ನಾನೇ ನೀನಾಗಿ
ನಿನ್ನಲ್ಲೀಗ ನನ್ನ ಕಾಣೋ
ಆಸೆ ಉಕ್ಕಿ ಬಂದಿದೆ
ಹೇಳೋಕೆ ಮಾತೇ ಬಾರದೆ
ಹೀಗಾದೆ ನೋಡು ಇತ್ತೀಚೆಗೆ
ನೀನೇ ಬೇಕೆಂದು
ಬಿಟ್ಟು ಹೋದಂತೆ
ಈ ಜೀವ ನಿನ್ನ ಹಿಂದೆ ಸೋಲುತ
ಈ ಪ್ರೀತಿ ಹುಚ್ಚು ಖಂಡಿತ
ಬೇರೇನೂ ಬೇಡ ಈ ಬಾಳಿಗೆ
ಹೊರಹೊಮ್ಮಿಕೊಂಡ ಈ ಹಾಡನ್ನು
ಬಲೆಯಾಗಿ ಬೀಸುತ ನಿನ್ನನ್ನು
ಸೆಳೆದುಕೊಳ್ಳೋ ಆಸೆ ನನ್ನಲ್ಲಿ
ಇನ್ನಷ್ಟು ಸನಿಹ ನಾ ಬರುವಂತೆ
ಬೆರಳಾಗಿ ಮಾಡುವೆ ನೆರಳನ್ನು
ಕಳೆದೇ ಹೋದೆ ನಿನ್ನ ಗುಂಗಲ್ಲಿ
ಇರಾದೆಯ ನಾ ಹೇಳುವೆ
ಇಶಾರೆಗೆ ನೀ ಸಿಕ್ಕರೆ
ಹೇಗಾದರೂ ಪೂರೈಸೆಯಾ ವಿನಂತಿಯ
ವಿನೂತನ ವಿಹಾರಕೆ
ವಿಶೇಷತೆ ನೀ ಇದ್ದರೆ
ವಿಚಾರಿಸು ಬೇಕಾದರೆ ಈ ಪ್ರೀತಿಯ
ನವಿರಾದ ಸಂಗತಿ ಒಂದು
ಇನ್ನೊಂದು, ಮತ್ತೊಂದು
ಸಾಗೋದೇ ತಿಳಿಯದು ಏಕೋ
ಈ ಸಮಯ ಅನ್ನೋದೆಂದೂ ಹೀಗೇನೆ .. ಓ...
ಸಂಗಾತಿಯೇ, ಸಂಗಾತಿಯೇ
ಸಂಜೀವಿನಿ ಸ್ವರೂಪಿಯೇ
ಮುದ್ದಾಡು ಬಾ ಸದ್ದಿಲ್ಲದೆ ನೀನಾಗಿಯೇ
ಕಾರಂಜಿಯು ಚಿಮ್ಮುತ್ತಿದೆ
ಕಣ್ಣಂಚಲಿ ಕಾಣುತ್ತಿದೆ
ಮುಂಗೋಪವ ನೀ ಬಿಟ್ಟು ಬಾ ಸಂಪ್ರೀತಿಯೇ
ತೆರೆದಿಟ್ಟ ಪುಸ್ತಕ ನಾನು
ನಿನ್ನೆದುರು ಎಂದೆಂದೂ
ತೋಚಿದ್ದ ಗೀಚು ನೀ ಅಲ್ಲಿ
ಬೇಕಾದ ಹಾಗೆ ತಿದ್ದು ನನ್ನನ್ನು.. ಓ...
No comments:
Post a Comment