ಗರಿಯ ಬೀಸಿಕೊಂಡು
ಕನಸ ಬೆನ್ನ ಹತ್ತಿ ಹಾರಿ
ಸುಕುಮಾರಿ
ಗಿಲಕಿ ಸದ್ದಿನಂತೆ
ಎದೆಯ ಕಲಕಿ ಹೋದ ನಾರಿ
ಮದನಾರಿ
ಹೇ ಕಡೆಗಣಿಸಬೇಡವೇ
ಉಪಕರಿಸು ಈಗಲೇ
ಎದುರಾಗಿ ಬಳಿ ಸಾರಿ ಇಳಿಜಾರಿ ನನ್ನಲಿ
ಒಲವುಣಿಸು ಕೂಡಲೇ
ಮನ ತಣಿಸು ಕೋಗಿಲೆ
ಇನಿದಾದ ದನಿಯಲ್ಲಿ ನೀ ಎರಗು ತೋಳಲಿ
ಗರಿಯ ಬಿಚ್ಚಿ ನಿಂತು....
ಚಪ್ಪರವ ಸೀಳಿಕೊಂಡು
ನುಸುಳಿ ಬಂದೆ ಬಿಸಿಲಿನಂತೆ
ಸಕ್ಕರೆಯ ಪಾಕದಲ್ಲಿ
ಸಿಕ್ಕಿ ಹಾಕಿಕೊಂಡೆ ದುಂಬಿಯಂತೆ
ಹಪ್ಪಳವು ಮುರಿಯುವಂತೆ
ಚಲ್ಲಾಪಿಲ್ಲಿಆಗಿ ಹೋದೆ ನೋಡು
ಹತ್ತಿರಕೆ ಬಂದು ಮೆಲ್ಲ
ಮುದ್ದು ಮಾಡಿ ಹೋಗು ಮಗುವಿನಂತೆ
ಎಲ್ಲಿ ಎಲ್ಲಿ ನಿನ್ನ ಗಮನವು
ಸುತ್ತಿ ಬಂದು ನಿಂತೆ ಎದುರಿಗೆ
ಕಟ್ಟ ಕಡೆ
ಆಸೆಯಿದು ಕೇಳಿ ಹೋಗು ಒಮ್ಮೆ
ಆವರಿಸು ತಂಪು ಗಾಳಿಯಂತೆ
ಬೇಸರವೇ ಆಗದಂತೆ ನಿನ್ನ
ಪ್ರೀತಿಸುವೆ ಪ್ರಾಣವೆನ್ನುವಂತೆ
ಗೆದ್ದೇ ಗೆಲ್ಲುವೆ ಮನಸನು
ನೋಡುತಿರು ನೀ...
ನಿಂತೇ ನಿನ್ನೆದೆಗೊರಗುತ
ಸದ್ದು ಗಿದ್ದು ಮಾಡಬೇಡ
ಆದ ಹಾಗೆ ಏನೇನೋ
ಏನೂ ಆಗದಿದ್ದರೂನು
ಹಚ್ಚುತಾರೆ ಬಣ್ಣವನ್ನು
ನನ್ನ ನಿನ್ನ ಹೊದ್ದು ನಿಂತ
ಮಂಜು ಕರಗುತಿಲ್ಲವೇಕೆ
ಪ್ರೀತಿ ಸುಲಭ ಅನ್ನುತಾರೆ
ಅರ್ಥವಾಗುತ್ತಿಲ್ಲವೇಕೆ
No comments:
Post a Comment