಸಾರುತ್ತಲಿ
ನೂರಾರು ಅರ್ಥ ಹೊಮ್ಮಲಿ
ಬಾಳೊಂದು ಖಾಲಿ ಪುಸ್ತಕ
ತುಂಬೋದೇ ನಮ್ಮ ಕಾಯಕ
ಒಲವಲ್ಲಿ ಎಲ್ಲ ಮೋಹಕsss
ನಗುವೇ ಒಲವ ರೂಪಕ
ನಗುವ ಬದುಕೇ ಸಾರ್ಥಕ
ಹೇ .. ನೀ ಯಾರು ಎನ್ನುತ್ತಿದೆ ಕನ್ನಡಿ
ಬೆರಗಾಗುತ್ತಲೇ, ನನ್ನ ನಿಲುವ ಕಂಡು
ಯಾಕೆ ಇಷ್ಟೊಂದು ಉತ್ಸಾಹವೆನ್ನುತ್ತಿದೆ
ಮುಂದೂಡುವ ದಾರಿ ಒಮ್ಮೊಮ್ಮೆ ತಿರುವಲನ್ನು ನೀಡುತ್ತಲಿ
ಇರಬೇಕು ಹೀಗೆಯೇ ಅನಿಸೋ ಭಾವನೆ
ಮೂಡುವಾಗ ಮನದಿ
ತೆರೆದಷ್ಟೂ ಕಣ್ಣಿಗೆ ಕಾಣುವಂತ ಜಗವೇ
ಏನೋ ಸಲುಗೆ ಹಿಡಿದು
ನಿನ್ನ ಹುಡುಕಿ ಬರುವೆ
ಕಾದು ಇರು ನೀ ಅಲ್ಲೇ ಚೂರು ಗಮ್ಯವೇsss
ನಗುವೇ ಒಲವ ರೂಪಕ
ನಗುವ ಬದುಕೇ ಸಾರ್ಥಕ
ಓ.. ರಂಗೇರಿ ಹೂವೆಲ್ಲ ಸಿಂಗಾರವೇ
ಖುಷಿ ಹಂಚುತ್ತಲೇ, ಗಾಳಿ ಒಡಲ ಸೋಕಿ
ಯಾನ ಇನ್ನಷ್ಟು ಉಲ್ಲಾಸ ನೀಡುತ್ತಿದೆ
ಈ ಚಿತ್ತವ ದೋಚೋ ಚಿತ್ತಾರ ಅಚ್ಚಾಗಿದೆ ಬಾನಲಿ
ಬಿಳಿ ಮೋಡವಾದರೂ ಮಾತನಾಡಲಿ
ಖಾಲಿ ಬೊಗಸೆಯೊಡನೆ
ಕೈ ಚಾಚಬೇಕಿದೆ ಪ್ರೀತಿಯಾದ ಒಡನೆ
ಏನೋ ಸಲುಗೆ ಹಿಡಿದು
ನಿನ್ನೇ ಹುಡುಕಿ ಬರುವೆ
ಕಾದು ಇರು ನೀ ಅಲ್ಲೇ ಚೂರು ಗಮ್ಯವೇsss
ನಗುವೇ ಒಲವ ರೂಪಕ
ನಗುವ ಬದುಕೇ ಸಾರ್ಥಕ
No comments:
Post a Comment