ಗಾಢವಾದ ಪ್ರೀತಿಯಲ್ಲಿ ಬೀಳಬೇಕು ಒಮ್ಮೆ ಹಾಗೆ
ಯಾವ ತಂಟೆ ಇಲ್ಲದಂತೆ ನಿನ್ನ ತೋಳಲಿ
ರೂಢಿಯಾಗಿ ನಿನ್ನ ಹಿಂದೆ ಸಾಗಿ ಬಂದೆ ಸೋತ ಹಾಗೆ
ಬಿಂಬವಾಗಲೇನು ನಿನ್ನ ಖಾಲಿ ಕಣ್ಣಲಿ
ದೂರವೇನು ಸನಿಹವೆನು ಹೃದಯ ಮಾತಿಗಿಳಿಯುವಾಗ
ಒಂದು ಮಿಡಿತದಲ್ಲಿ ನೂರು ಭಾವ ಹೊಮ್ಮಿತು
ಪದ್ಯವೇನು ರಾಗವೇನು ಮೌನ ತಾನೇ ಹಾಡುವಾಗ
ನೋಟದಲ್ಲೇ ಪೂರ್ತಿಯಾಗಿ ಅರ್ಥವಾಯಿತು
ಒಂಟಿ ಸ್ವಪ್ನದಲ್ಲಿ ಏನೋ ಮಂಕು ಬಳಿದ ಶಂಕೆ ಮೂಡಿ
ಸತ್ವ ಹೀನ ಕನಸುಗಳನು ಗಂಟು ಕಟ್ಟುವೆ
ನೀನು ಇರದ ಸ್ವರ್ಗವಾದರೇನು ಕಿಚ್ಚು ಹಚ್ಚಿ ಬರುವೆ
ನಿನ್ನ ನೆರಳ ಪತ್ತೆ ಹಚ್ಚಿ ಧನ್ಯನಾಗುವೆ
ಕದ್ದು ನೋಡುವಾಗ ವಾರೆ ನೋಟದಲ್ಲಿ ವಾಹ್ ರೇ ವಾಹ್
ಮುದ್ದು ಬಹಳ ಮುದ್ದು ನೀನು ಹೊದ್ದು ಅಂದವ
ಹೆಚ್ಚು ಕಾಯಿಸುತ್ತಾ ಶಾಪಗ್ರಸ್ತನಾಗಿ ಬಿಡುವೆನು
ನಾನೇ
ಬೇಕೆಂದು ಆಸೆ ಹಿಡಿದು ಇಟ್ಟವ
ಇಷ್ಟು ಜರುಗಿ ಏನೂ ನಡೆಯದಂತೆ ನಟಿಸಲೆಷ್ಟು ಕಠಿಣ
ದಾರಿ ಕಾಣದಂತೆ ನಿಂತು ಬಿಡುವೆ ಸುಮ್ಮನೆ
ಲೋಕ ಮರೆತು ತಬ್ಬುವಾಗ ತಬ್ಬಿಬ್ಬು ಆಗಲೇಕೆ?
ಚಂದ್ರ, ಚುಕ್ಕಿ ದಿಟ್ಟಿಸುತ್ತ ನೋಡಲೆಮ್ಮನೇ!
ನೂರು ಮಾತು ಬಂದು ಹೋಗಿ ಚುಚ್ಚಿದಂತೆ ತೋಚಿದಾಗ
ಕೋಪವನ್ನು ಕಚ್ಚಿಯಿಟ್ಟು ಪ್ರೀತಿ ಮಾಡುವ
ಇಲ್ಲದವರು ಬಡವರೆಂದು, ಪಾಪ ಇಲ್ಲವಾಗಿ ನೊಂದು
ಚುಚ್ಚು ಮಾತನಾಡಿಯಾರು ಕ್ಷಮಿಸಿ ನೋಡುವ
ದಾರಿ ಇನ್ನೂ ದೂರ ಸಾಗಿ, ಪಯಣವೆಷ್ಟು ಸಣ್ಣದೆಂದು
ಅನಿಸುವಲ್ಲಿ ಮತ್ತೆ ಹೊರಡಿಸೋಣ ಹೊಸತನು
ನಾಳೆಗಳಿವು ಮುಳ್ಳು ಹಾದಿಯಾಗಿ ಮಾರ್ಪಡಲು ಬಹುದು
ಹೆಜ್ಜೆ ಇರಿಸುವ ಹಾಸಿ ಮಧುರ ನೆನಪನು...
https://youtu.be/036aagJd6U0
No comments:
Post a Comment