ಬರುವೆ ಕದ್ದು ಮುಚ್ಚಿ
ಒಲವ ಪದ ಕಟ್ಟಿ ಹಾಡಿ
ಬಳಿಸಾರಿ
ಬೆರಳ ಕಚ್ಚಿ ನಿಲ್ಲು
ಸುರಿವೆ ಮೋಡ ಬಿಟ್ಟು ಹಾರಿ
ಇಳಿಜಾರಿ
ಬಾ ಜೊತೆಗೂಡಿ ಹಾಡುವ
ಕತೆಯಾಗಿ ಬಾಳುವ
ಅತಿಯಾದ ಒಲವಲ್ಲಿ
ಶರಣಾಗಿ ಹೋಗುವ
ಶುರುವಾದ ಹಾಗಿದೆ
ಹೊಸ ದಾರಿ ಈ ದಿನ
ಸರಿಯಾದ ಹೆಸರೊಂದ
ಇರಿಸುತ್ತ ಸಾಗುವ
ಬರುವೆ ಕದ್ದು ಮುಚ್ಚಿ
ಕತ್ತಲಲಿ ಉರಿಸಿಕೊಂಡ ಹಣತೆಯಲ್ಲಿ
ಬೆಳಕು ನೀನೇ
ಸಕ್ಕರೆಯ ಸಿಹಿಯ ಕೂಡ ಮೀರಬಲ್ಲ
ಕಾಡು ಜೇನೇ
ಹತ್ತಿರಕೆ ಬೇಕು ನೀನು ಇಲ್ಲದಿರಲು
ಹೃದಯ ಬೇನೆ
ಎಲ್ಲದಕ್ಕೂ ಆದಿ-ಅಂತ್ಯ ಹಾಡುವವಳು
ನೀನೇ ತಾನೆ
ಎಲ್ಲಿ ಎಲ್ಲಿ ನಿನ್ನ ಗಮನವು
ಉತ್ತರಿಸು ಬಿಟ್ಟು ಬಿಂಕವನು
ಕಟ್ಟ ಕಡೆ
ಆಸೆಯಿದು ಕೇಳಿ ಹೋಗು ಒಮ್ಮೆ
ಆವರಿಸು ತಂಪು ಗಾಳಿಯಂತೆ
ಬೇಸರವೇ ಆಗಲಾರದಂತೆ
ಪ್ರೀತಿಸುವೆ ಪ್ರಾಣ ನೀಡುವಂತೆ
ತ್ರಾಸು ಆಗಿಸಲೇ ಬ್ಯಾಡಲೇ
ಸುರ ಸಖಿಯೇ..
No comments:
Post a Comment